ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

Public TV
2 Min Read

ಬೆಂಗಳೂರು: ಗ್ಯಾರಂಟಿ (Congress Guarantee) ಗೊಂದಲಗಳ ಬಗ್ಗೆ ಜನಾಕ್ರೋಶ ಹೆಚ್ಚಾಗುತ್ತಿದ್ದರೂ ಸರ್ಕಾರ ಮಾತ್ರ ಹೊಸ ಹೊಸ ಷರತ್ತುಗಳನ್ನು ಹಾಕುತ್ತಲೇ ಇದೆ. ಇವತ್ತು ಗೃಹಲಕ್ಷ್ಮಿ (Grahalakshmi) ಯೋಜನೆಗೆ ಇನ್ನೊಂದು ಷರತ್ತು ಸೇರ್ಪಡೆಯಾಗಿದೆ. ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2000 ರೂಪಾಯಿ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೊಸ ಬಾಂಬ್ ಸಿಡಿಸಿದ್ದಾರೆ.

ಸರ್ಕಾರ ವಿಧಿಸುತ್ತಿರುವ ಷರತ್ತುಗಳ ಬಗ್ಗೆ ವಿಪಕ್ಷಗಳು ಮಾತ್ರವಲ್ಲ ಹಲವು ಸಚಿವರು ಕೂಡ ಆಂತರಿಕವಾಗಿ ಆಕ್ಷೇಪ ಎತ್ತುತ್ತಿದ್ದಾರೆ. ಜನಾಕ್ರೋಶ, ವಿಪಕ್ಷಗಳ ಟೀಕೆ ಲಘುವಾಗಿ ಪರಿಗಣಿಸಬೇಡಿ. ನಿರೀಕ್ಷೆ ಇಟ್ಟು ಜಾರಿ ಮಾಡಿರೋ ಗ್ಯಾರಂಟಿಗಳ ಲಾಭ ಪಕ್ಷಕ್ಕೆ ಸಿಗಬೇಕು. ಗ್ಯಾರಂಟಿಗಳೇ ನಮಗೆ ಮುಳುವಾಗಬಾರದು ಎಂದು ಸಲಹೆ ನೀಡಿದ್ದಾರೆ.  ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

ಜನ ಸುಮ್ಮನಾಗದಿದ್ದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಾನಿ ಖಚಿತ. ಬಿಜೆಪಿ ಕೈಗೆ ಯಾವ ಕಾರಣಕ್ಕೂ ಗ್ಯಾರಂಟಿ ಅಸ್ತ್ರ ಸಿಗಬಾರದು. ಮುಂದೆ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌, ಬಿಬಿಎಂಪಿ, ಲೋಕಸಭೆ ಚುನಾವಣೆ ಬರುತ್ತಿದೆ. ದುಡುಕದೇ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ ಎಂದು ಕೆಲವರು ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ನಾಯಕರ ಸಲಹೆಗೆ ಸರ್ಕಾರ ಡೋಂಟ್‌ಕೇರ್‌ ಎಂದಿದೆ. ಈಗ ವಿಧಿಸಲಾಗಿರುವ ಷರತ್ತುಗಳನ್ನು ಸಡಿಲಿಸದಿರಲು  ಸಿಎಂ ತೀರ್ಮಾನಿಸಿದ್ದಾರೆ. ಅಂದ ಹಾಗೇ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ಜಾರಿಗೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

 

ಗೃಹಲಕ್ಷ್ಮಿ ಷರತ್ತುಗಳೇನು?
ಗೃಹಲಕ್ಷ್ಮಿ ಯೋಜನೆಯ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮಕ್ಕಳು ತೆರಿಗೆದಾರರಾಗಿದ್ದರೆ ಅವರ ತಾಯಂದಿರಿಗೆ 2000 ರೂ. ಇಲ್ಲ. ಜಿಎಸ್‌ಟಿ ಪಾವತಿದಾರರ ಕುಟುಂಬಗಳಿಗೂ ಈ ಯೋಜನೆ ಅನ್ವಯವಾಗುವುದಿಲ್ಲ. ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂದ ಯಜಮಾನಿಗೆ ಮಾತ್ರ ಹಣ ನೀಡಲಾಗುತ್ತದೆ. ಸರ್ಕಾರಿ ಉದ್ಯೋಗಿಗಳಿಗೂ ಗೃಹಲಕ್ಷ್ಮಿ ಯೋಜನೆ ಅನ್ವಯ ಆಗುವುದಿಲ್ಲ. ಗಂಡ, ಹೆಂಡತಿ ಪೈಕಿ ಒಬ್ಬರು ತೆರಿಗೆ ಪಾವತಿ ಮಾಡಿದರೂ ಈ ಸೌಲಭ್ಯ ಸಿಗುವುದಿಲ್ಲ.

Share This Article