ವಿದ್ಯುತ್‌ ದರ ಇಳಿಸದಿದ್ರೆ ಪ್ರತಿ ಕೆಜಿ ಅಕ್ಕಿ ಬೆಲೆ 5-10 ರೂ ಏರಿಸುತ್ತೇವೆ: ರೈಸ್‌ ಮಿಲ್‌ ಮಾಲೀಕರ ಎಚ್ಚರಿಕೆ

Public TV
1 Min Read

ಬೆಂಗಳೂರು: ಅನ್ನಭಾಗ್ಯ (Anna Bhagya) ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ (Free Ration) ನೀಡಲು ಸರ್ಕಾರ ಹೆಣಗಾಡುತ್ತಿದ್ದರೆ ಇನ್ನೊಂದು ಕಡೆ ಜನ ಸಮಾನ್ಯರಿಗೆ ಅಕ್ಕಿ ದರ ಏರಿಕೆಯ ಆತಂಕ ಶುರುವಾಗಿದೆ. ರಾಜ್ಯದ ರೈಸ್ ಮಿಲ್‍ಗಳಿಗೆ (Rice Mill) ವಿದ್ಯುತ್ ದರ ದುಪ್ಪಟ್ಟು ಬಂದಿದ್ದು, ಇಲ್ಲಿಂದ ರಪ್ತು ಆಗುವ ಅಕ್ಕಿಗೆ ಪ್ರತಿ ಕೆಜಿಗೆ 5-10 ರೂಪಾಯಿ ದರ ಏರಿಕೆ ಮಾಡುವ ಎಚ್ಚರಿಕೆಯನ್ನ ರೈಸ್ ಮಿಲ್ ಅಸೋಸಿಯೇಷನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ರೈಸ್ ಮಿಲ್ ಮಾಲೀಕರ ಸಮಸ್ಯೆಗೆ ಅಲಿಸದೇ, ವಿದ್ಯುತ್ ಬಿಲ್ (Electricity Bill) ಕಡಿಮೆ ಮಾಡದೇ ಇದ್ದರೆ ಪ್ರತಿ ಕ್ವಿಂಟಾಲ್ ಅಕ್ಕಿ ಬೆಲೆಯನ್ನು 400-800 ರೂಪಾಯಿಗಳಷ್ಟು ಹೆಚ್ಚಿಸುವುದಾಗಿ ಎಚ್ಚರಿಸಿದ್ದಾರೆ.   ಇದನ್ನೂ ಓದಿ: 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

ರಾಜ್ಯದಲ್ಲಿ ಸುಮಾರು 2 ಸಾವಿರ ರೈಸ್ ಮಿಲ್‍ಗಳಿದ್ದು, ವರ್ಷಕ್ಕೆ 30 ರಿಂದ 40 ಮೆಟ್ರಿಕ್ ಟನ್ ನಷ್ಟು ಅಕ್ಕಿಯನ್ನ ಉತ್ಪಾದನೆ ಮಾಡಲಾಗುತ್ತದೆ. ದುಬಾರಿ ವಿದ್ಯುತ್ ಬಿಲ್‍ನಿಂದ ರೈಸ್ ಮಿಲ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮುಂದಿನ ವಾರದೊಳಗೆ 15 ರೂಪಾಯಿ ತನಕ ದರ ಏರಿಕೆಯಾಗುವ ಆತಂಕವೂ ಶುರುವಾಗಿದೆ. ಇದನ್ನೂ ಓದಿ: ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

ಕಳೆದ 15 ದಿನಗಳಿಂದ ಹೋಲ್ ಸೆಲ್ ಅಕ್ಕಿಯ ದರದಲ್ಲಿ ಏರಿಕೆ ಕಂಡಿದ್ದು, ಮುಂದಿನ ವಾರದೊಳಗೆ ಮತ್ತಷ್ಟು ದುಬಾರಿಯಾಗಲಿದೆ. ಸರ್ಕಾರ ಅನ್ನಭಾಗ್ಯ ಯೋಜನೆಗೆ ಸಾಕಷ್ಟು ಅಕ್ಕಿಯನ್ನು ಸಂಗ್ರಹಿಸಲು ಹೆಣಗಾಡುತ್ತಿರುವಾಗ, ಅಕ್ಕಿ ದರ ಏರಿಕೆ ಬಿಸಿಯನ್ನ ಗ್ರಾಹಕರು ಅನುಭವಿಸುವ ಆತಂಕದಲ್ಲಿದ್ದು ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This Article