ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್

Public TV
1 Min Read

ಹಾಸನ: ಜೆಡಿಎಸ್‌ನ (JDS) ಮತ್ತೊಂದು ವಿಕೆಟ್ ಪತನವಾಗುವುದು ಖಚಿತವಾಗಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಶಾಸಕ ಕೆ.ಎಂ ಶಿವಲಿಂಗೇಗೌಡ (KM ShivalingeGowda) ಮಾತನಾಡಿರುವ ಆಡಿಯೋ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾನು ಕಾಂಗ್ರೆಸ್ (Congress) ಸೇರಿದ್ರೆ 50 ಸಾವಿರ ವೋಟ್ (Vote) ಲೀಡ್‌ನಲ್ಲಿ ಗೆಲ್ತೀನಿ ಎಂದಿರುವ, ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಬೆಂಗಳೂರಿನ ಹೋಟೆಲ್ ರೂಮ್‍ಗಳಿಗೆ ಭರ್ಜರಿ ಡಿಮ್ಯಾಂಡ್- 50 ಸಾವಿರ ಕೊಠಡಿಗಳು ಬುಕ್

ಆಡಿಯೋನಲ್ಲಿ ಏನಿದೆ?: ಯಾವನಲ್ಲಾ, ಯಾವನಪ್ಪಾ ಬಂದ್ರೂ ನಾನು ಕಾಂಗ್ರೆಸ್ ಸೇರಿದ್ರೆ 50 ಸಾವಿರ ವೋಟ್ ಲೀಡ್‌ನಲ್ಲಿ ಗೆಲ್ತೀನಿ ಎಂದು ಶಾಸಕ ಶಿವಲಿಂಗೇಗೌಡ ಹೇಳಿರುವುದಾಗಿ ಇದೆ. ಇದನ್ನೂ ಓದಿ: 7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

ಕಳೆದ 1 ವರ್ಷದಿಂದ ಶಿವಲಿಂಗೇಗೌಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಸೇರ್ತಾರೆ ಎಂಬ ಬಗ್ಗೆ ವದಂತಿ ಹರಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಧುವನಾರಾಯಣ ಕೂಡ ಶಿವಲಿಂಗೇಗೌಡ ನಮ್ಮ ಪಾರ್ಟಿ ಸೇರ್ತಾರೆ ಎಂದು ಹೇಳಿದ್ದರು. ಆದರೂ ಇದುವರೆಗೆ ಶಾಸಕ ಶಿವಲಿಂಗೇಗೌಡ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ತಾವು ಕಾಂಗ್ರೆಸ್ ಸೇರಿದ್ರೆ ದೊಡ್ಡಮಟ್ಟದ ಲೀಡ್‌ನಲ್ಲಿ ಗೆಲ್ತೀನಿ ಎಂದು ಶಿವಲಿಂಗೇಗೌಡ ವಿಶ್ವಾಸದಿಂದ ತಮ್ಮ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ.

ಈ ವೇಳೆ ಕಾಂಗ್ರೆಸ್ ಸೇರುವ ಬಗ್ಗೆ ಪ್ರಸ್ತಾಪಿಸಿದ್ದು, ಹೆಚ್.ಡಿ. ರೇವಣ್ಣ, ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೆಸರು ಪ್ರಸ್ತಾಪ ಮಾಡದೇ `ಯಾರಲ್ಲ ಯಾವನಪ್ಪ ಬಂದ್ರು ನಾ ಗೆಲ್ತೀನಿ’ ಎಂದಿದ್ದಾರೆ. ಕಳೆದ 6 ತಿಂಗಳಿಂದ ನಡೆಯುತ್ತಿದ್ದ ಚರ್ಚೆಗೆ ಕಡೆಗೂ ಸ್ಪಷ್ಟನೆ ಸಿಕ್ಕಿದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಶಾಸಕ ಶಿವಲಿಂಗೇಗೌಡ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *