ಪುರುಷರ ಮನಸ್ಸನ್ನು ಅರ್ಥ ಮಾಡ್ಕೊಳ್ಳಕ್ಕೆ ಆಗಲ್ಲ, ಹಾಗಾದ್ರೆ ಎಲ್ಲರನ್ನೂ ಜೈಲಿಗೆ ಹಾಕ್ಬೇಕಾ? – ರಮ್ಯಾ ವಿವಾದಾತ್ಮಕ ಪೋಸ್ಟ್

1 Min Read

– ಬೀದಿ ನಾಯಿಗಳ ಕುರಿತು ಸುಪ್ರೀಂ ವಿಚಾರಣೆ ಬೆನ್ನಲ್ಲೇ ಪೋಸ್ಟ್

ಬೀದಿನಾಯಿ ಕಚ್ಚತ್ತೋ? ಇಲ್ವೋ ಅಂತ ಅದರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿತ್ತು. ಅದರ ಬೆನ್ನಲ್ಲೇ ನಟಿ ರಮ್ಯಾ (Actress Ramya) ಪುರುಷರ ಮನಸ್ಸನ್ನು ಅರ್ಥ ಮಾಡ್ಕೊಳ್ಳಕ್ಕೆ ಆಗಲ್ಲ, ಹಾಗಾದ್ರೆ ಎಲ್ಲರನ್ನೂ ಜೈಲಿಗೆ ಹಾಕ್ಬೇಕಾ? ಎಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ.

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿರುವ ಸುಮೊಟೋ ಕೇಸ್‌ನ ವಿಚಾರಣೆ ನಡೆಸಿ, ನಾಯಿಗಳಿಗೆ ಸಿಟ್ಟು ಬಂದಾಗ ಅವು ಹೇಗೆ ವರ್ತಿಸುತ್ತವೆ ಅನ್ನುವುದು ಯಾರಿಗೂ ಗೊತ್ತಾಗಲ್ಲ. ಅವುಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು.ಇದನ್ನೂ ಓದಿ: ನಾಯಿಯ ಮನಸ್ಸು ಓದಲು ಸಾಧ್ಯವಿಲ್ಲ – ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಅಭಿಪ್ರಾಯ

ಈ ಕುರಿತಂತೆ ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಿನ್ನವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪುರುಷರ ಮನಸ್ಸನ್ನು ಅರ್ಥ ಮಾಡಿಕೊಳ್ಳೋಕೆ ಆಗಲ್ಲ. ಪುರುಷ ಯಾವಾಗ ಅತ್ಯಾಚಾರ/ಕೊಲೆ ಮಾಡುತ್ತಾನೆಂದು ಗೊತ್ತಿಲ್ಲ. ಹಾಗಾದ್ರೆ ಎಲ್ಲ ಪುರುಷರನ್ನು ಜೈಲಿಗೆ ಹಾಕ್ಬೇಕಾ? ಎಂದು ಸುಪ್ರೀಂ ಕೋರ್ಟ್‌ಗೆ ರಮ್ಯಾ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ನಾಯಿಗಳ ಪರವಾಗಿ ರಮ್ಯಾ ನಿಂತಿದ್ದಾರೆ. ರಮ್ಯಾ ಪೋಸ್ಟ್ಗೆ ಪರ ಮತ್ತು ವಿರೋಧ ವ್ಯಕ್ತವಾಗಿದೆ.

ಸುಪ್ರೀಂ ಹೇಳಿದ್ದೇನು?
ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿರುವ ಸುಮೊಟೋ ಕೇಸ್‌ನ ವಿಚಾರಣೆಯು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ ಅಂಜರಾರಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ನ್ಯಾಯಮೂರ್ತಿಗಳು, ನಾಯಿಗಳಿಗೆ ಸಿಟ್ಟು ಬಂದಾಗ ಅವು ಹೇಗೆ ವರ್ತಿಸುತ್ತವೆ ಅನ್ನುವುದು ಯಾರಿಗೂ ಗೊತ್ತಾಗಲ್ಲ. ಬೀದಿ ನಾಯಿ ಕಚ್ಚುತ್ತೋ? ಇಲ್ವೋ ಅಂತ ಅದರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಸಮಸ್ಯೆಯಾದ ನಂತರ ಸರಿಪಡಿಸಿಕೊಳ್ಳುವುದಲ್ಲ, ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಈ ಕಾರಣದಿಂದಾಗಿ ಬೀದಿಗಳಲ್ಲಿ ನಾಯಿಗಳು ಇಲ್ಲದಂತೆ ಕ್ರಮ ಆಗಬೇಕು ಅಂತ ಪೀಠ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.ಇದನ್ನೂ ಓದಿ: ನಿಮ್ಮನ್ನ ನೋಡೋಕೆ ನಾನೂ ಕಾಯ್ತಿದ್ದೀನಿ ಎಂದ ಯಶ್

Share This Article