ನನ್ನ ತಾಯಿ ನನ್ನ ಬಗ್ಗೆ ಮಾತನಾಡಿದರೆ ಪರಿಸ್ಥಿತಿ ಬೇರೆ ಆಗಬಹುದು : ನಟ ವಿನೋದ್ ರಾಜ್

Public TV
2 Min Read

‘ಅವತ್ತು ಚಪ್ಪಲಿಯಲ್ಲಿ ಹೊಡೆದ್ರು, ಈಗ ಇನ್ನೇನೊ ಶುರುವಿಟ್ಟುಕೊಂಡಿದ್ದಾರೆ. ನನ್ನ ತಾಯಿ ನನ್ನ ಬಗ್ಗೆ ಮಾತನಾಡಿದರೆ ಪರಿಸ್ಥಿತಿ ಬೇರೆ ಆಗಬಹುದು’ ಎಂದು ನಟಿ ಲೀಲಾವತಿ (Leelavati) ಪುತ್ರ ವಿನೋದ್ ರಾಜ್ (Vinod Raj) ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುತ್ತಿರುವ ನಿರ್ದೇಶಕ ಪ್ರಕಾಶ್ ರಾಜ್ ಮೆಹು (Prakash Raj Mehu) ಬಗ್ಗೆ ಖಾರವಾಗಿಯೇ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ನನ್ನ ತಾಯಿ ನನ್ನ ಮದುವೆ (Marriage) ಬಗ್ಗೆ ಒಪ್ಪಿಕೊಂಡಿದ್ದಾರೆ. ಎಲ್ಲರ ಮನೆಯಲ್ಲೂ ಅದು ನಡೆಯುತ್ತದೆ. ಅದರಲ್ಲೇನು ಭಯೋತ್ಪಾದನೆ ನಡೆದಿದ್ಯಾ? ಇದರಿಂದ ಯಾರಿಗೆ ನೋವಾಗಿದೆ? ಯಾಕೆ ಇವರು ತಾಯಿಗೆ ತೊಂದರೆ ಕೊಡುತ್ತಿದ್ದಾರೆ?’ ಎಂದು ಪ್ರಶ್ನೆ ಮಾಡಿದ್ದಾರೆ ವಿನೋದ್ ರಾಜ್. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

ಮುಂದುವರೆದು ಮಾತನಾಡಿದ ವಿನೋದ್ ರಾಜ್, ‘ದೊಡ್ಡದೊಂದು ನಿಧಿ ಕಂಡು ಹಿಡಿದವರ ಹಾಗೆ ಮಾತನಾಡುತ್ತಿದ್ದಾರೆ. ನನ್ನ ತಾಯಿ ಯಾರಿಗೂ ನೋವನ್ನು ಕೊಟ್ಟಿಲ್ಲ. ನಮ್ಮ ಪಾಡಿಗೆ ನಾವು ಬದುಕುತ್ತಿದ್ದೇವೆ. ಇವರು ಯಾರ ಮರ್ಯಾದೆಯನ್ನು ಕಳೆಯುವುದಕ್ಕೆ ಹೊರಟಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನೀನು ಪ್ರಜ್ಞೆ ಇಟ್ಟುಕೊಂಡು ಮಾತನಾಡು’ ಎಂದು ಪ್ರಕಾಶ್ ರಾಜ್ ಮೆಹು ಕುರಿತು ಕಿಡಿಕಾರಿದ್ದಾರೆ.

ಈ ಹಿಂದೆ ತಮಗಾದ ನೋವುಗಳನ್ನೂ ಅವರು ಹಂಚಿಕೊಂಡಿದ್ದು, ‘ಈ ಹಿಂದೆ ಚಪ್ಪಲಿ ಏಟು ಹೊಡೆದುಬಿಟ್ರು. ಇದೀಗ ಇದನ್ನು ಮಾಡಲು ಹೊರಟಿದ್ದರೆ. ನನ್ನ ತಾಯಿಗೆ ನಾನು ಮಾತುಕೊಟ್ಟಿದ್ದೇನೆ. ಅದರಂತೆ ನಡೆಯುತ್ತೇನೆ. ಲೀಲಾವತಿ ಅವರು ವಿನೋದ್ ರಾಜ್ ಬಗ್ಗೆ ಹೆಚ್ಚು ಕಡಿಮೆ ಮಾತನಾಡಿದರೆ ಅದರ ಪರಿಸ್ಥಿತಿ ಹಾಗೂ ಪರಿಣಾಮ ಏನಾಗಬಹುದು ಅಂತ ಯೋಚಿಸಬೇಕು’ ಎಂದಿದ್ದಾರೆ ವಿನೋದ್ ರಾಜ್.

ಕೆಲ ದಿನಗಳ ಹಿಂದೆ ನಿರ್ದೇಶಕ ಮೆಹು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೀಲಾವತಿ ಮತ್ತು ಅವರ ಪುತ್ರನ ಬಗ್ಗೆ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ ‘ವಿನೋದ್ ರಾಜ್ ಅವರಿಗೆ ಮದುವೆಯಾಗಿ ಪುತ್ರನಿದ್ದು, ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿನೋದ್ ಪತ್ನಿ ಮತ್ತು ಮಗ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆಎಂದು ಬರೆದಿದ್ದರು. ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಫೇಸ್ಬುಕ್ನಲ್ಲಿ ಮೆಹು ಪ್ರಕಟಿಸಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಬರೆದುಕೊಂಡಿದ್ದಾರೆ. ವಿನೋದ್ ಪುತ್ರನ ಹೆಸರು ಯುವರಾಜ್ ಎಂದು ಇದ್ದು, ಸಂಬಂಧ ಆತನ ಅಂಕಪಟ್ಟಿಯ ಫೋಟೋವನ್ನು ಕೂಡ ಹಾಕಿದ್ದಾರೆ. ಅದರಲ್ಲಿ ತಾಯಿ ಹೆಸರು ಅನು ಬಿ ಎಂದಿದೆ. ತಂದೆ/ಗಾರ್ಡಿಯನ್ ಜಾಗದಲ್ಲಿ ವಿನೋದ್ ರಾಜ್ ಎಂದಿದೆ.

Share This Article