ಬಿಜೆಪಿ ನನ್ನನ್ನು ಜೈಲಿಗೆ ಕಳುಹಿಸಲು ಕೆಟ್ಟದಾರಿ ಹಿಡಿಯುತ್ತಿದೆ: ಉದ್ಧವ್ ಠಾಕ್ರೆ

Public TV
1 Min Read

ಮುಂಬೈ: ಬಿಜೆಪಿ ನನ್ನನ್ನು ಜೈಲಿಗೆ ಕಳುಹಿಸಲು ಕೆಟ್ಟದಾರಿ ಹಿಡಿಯುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶುಕ್ರವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೂರು ದಿನಗಳ ನಂತರ ಠಾಕ್ರೆ ಅವರ ಸೋದರಮಾವ ಮನಿ ಲಾಂಡರಿಂಗ್ ಅವರ ಮೇಲೆ ದಾಳಿ ಮಾಡಿದ ನಂತರ, ಅವರ ಆಸ್ತಿಯಲ್ಲಿ 6.45 ಕೋಟಿಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಬಿಜೆಪಿ ನನ್ನನ್ನು ದೋಷಿಯನ್ನಾಗಿ ಮಾಡಲು ತುಂಬಾ ಪ್ರಯತ್ನ ಪಡುತ್ತಿದೆ. ಕೇಂದ್ರವು ಜಾರಿ ನಿರ್ದೇಶನಾಲಯದ ಮೂಲಕ ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಕಿಡಿಕಾರಿದವರು. ಇದನ್ನೂ ಓದಿ:  ಜೀವನದಲ್ಲಿ ಎಂದೂ ನಾನು ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ: ಹೆಚ್‌ಡಿಕೆ

ಅಧಿಕಾರಕ್ಕೆ ಬರಬೇಕಾದರೆ ಅಧಿಕಾರಕ್ಕೆ ಬನ್ನಿ. ಆದರೆ ಅಧಿಕಾರಕ್ಕೆ ಬರಲು ಇಷ್ಟೆಲ್ಲಾ ಕೆಟ್ಟ ಕೆಲಸಗಳನ್ನು ಮಾಡಬೇಡಿ. ನಮ್ಮ ಮತ್ತು ಬೇರೆ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಬೇಡಿ. ನಿಮ್ಮ ಕುಟುಂಬದ ಸದಸ್ಯರಿಗೆ ನಾವು ಯಾವತ್ತೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿದರು.

ನಿಮ್ಮ ಕುಟುಂಬಗಳು ಏನಾದರೂ ತಪ್ಪು ಮಾಡಿದೆ ಎಂದು ನಾವು ಹೇಳುತ್ತಿಲ್ಲ. ನಾವು ನಿಮಗೆ ತೊಂದರೆ ಕೊಡಲು ಏನಾದರೂ ಮಾಡುತ್ತೇವೆ ಎಂದು ಸಹ ನಾವು ಹೇಳುತ್ತಿಲ್ಲ. ನೀವು ಅಧಿಕಾರಕ್ಕೆ ಬರಲು ನಮ್ಮನ್ನು ಜೈಲಿಗೆ ಹಾಕಲು ಬಯಸಿದರೆ, ನನ್ನನ್ನು ಜೈಲಿಗೆ ಹಾಕಿ ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.

ಉದ್ಧವ್ ಠಾಕ್ರೆ ಅವರ ಸೋದರ ಮಾವನ ಆಸ್ತಿಯನ್ನು ವಶಪಡಿಸಿಕೊಂಡ ಎರಡು ವಾರಗಳ ನಂತರ, ಆದಾಯ ತೆರಿಗೆ ಇಲಾಖೆಯು ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮತ್ತು ಸಹೋದ್ಯೋಗಿ ಅನಿಲ್ ಪರಬ್ ಅವರ ನಿಕಟವರ್ತಿಗಳ ಮೇಲೆ ದಾಳಿ ನಡೆಸಿದರು. ಈ ಹಿನ್ನೆಲೆ ಶಿವಸೇನೆ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಕೇಂದ್ರ ಬೇಕೆಂದು ಈ ರೀತಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಮನೆಗೆ ನುಗ್ಗಿ ಎಲ್ಲರನ್ನೂ ಮುಗಿಸಿಬಿಡ್ತೇವೆ ಎಂದ ಪೋಷಕರು – ಭಯಭೀತರಾಗಿರುವ ನವಜೋಡಿ

Share This Article
Leave a Comment

Leave a Reply

Your email address will not be published. Required fields are marked *