ಭಾರತದಲ್ಲಿ ಇರಬೇಕೆಂದರೆ ಭಾರತ್ ಮಾತಾ ಕಿ ಜೈ ಎನ್ನಬೇಕು: ಕೇಂದ್ರ ಸಚಿವ

Public TV
1 Min Read

ಹೈದರಾಬಾದ್: ಭಾರತದಲ್ಲಿ ವಾಸಿಸಲು ಬಯಸುವವರು ‘ಭಾರತ್ ಮಾತಾ ಕಿ ಜೈ’ ಎಂದು ಹೇಳಬೇಕು ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ( ಹೇಳಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಹೈದರಾಬಾದ್‌ನಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಬಳಸುವ ಭಾಷೆಯ ಬಗ್ಗೆ ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ರಾಜ್ಯದಲ್ಲಿ ರಾಷ್ಟ್ರೀಯ ಚಿಂತನೆಯ ಸರ್ಕಾರ ರಚನೆಯಾಗಬೇಕು ಎಂದರು.

ಭಾರತದಲ್ಲಿ ಯಾರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವುದಿಲ್ಲ ಎನ್ನುತ್ತಾರೋ ಅವರು ನರಕಕ್ಕೆ ಹೋಗುತ್ತಾರೆ. ನೀವು ಭಾರತದಲ್ಲಿ ವಾಸಿಸಲು ಬಯಸುತ್ತೀರಾದರೆ ನೀವು ಭಾರತ್ ಮಾತಾ ಕಿ ಜೈ ಎಂದು ಹೇಳಲೇಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಎಸ್‌ಐ ವಾಕಥಾನ್

ಭಾರತದಲ್ಲಿ ನೆಲೆಸಿರುವ ನೀವು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುತ್ತೀರಾ? ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂದು ಹೇಳುವವರಿಗೆ ಮಾತ್ರ ದೇಶದಲ್ಲಿ ಜಾಗವಿದೆ. ಅದಕ್ಕಾಗಿಯೇ ನಾನು ಹೇಳಲು ಬಯಸುತ್ತೇನೆಂದರೆ, ಭಾರತ್ ಮಾತಾ ಕಿ ಜೈ ಎಂದು ಹೇಳದ, ಹಿಂದೂಸ್ತಾನ್ ಮತ್ತು ಭಾರತದ ಬಗ್ಗೆ ನಂಬಿಕೆಯಿಲ್ಲದ, ಮತ್ತು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ಯಾರೇ ಇದ್ದರೂ ಅವರು ಪಾಕಿಸ್ತಾನಕ್ಕೆ ಹೋಗಲಿ. ಅವರ ಅಗತ್ಯ ಇಲ್ಲಿ ಇಲ್ಲ ಎಂದರು.

ಪ್ರತಿಪಕ್ಷದ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಡುವುದನ್ನು ಉಲ್ಲೇಖಿಸಿದ ಚೌಧರಿ, ಕಾಂಗ್ರೆಸ್‌ನವರು ಮೊದಲು ಮಹಾತ್ಮ ಗಾಂಧಿಯವರ ಹೆಸರನ್ನು ಕದ್ದಿದ್ದಾರೆ. ದೇಶಕ್ಕೆ ಸ್ವಾತಂತ್ರ‍್ಯವನ್ನು ಪಡೆಯಲು ಮೂಲತಃ ರೂಪುಗೊಂಡ ಕಾಂಗ್ರೆಸ್ ಹೆಸರನ್ನು ಬಳಸಿಕೊಂಡರು. ಮೊದಲು ಅವರು ಕಾಂಗ್ರೆಸ್ ಹೆಸರನ್ನು ಕದ್ದಿದ್ದಾರೆ. ನಂತರ ಗಾಂಧಿ ಹೆಸರನ್ನು ಮತ್ತು ಈಗ ಇಂಡಿಯಾ ಹೆಸರನ್ನು ಕದ್ದಿದ್ದಾರೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್