ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡನ ಹೆಸರಿದೆ: ಶೋಭಾ ಕರಂದ್ಲಾಜೆ

Public TV
1 Min Read

ಬೆಂಗಳೂರು: ಹಿಂದೂಗಳನ್ನೆಲ್ಲ ಕೊಲ್ಲುವುದಕ್ಕೆ ಅಂತ ಟಿಪ್ಪು ಡ್ರಾಪ್ ಮಾಡಿದ್ರು. ಟಿಪ್ಪು ಡ್ರಾಪ್‍ನಲ್ಲಿ ಹಿಂದೂಗಳನ್ನೆಲ್ಲ ಕೊಲ್ಲಲಾಗುತಿತ್ತು. ರಸ್ತೆಗೆ, ಕಟ್ಟಡಕ್ಕೆಲ್ಲ ಗುಲಾಮಿತನದ ಹೆಸರಿಡಲಾಗಿದೆ. ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ-ನಂಜೇಗೌಡ (Uri Gowda- Nanje Gowda) ನ ಹೆಸರಿದೆ ಎಂದು ಹೇಳುವ ಮೂಲಕ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸಿನಿಮಾ ಟೈಟಲ್ ಉರಿತು ಸಮರ್ಥನೆ ಮಾಡಿಕೊಂಡರು.

ಬಿಜೆಪಿ ಕಚೇರಿ (BJP Office) ಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸಿ ಅವರು ಮಾನಾಡಿದರು. ನಂಜೇಗೌಡ-ಉರಿಗೌಡ ಹೆಸರಿನಲ್ಲಿ ಬಿಜೆಪಿ ಸಿನಿಮಾ ಟೈಟಲ್ ಕುರಿತು ಮಾಜಿ ಸಿಎಂ ಎಚ್‍ಡಿಕೆ (HD Kumaraswamy) ವಿರೋಧ ವ್ಯಕ್ತಪಡಿಸಿದ್ದು, ಟಿಪ್ಪು ದೇಶದ್ರೋಹಿಯಾದರೂ ಅವರ ಹೆಸರು ಇಟ್ಟಿಲ್ವಾ..? ಎಂದು ಶೋಭಾ ತಿರುಗೇಟು ನೀಡಿದರು.

ಇದು ಖಳನಾಯಕನ ಕೆಲಸ ಅಲ್ಲ. ಇವತ್ತು ಟಿಪ್ಪು ಬಗ್ಗೆ ಏಕೆ ಮಾತಾಡ್ತೀವಿ. ಟಿಪ್ಪು ದೇಶ ವಿರೋಧಿ, ಹಿಂದೂ ವಿರೋಧಿ, ಕನ್ನಡ ವಿರೋಧಿ ಆಗಿದ್ದ. ನಂದಿ ಬೆಟ್ಟಕ್ಕೆ ಹೋದ್ರೆ ಟಿಪ್ಪು ಡ್ರಾಪ್ ಇದೆ. ಅವರ ವಿರೋಧಿಗಳನ್ನ ಕೊಲ್ಲಲು ಟಿಪ್ಪು ಡ್ರಾಪ್ ಇದೆ, ಹಿಂದೂಗಳನ್ನ ಕೊಲ್ಲುತ್ತಿದ್ದ. ಮೈಸೂರು ಮಹಾರಾಜರ ಅನುಯಾಯಿಗಳಾಗಿ ಕೆಲಸ ಮಾಡಿದವರು ಉರಿಗೌಡ, ನಂಜೇಗೌಡ. ಅವರವರ ನೇರಕ್ಕೆ ಕೆಲವರು ಪುಸ್ತಕ ಬರೆಸಿಕೊಂಡಿದ್ದಾರೆ. ಇತಿಹಾಸ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡ ಹೆಸರಿದೆ. ಅವರು ಮೈಸೂರು ಮಹಾರಾಜರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದರು.

ಟಿಪ್ಪುವನ್ನ ಕೊಲ್ಲುವ ಮೂಲಕ ಇಬ್ಬರು ಇತಿಹಾಸ ಪುಟ ಸೇರಿದ್ದಾರೆ. ಹೆಸರಿಡುವುದರಲ್ಲೂ ಗುಲಾಮಿತನ ಮಾಡಿದ್ದಾರೆ. ರಸ್ತೆಗೆ, ಕಟ್ಟಡಕ್ಕೆಲ್ಲ ಗುಲಾಮಿತನದ ಹೆಸರಿಡಲಾಗಿದೆ. ಟಿಪ್ಪು ಓಲೈಕೆ ಮಾಡ್ತಿದ್ದಾರೆ ಇವರು ಎಂದು ಹೇಳಿದರು. ಇದನ್ನೂ ಓದಿ: ಉರಿಗೌಡ, ನಂಜೇಗೌಡ ಟಿಪ್ಪುವನ್ನ ಕೊಂದಿರೋದು ಸತ್ಯ – ಸಿ.ಟಿ ರವಿ

ಮೈಸೂರು-ಬೆಂಗಳೂರು ರಸ್ತೆಗೆ ಉರಿಗೌಡ, ನಂಜೇಗೌಡ ಮಹಾದ್ವಾರವನ್ನು ಹೈವೇ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾತ್ರ ನಿರ್ಮಾಣ ಮಾಡಲಾಗಿತ್ತು. ಅದು ಪರ್ಮನೆಂಟ್ ಅಲ್ಲ, ಅದು ಶಾಶ್ವತ ದ್ವಾರ ಆಗಿರಲಿಲ್ಲ. ಬಾಲಗಂಗಾಧರನಾಥ ಶ್ರೀಗಳ ಮಹಾದ್ವಾರ ಈಗಲೂ ಇದೆ. ಮುಂದೆಯೂ ಇರುತ್ತೆ ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *