ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗೆ ಇಳಿದರೆ ದೊಡ್ಡ ಕ್ರಾಂತಿ ಆಗುತ್ತೆ: ವಾಟಾಳ್ ನಾಗರಾಜ್

Public TV
1 Min Read

– ಸಿದ್ದರಾಮಯ್ಯರಂಥ ನಾಯಕ ರಾಜ್ಯದಲ್ಲಿ ಯಾರೂ ಇಲ್ಲ

ಬೆಂಗಳೂರು: ಸಿದ್ದರಾಮಯ್ಯ ( Siddaramaiah) ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ ಎಂದು ವಾಟಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಳ್ ನಾಗರಾಜ್ (Vatal Nagaraj) ಎಚ್ಚರಿಕೆ ನೀಡಿದರು.

ಇಂದು ಬೆಂಗಳೂರಿನ (Bengaluru) ಮೈಸೂರು ಬ್ಯಾಂಕ್ ಎದುರು ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದರು. ಇದನ್ನೂ ಓದಿ: ಚೀನಾದ ಕುಮ್ಮಕ್ಕು – ಪಾಕ್‌ನಿಂದ ಚೆನಾಬ್ ಸೇತುವೆಯ ಮಾಹಿತಿ ಸಂಗ್ರಹ

ಈ ವೇಳೆ ಮಾತನಾಡಿದ ವಾಟಾಳ್, ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ. ಸಿದ್ದರಾಮಯ್ಯ ನಂತರ ಅವರಂತಹ ನಾಯಕ ರಾಜ್ಯದಲ್ಲಿ ಯಾರೂ ಇಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನಲ್ಲೂ ಇಲ್ಲ. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯರನ್ನು ತೆಗೆದಾಗ ನಾನು ಹೋರಾಟ ಮಾಡಿದ್ದೆ. ಇದು ಮೋಸದ ವ್ಯವಸ್ಥೆ, ರಾಜ್ಯಪಾಲರಿಗೆ ಈ ಅಧಿಕಾರ ಇರಬಾರದು. ಲೋಕಸಭೆಯಲ್ಲಿ ಇದರ ಬಗ್ಗೆ ಸಮಗ್ರವಾಗಿ ಚರ್ಚೆ ಆಗಬೇಕು. ಯಾವುದೇ ಶಕ್ತಿ ನಿಮ್ಮನ್ನು ಇಳಿಸುವುದಕ್ಕೆ ಹೋದರೆ ದೊಡ್ಡ ಕ್ರಾಂತಿ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟಿನಿಂದ ವಕ್ಫ್‌ ಆಸ್ತಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ: ಸಚಿವ ಬೋಸರಾಜು

ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ಸಿಎಂ ಆಗಿರೋವರೆಗೂ ಕನ್ನಡಕ್ಕೆ ಚ್ಯುತಿ ಬರಲು ಬಿಡುವುದಿಲ್ಲ. ಕನ್ನಡಕ್ಕೆ ಅಗೌರವ ಆಗಲು ಬಿಡುವುದಿಲ್ಲ. ಕನ್ನಡ ಕಾವಲು ಸಮಿತಿ ಬೇರೆ ರಾಜ್ಯಗಳಲ್ಲಿದೆಯಾ? ಆದರೆ ನಮ್ಮಲ್ಲಿದೆ. ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಸರಿಲ್ಲಿದೆ. ಕನ್ನಡ ಭಾಷೆ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೇಕಾಗಿದೆ. ಕನ್ನಡಿಗರು ಬಹಳ ದೊಡ್ಡ ಉದಾರಿಗಳು, ಮನುಷ್ಯರನ್ನು ಪ್ರೀತಿಸಲು ಉದಾರಿತನ ಬೇಕು. ಆದರೆ ಭಾಷೆ ಬಗ್ಗೆ ಉದಾರಿತನ ಇರಬಾರದು, ಅಭಿಮಾನ ಇರಬೇಕು. ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡುತ್ತಿದ್ದೇವೆ. ಕರ್ನಾಟಕ ಸಾರ್ವಭೌಮ ಭಾಷೆ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಇದನ್ನೂ ಓದಿ: ಮೈಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ಮಗು ಸಾವು

Share This Article