ಸಿಎಂಗೆ ಸ್ವಾಭಿಮಾನ ಇದ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಳೆ ಲೋಕಾಯುಕ್ತ ವಿಚಾರಣೆ ಎದುರಿಸಲಿ- ಶ್ರೀರಾಮುಲು

Public TV
1 Min Read

ಹಾವೇರಿ: ಸಿಎಂ ಸಿದ್ದರಾಮಯ್ಯರಿಗೆ (Siddaramaiah) ಸ್ವಾಭಿಮಾನ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಳೆ ಲೋಕಾಯುಕ್ತ ವಿಚಾರಣೆ ಎದುರಿಸಲಿ ಎಂದು ಹಾವೇರಿ (Haveri) ಶಿಗ್ಗಾಂವಿ (Shiggaon) ಮತಕ್ಷೇತ್ರ ಹುಲುಗೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ( B Sriramulu) ಹೇಳಿದ್ದಾರೆ.

ಈ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ಸಿಎಂಗೆ ಸ್ವಾಭಿಮಾನ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಳೆ ಲೋಕಾಯುಕ್ತ ವಿಚಾರಣೆ ಎದುರಿಸಲಿ. ಲೋಕಾಯುಕ್ತ ಸಿಎಂ ಆಡಳಿತ ವ್ಯಾಪ್ತಿಗೆ ಬರುತ್ತದೆ. ಅವರ ಕೈ ಕೆಳಗಿನ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಬೇಕು. ಹೀಗಾಗಿ ನ್ಯಾಯಯುತವಾದ ತನಿಖೆ ಆಗುವ ನಂಬಿಕೆಯಿಲ್ಲ. ಆ ಕಾರಣದಿಂದ ಸಿಬಿಐಗೆ ವಿಚಾರಣೆ ನೀಡಲು ಬಿಜೆಪಿ ಒತ್ತಾಯ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಭಯದಿಂದ ತಮ್ಮ ಯಾವುದೇ ಹಗರಣಗಳನ್ನು ಸಿಬಿಐಗೆ ನೀಡುತ್ತಿಲ್ಲ. ಸಿಬಿಐ ರಾಜ್ಯ ಪ್ರವೇಶಕ್ಕೆ ಬಿಡುತ್ತಿಲ್ಲ ಎಂದರು. ಇದನ್ನೂ ಓದಿ: ರೈತರ ಜಮೀನಿಗೆ ವಕ್ಫ್ ನೋಟಿಸ್ – ಸಿಎಂ ಮುಂದೆ 6 ಬೇಡಿಕೆಯಿಟ್ಟ ಶೋಭಾ ಕರಂದ್ಲಾಜೆ

ಕೊರೊನಾ ಸಮಯದಲ್ಲಿ ಜನರಿಗೆ ವ್ಯಾಕ್ಸಿನ್ ಬಗ್ಗೆ ತಪ್ಪು ಸಂದೇಶ ಕೊಟ್ಟು ರಾಜಕೀಯ ಮಾಡಿದ್ದು ಕಾಂಗ್ರೆಸ್ ನಾಯಕರು. ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು

Share This Article