8 ಕೋಟಿ ಜನ ಕಾಗದದಲ್ಲಿ ಜೀವಂತ, ನಿಮ್ಮ ಬೆಂಬಲವಿದ್ರೆ ಯಾರಿಗೂ ಹೆದರಲ್ಲ: ಮೋದಿ

Public TV
1 Min Read

– ನಮ್ಮದು ಭಯೋತ್ಪಾದನೆ ಹಠಾವೋ ಕೆಲಸ

ಕಲಬುರಗಿ: ನಮ್ಮ ಸರ್ಕಾರ ಬಂದಾಗ ಕೇವಲ ಕಾಗದ ಪತ್ರಗಳಲ್ಲಿ ಜೀವಂತವಾಗಿದ್ದವರನ್ನು ತೆಗೆದುಹಾಕಿದೆ. ಸುಮಾರು 8 ಕೋಟಿಗೂ ಅಧಿಕ ಜನರು ದಾಖಲೆಗಳಲ್ಲಿ ಜೀವಂತವಾಗಿದ್ದು, ಅಂತಹವರನ್ನು ಅಳಿಸಿ ಹಾಕಿದ್ದೇವೆ. ತಮಗೆ ಬರುತ್ತಿದ್ದ ಆದಾಯವನ್ನು ತಡೆದಿದ್ದಕ್ಕೆ ನನ್ನ ವಿರುದ್ಧ ಮಾತನಾಡುತ್ತಾರೆ. ನಿಮ್ಮ ಬೆಂಬಲವಿದ್ರೆ ನಾನ್ಯಾರಿಗೂ ಹೆದರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈಗ ಒಂದು ರೂಪಾಯಿ ಕಳುಹಿಸಿದರೆ ನೇರವಾಗಿ ಬಡವರ ಖಾತೆಗೆ ಹೋಗುವಂತೆ ನಮ್ಮ ಸರ್ಕಾರ ಮಾಡಿದೆ. 8 ಕೋಟಿಗೂ ಅಧಿಕ ಜನರು ಕೇವಲ ಕಾಗದ ಪತ್ರಗಳಲ್ಲಿ ಜೀವಂತವಾಗಿದ್ದರು. ಈ 8 ಕೋಟಿಯ ಜನರು ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸಲು ಬಿಡುತ್ತಿರಲಿಲ್ಲ. ಇದೀಗ ನಮ್ಮ ಸರ್ಕಾರ 8 ಕೋಟಿ ಜನರನ್ನು ಪತ್ತೆ ಮಾಡಿದ್ದು, ಅಂತಹವರನ್ನು ಹುಡುಕುವ ಕೆಲಸ ನಡೆದಿದೆ. ಇಂತಹವರು ಎಂದು ಮೋದಿಯನ್ನು ಹೊಗಳಲ್ಲ. ಇಂದು ಯಾರಿಗೂ ನಾನು ಹೆದರಲ್ಲ. ನೀವೆಲ್ಲರೂ ನನ್ನ ಜೊತೆಗಿದ್ದಾಗ ಮೋದಿ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ.

ಸುಭದ್ರ ಸರ್ಕಾರ ನೋಡಿ ಕೆಲವರು ಹೆದರುತ್ತಿದ್ದಾರೆ. ಕರ್ನಾಟಕವನ್ನು ಲೂಟಿ ಮಾಡುತ್ತಿದ್ದು, ಇದೆಲ್ಲವನ್ನು ನೀವು ತಡೆಯುವ ಕೆಲಸ ಮಾಡಬೇಕಿದೆ. 30 ವರ್ಷಗಳ ಬಳಿಕ ದೆಹಲಿಯಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಿದ್ದು, ಎಲ್ಲ ಕೆಲಸವನ್ನು ಪೂರ್ಣಗೊಳಿಸುತ್ತಿದ್ದೇವೆ. ನಮ್ಮ ಕಾರ್ಯವೈಖರಿಯನ್ನು ಕಂಡು ಮೋದಿ ಹಠಾವೋ ಅಂತಿದ್ದಾರೆ. ನಾನು ಮಾತ್ರ ಆತಂಕವಾದ ಹಠಾವೋ ಎಂಬ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *