ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

Public TV
1 Min Read

ಉಡುಪಿ: ಕೊಲ್ಲೂರು ಮೂಕಾಂಬಿಕೆ (Kollur Mookambika) ತಾಯಿಗೆ ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಅವರು 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟವನ್ನು (Diamond crown) ಅರ್ಪಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿರುವ ಇಳಯರಾಜ (Ilaiyaraaja) ಅವರು, ಈ ಹಿಂದೆಯೂ ಮೂಕಾಂಬಿಕೆ ದೇವಿಗೆ ಬಗೆಬಗೆಯ ಆಭರಣ ನೀಡಿ ಭಕ್ತಿ ತೋರಿದ್ದರು. ಈ ಬಾರಿ ದೇವಿಗೆ ವಜ್ರದ ಕಿರೀಟ ಸಹಿತ ಆಭರಣಗಳನ್ನು ಅರ್ಪಿಸಿದ್ದಾರೆ. ಜೊತೆಗೆ ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ. ಇದನ್ನೂ ಓದಿ: ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

ಆಭರಣ ಅರ್ಪಿಸುವ ಮುನ್ನ ದೇಗುಲದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಾಗಿಯಾಗಿದ್ದರು. ಕೋಟ್ಯಂತರ ಮೌಲ್ಯದ ಆಭರಣಗಳನ್ನು ಅರ್ಪಿಸಿ ಇಳೆಯರಾಜ ಅವರು ಭಾವುಕರಾಗಿದ್ದು, ಮೂಕಾಂಬಿಕೆಯಿಂದ ತನ್ನ ಜೀವನದಲ್ಲಿ ಪವಾಡ ನಡೆದಿದೆ ಎಂದಿದ್ದಾರೆ. ಬಳಿಕ ದೇಗುಲದ ವತಿಯಿಂದ ಮಹಾದಾನಿ ಇಳಯರಾಜ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

Share This Article