ಡಿಕೆ ಶಿವಕುಮಾರ್ ಲೂಟಿ ಹೊಡೆಯೋದು ಬಿಟ್ಟರೆ ತಮ್ಮನಾಗಿ ಸ್ವೀಕಾರ ಮಾಡ್ತೀನಿ: ಕುಮಾರಸ್ವಾಮಿ ಷರತ್ತು

Public TV
2 Min Read

ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಲೂಟಿ ಮಾಡೋದು ಬಿಟ್ಟರೆ ಅವರನ್ನು ನನ್ನ ತಮ್ಮ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಷರತ್ತು ವಿಧಿಸಿದ್ದಾರೆ.

ತಮಿಳುನಾಡಿಗೆ (Tamil Nadu) ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ ಟ್ವೀಟ್ ವಿಚಾರ ಇಟ್ಟುಕೊಂಡು ಮಾತನಾಡಿದ್ದ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಟ್ವೀಟ್‌ನಲ್ಲಿ ನೀರು ಬಿಡಿ ಅಂತ ಹೇಳಿಲ್ಲ. ನನ್ನ ಟ್ವೀಟ್‌ನಲ್ಲಿ ಅಣ್ಣ-ತಮ್ಮಂದಿರ ರೀತಿ ಇರಬೇಕು ಅಂತ ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಪರಿಹಾರ ಸಿಗಲ್ಲ. ಹೀಗಾಗಿ ಕೊಟ್ಟು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ತಮಿಳುನಾಡು ರೈತರಿಗೆ ನಮ್ಮ ರೈತರು ಅನ್ಯಾಯ ಮಾಡಿಲ್ಲ. ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದೇನೆ. ಇದನ್ನು ಹೇಳಿದ್ದು ತಪ್ಪಾ? ನಾನು ನೀರು ಬಿಡುತ್ತೇನೆ ಎಂದು ಹೇಳಿರಲಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‍ನ 20-30 ಶಾಸಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ: ಹೆಚ್‍ಡಿಕೆ ಬಾಂಬ್

ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡುತ್ತಿರಾ? ಉಡಾಫೆ ರಾಜಕೀಯ ಮಾಡಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಾ. ಮಾತ್ತೆತ್ತಿದರೆ ಪೆನ್ನು ಕೊಡಿ ಪೆನ್ನು ಕೊಡಿ ಎಂದು ಕೇಳುತ್ತಿದ್ದರು. ನಮ್ಮ ರಾಜ್ಯ ಹಾಳು ಮಾಡಲು ಪೆನ್ನು ಕೇಳಿದ್ರಾ? ನಮ್ಮ ರೈತರನ್ನು ಕಡೆಗಣಿಸಿ ಬೇರೆ ಯಾರನ್ನೋ ಮೆಚ್ಚಿಸೋಕೆ ಪೆನ್ನು ಕೇಳಿದ್ರಾ? ಹುಡುಗಾಟ ಆಡಬೇಡಿ. ಉತ್ತರ ಕೊಡುವಾಗ ನೀರಾವರಿ ಸಚಿವರ ಸ್ಥಾನ ಗಾಂಭೀರ್ಯತೆಯನ್ನು ಕಾಪಾಡಿಕೊಳ್ಳಿ. ಬಿಚ್ಚೋದು ಬಿಚ್ಚೋದು ಎಂದು ಮಾತನಾಡಬೇಡಿ. ನೀವು ಮಾಡಿರುವ ಅವ್ಯವಹಾರಗಳು ಸಾಕಷ್ಟು ಇವೆ. ಜಗಜ್ಜಾಹೀರಾಗಿವೆ. ಹಿಂದೆ ಏನೋ ಮಾಡಿಕೊಂಡು ಆಯ್ತು. ಈಗಲಾದರೂ ಗೌರವಯುತವಾಗಿ ಕೆಲಸ ಮಾಡಿ ಎಂದು ಹರಿಹಾಯ್ದರು. ಇದನ್ನೂ ಓದಿ: ನಾವು ಆಪರೇಷನ್ ಹಸ್ತ ಮಾಡ್ತಿಲ್ಲ‌: ದಿನೇಶ್ ಗುಂಡೂರಾವ್

ರಾಜ್ಯ ಲೂಟಿ ಮಾಡುವುದನ್ನು ನಿಲ್ಲಿಸಿ. ಅಣ್ಣನಾಗಿ ನನ್ನ ಈ ಸಲಹೆ ಸ್ವೀಕಾರ ಮಾಡಿ. ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಲೂಟಿ ಹೊಡೆಯೋದು ಬಿಡಿ ಎಂಬ ನನ್ನ ಸಲಹೆ ಸ್ವೀಕಾರ ಮಾಡಿ. ಇನ್ನು 15 ವರ್ಷ ನೀವೇ ಅಧಿಕಾರ ಮಾಡಿ ಎಂದು ಸಲಹೆ ಕೊಟ್ಟರು. ತಮ್ಮನಾಗಿ ಅಣ್ಣನ ಮಾತು ಕೇಳಿ. ಇಲ್ಲಿಯವರೆಗೂ ಲೂಟಿ ಹೊಡೆದಿರೋದು ಸಾಕು. ಇನ್ನು ಲೂಟಿ ಹೊಡೆಯೋದು ನಿಲ್ಲಿಸಿ. ಜನರ ಬದುಕನ್ನು ಕಟ್ಟಿ ಕೊಡಪ್ಪ. ಇನ್ನು 10 ವರ್ಷ ನೀವೆ ಡಿಸಿಎಂ, ಸಿಎಂ ಆಗಿ ಇದ್ದು ಬಿಡಿ. ಲೂಟಿ ಹೊಡೆಯೋದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಿ. ಈ ಸಲಹೆಯನ್ನು ಒಪ್ಪಿಕೊಂಡರೆ ನಾನು ಡಿಕೆ ಶಿವಕುಮಾರ್ ಅವರನ್ನು ತಮ್ಮ ಅಂತ ಒಪ್ಪಿಕೊಳ್ತೀನಿ ಎಂದು ಷರತ್ತು ವಿಧಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದ್ಲೇ 50 ಜನ ಶಾಸಕರು ಬಿಜೆಪಿಗೆ ಬರ್ತಾರೆ: ಮಾಜಿ ಶಾಸಕ ಅಮೃತ ದೇಸಾಯಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್