ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

Public TV
1 Min Read

ಚಂಡೀಗಢ: ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ನಡೆದ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಭರ್ಜರಿ ಗೆಲುವು ಕಂಡಿದೆ. ಆರಂಭದಿಂದಲೇ ಸಿಕ್ಸರ್‌, ಬೌಂಡರಿ ಬಾರಿಸುತ್ತಾ ರನ್‌ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಆರ್‌ಸಿಬಿ ಇನ್ನೂ 10 ಓವರ್‌ಗಳು ಬಾಕಿಯಿರುವಾಗಲೇ ಗೆದ್ದು, ಫೈನಲ್‌ ತಲುಪಿತು.

ಈ ನಡುವೆ ಮಹಿಳಾ ಅಭಿಮಾನಿಯೊಬ್ಬರು (RCB Women Fan) ವಿಚ್ಛೇದನದ ಕುರಿತು ವಿಶೇಷ ಭಿತ್ತಿಪತ್ರ ಪ್ರದರ್ಶಿಸಿರುವುದು ಗಮನಸೆಳೆದಿದೆ. ಹೌದು. 17 ಆವೃತ್ತಿ ಕಳೆದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿಗೆ ಅಭಿಮಾನಿಗಳ ಕೊರತೆಯಂತೂ ಆಗಿಲ್ಲ. ಆದರೀಗ ತಂಡ ಫೈನಲ್‌ಗೆ ತಲುಪಿದ್ದು, ಈ ಸಲವೂ ಟ್ರೋಫಿ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ (Devorce) ನೀಡುವುದಾಗಿ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡಿರುವುದು ಕಂಡುಬಂದಿದೆ. ಇದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ

ಇತ್ತೀಚೆಗೆ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ನಡೆದ ಪಂದ್ಯದ ವೇಳೆಯೂ ಅಭಿಮಾನಿಯೊಬ್ಬರು ನಾನು, ಆರ್‌ಸಿಬಿ ಕಪ್‌ ಗೆಲ್ಲುವವರೆಗೆ ಮದುವೆಯಾಗೋದಿಲ್ಲ ಅಂತ ಪೋಸ್ಟರ್‌ ಹಿಡಿದುಕೊಂಡಿದ್ದರು. ಇದಕ್ಕೂ ಮುನ್ನ 2022 ಐಪಿಎಲ್‌ ಟೂರ್ನಿ ವೇಳೆಯೂ ಮಹಿಳಾ ಅಭಿಮಾನಿಯೊಬ್ಬರು ಆರ್‌ಸಿಬಿ ಕಪ್‌ ಗೆಲ್ಲೋವರೆಗೆ ನಾನು ಮದುವೆಯಾಗಲ್ಲ ಅಂತ ಪೋಸ್ಟರ್‌ ಹಿಡುಕೊಂಡಿದ್ದರು. ಆಗ ಇದು ಭಾರೀ ಟ್ರೆಂಡ್‌ ಕ್ರೆಯೆಟ್‌ ಮಾಡಿತ್ತು. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

ಚಂಡೀಗಢದ ಮುಲ್ಲನಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತ ಪಂಜಾಬ್‌ ಮೊದಲು ಕ್ರೀಸ್‌ಗಿಳಿದು 101 ರನ್‌ಗಳಿಗೆ ಆಲೌಟ್‌ ಆಯಿತು. 102 ರನ್‌ಗಳ ಸುಲಭಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 106 ರನ್‌ ಬಾರಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ಇದನ್ನೂ ಓದಿ: IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

Share This Article