ರಾಮಾಯಣ ನಾಟಕ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ 1.02 ಲಕ್ಷ ದಂಡ ವಿಧಿಸಿದ ಬಾಂಬೆ ಐಐಟಿ

Public TV
1 Min Read

ಮುಂಬೈ: ರಾಮಾಯಣ (Ramayan) ನಾಟಕ ಪ್ರದರ್ಶಿಸಿದ 8 ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ (IIT Bombay) 1.02 ಲಕ್ಷ ರೂ. ದಂಡ ವಿಧಿಸಿದೆ. ಈ ನಾಟಕವು ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಆರೋಪಿಸಲಾಗಿದೆ.

ಮಾರ್ಚ್ 31 ರಂದು ಇನ್ಸ್ಟಿಟ್ಯೂಟ್‌ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ ‘ರಾಹೋವನ’ ಎಂಬ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು. ಎಲ್ಲಾ ಎಂಟು ವಿದ್ಯಾರ್ಥಿಗಳ ಮೇಲೆ ಬಾಂಬೆ ಐಐಟಿ ದಂಡ ಹಾಕಿದೆ. ಇದನ್ನೂ ಓದಿ: ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಕರ ಪೈಕಿ 68 ಮಂದಿ ಭಾರತೀಯರು!

ಮೇ 8 ರಂದು ನಡೆದ ಶಿಸ್ತು ಕ್ರಮ ಸಮಿತಿ (ಡಿಎಸಿ) ಸಭೆಯಲ್ಲಿ ಐಐಟಿ ಈ ವಿಷಯವನ್ನು ಪ್ರಸ್ತಾಪಿಸಿ ಕ್ರಮಕೈಗೊಂಡಿದೆ. ಜೂನ್ 4 ರಂದು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿದೆ. ಸಂಸ್ಥೆಯು ನಾಲ್ಕು ವಿದ್ಯಾರ್ಥಿಗಳಿಗೆ 1.20 ಲಕ್ಷ ರೂ. ದಂಡ ವಿಧಿಸಿದೆ. ಪದವಿಪೂರ್ವ ವಿದ್ಯಾರ್ಥಿಗಳಾದ ಇತರ ನಾಲ್ವರು ವಿದ್ಯಾರ್ಥಿಗಳಿಗೆ 40,000 ರೂ. ದಂಡವನ್ನು ಪಾವತಿಸುವಂತೆ ಹೇಳಲಾಗಿದೆ. ಅಲ್ಲದೇ ಹಾಸ್ಟೆಲ್ ವಸತಿಗಳನ್ನು ಖಾಲಿ ಮಾಡುವಂತೆ ಅವರಿಗೆ ಆದೇಶಿಸಲಾಗಿದೆ.

‘ರಾವೋಹಣ’ದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕಲಾತ್ಮಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂವೇದನೆಗಳ ಬಗ್ಗೆ ಭಾರಿ ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

ಐಐಟಿ ವಿದ್ಯಾರ್ಥಿಗಳ ಗುಂಪೊಂದು ಸಂಸ್ಥೆಯಲ್ಲಿ ಔಪಚಾರಿಕ ದೂರು ದಾಖಲಿಸಿದೆ. ನಾಟಕವು ಹಿಂದೂ ನಂಬಿಕೆಗಳ ಅವಹೇಳನಕಾರಿ ಉಲ್ಲೇಖಗಳನ್ನು ಒಳಗೊಂಡಿದೆ. ರಾಮನನ್ನು ‘ದೆವ್ವ’ ಎಂದು ಚಿತ್ರಿಸಲಾಗಿದೆ. ಸೀತಾ, ರಾಮ ಮತ್ತು ಲಕ್ಷ್ಮಣನ ಪಾತ್ರಗಳಲ್ಲಿ ಅನುಚಿತ ಭಾಷೆ ಮತ್ತು ಸನ್ನೆಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Share This Article