ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ: ಅಶ್ವಥ್ ನಾರಾಯಣ

Public TV
1 Min Read

ರಾಮನಗರ: ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ ಎಂದು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಸವಾಲು ಎಸೆದಿದ್ದಾರೆ.

ಮಾಗಡಿ ತಾಲೂಕಿನಲ್ಲಿ ಬಿಟ್ ಕಾಯಿನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಈ ಬಗ್ಗೆ ತನಿಖೆ ಮಾಡಲು ಸಿದ್ಧವಿದೆ. ಈಗಾಗಲೇ ಸೆಂಟ್ರಲ್ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧರಿದ್ದಾರೆ. ಪ್ರತಿಪಕ್ಷದವರು ಏನಾದರೂ ಪುರಾವೆ ಇದ್ದರೆ ಸರ್ಕಾರಕ್ಕೂ ಕೊಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪರಿಷತ್ ಚುನಾವಣೆ – ಕಾಂಗ್ರೆಸ್ ಟಿಕೆಟ್‍ಗೆ 20ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಕಸರತ್ತು

ವಿಚಾರಣೆ ನಡೆಯಬೇಕಾದರೆ ಏನು ಹೇಳಲು ಸಾಧ್ಯ. ಅವರು ಅರ್ಕಾವತಿ ವಿಚಾರದಲ್ಲಿ ಕೆಂಪಣ್ಣ ಆಯೋಗದ ತನಿಖೆ ಬಗ್ಗೆ ಏನಾದರೂ ಹೇಳಿದ್ರಾ? ಪಬ್ಲಿಕ್ ಪ್ರಾಸಿಕ್ಯೂಟರ್ ಅಪೈಟ್ಮೆಂಟ್ ನಲ್ಲಿ ಉಲ್ಲಂಘನೆಯಾಗಿತ್ತು. ಅದರಲ್ಲಿ ಏನಾದರೂ ಹೇಳಿದ್ರಾ? ಎಂದು ಪ್ರಶ್ನಿಸಿದ ಅವರು, ನಮ್ಮ ಪ್ರತಿಪಕ್ಷದ ನಾಯಕರ ಮೇಲೆ ಹಲವು ಆರೋಪಗಳಿವೆ ಎಂದು ದೂರಿದರು. ಕೆಪಿಸಿಸಿ ಅಧ್ಯಕ್ಷರ ಮೇಲೆ ಹಲವಾರು ಆಪಾದನೆ ಇದ್ದಾವೆ. ಹಿಟ್ ಅಂಡ್ ರನ್ ರೀತಿ ಬೇಡ, ಪುರಾವೆ ಇದ್ದರೆ ಮಂಡಿಸಲಿ ಎಂದರು.

ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಈ ರೀತಿಯ ಬೆಳವಣಿಗೆ ಯಾವುದು ಇಲ್ಲ. ಯಾವುದು ಸತ್ಯ ಅಲ್ಲ. ಸಿಎಂ ಮತ್ತು ಪಿಎಂ ಭೇಟಿಗೆ ಬೇರೆ ಕಾರಣಗಳಿವೆ. ಕೆಲ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡ್ತಿದ್ದಾರೆ. ಪ್ರತಿಪಕ್ಷದವರು ಎಲ್ಲದಕ್ಕೂ ತಿರುಗೇಟು ಕೊಡ್ತೇವೆ. ಅವರಿಗೆ ಕನ್ನಡಿ ಹಿಡಿಯುವಂತಹ ಕೆಲಸ ಮಾಡ್ತೇವೆ. ಅವರ ಘನಸಾಧನೆಗಳನ್ನೂ ಬಹಳಷ್ಟು ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ಮಾಡ್ತೇವೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಭೂಸನೂರು

ಇಲ್ಲಿ ಮುಚ್ಚುಮರೆ ಮಾಡುವುದು ಯಾವುದು ಇಲ್ಲ. ಎಲ್ಲ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮವಹಿಸಲಾಗಿದೆ. ಮುಂದೆಯೂ ಸಹ ಅಂತಹವರ ವಿರುದ್ಧ ಕಾನೂನಿನ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *