ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಭಾರತ ಹಿಂದೂ-ಪಾಕಿಸ್ತಾನ ಆಗಲಿದೆ: ಶಶಿ ತರೂರ್

Public TV
1 Min Read

ತಿರುವನಂತಪುರಂ: ಭಾರತೀಯ ಜನತಾ ಪಕ್ಷ (ಬಿಜೆಪಿ) `ಹಿಂದೂತ್ವ ಸಿದ್ಧಾಂತ’ ವನ್ನು ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲವು ಸಾಧಿಸಿದರೆ, ಭಾರತವನ್ನು ಹಿಂದೂ ಪಾಕಿಸ್ತಾನವಾಗಿ ಬದಲಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಬುಧವಾರ ತಿರುವನಂತಪುರಂ ನಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ ಶಶಿ ತರೂರ್, ಬಿಜೆಪಿ ಹೊಸ ಸಂವಿಧಾನವನ್ನು ರಚಿಸಿ, ಅಲ್ಪಸಂಖ್ಯಾತರಿಗೆ ಹಕ್ಕು ನೀಡದ ಪಾಕಿಸ್ತಾನದ ರೀತಿ ಭಾರತವನ್ನು ಮಾರ್ಪಾಡಿಸಿ ಹಿಂದೂ ರಾಷ್ಟ್ರದ ಹಾದಿಯನ್ನು ಸುಗಮಗೊಳಸಲಿದೆ ಎಂದು ಹೇಳಿದ್ದಾರೆ.

ಬಿಜೆಪಿಯು ಬರುವ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಅಧಿಕಾರಕ್ಕೆ ಬಂದರೆ, ನಮ್ಮ ಪ್ರಜಾಪ್ರಭುತ್ವದ ಎಲ್ಲ ಅಂಶಗಳನ್ನು ಭಾರತದ ಸಂವಿಧಾನದಿಂದ ತೆಗೆದು ಹಾಕುತ್ತಾರೆ. ತಮಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಹೊಸ ಸಂವಿಧಾನವನ್ನು ಸೃಷ್ಟಿಸುತ್ತಾರೆ ಎಂದು ಶಶಿ ತರೂರ್ ಭವಿಷ್ಯ ನುಡಿದರು.

ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೇಗೆ ಉಗ್ರ ಸ್ವರೂಪ ಪಡೆದಿದೆಯೋ, ಅದೇ ರೀತಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಧರ್ಮ ಭಯೋತ್ಪಾದನೆಯನ್ನು ನಡೆಸುತ್ತದೆ. ಹಿಂದೂಗಳನ್ನು ಮಾತ್ರ ಪರಿಗಣಿಸಿ ಇತರೇ ಅಲ್ಪಸಂಖ್ಯಾತ ಪ್ರಜೆಗಳನ್ನು ನಿರ್ಲಕ್ಷಿಸುತ್ತದೆ ಎಂಬ ಅರ್ಥದಲ್ಲಿ `ಹಿಂದೂ ಪಾಕಿಸ್ತಾನ’ ಎಂದು ವ್ಯಂಗ್ಯವಾಗಿ ಶಶಿ ತರೂರ್ ಮಾತನಾಡಿದ್ದಾರೆ.

ಶಶಿ ತರೂರು ಈ ನಿಲುವಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಬಿಜೆಪಿ ಪಕ್ಷವನ್ನು ಅವಮಾನಿಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಬಜೆಪಿ ಸದಸ್ಯರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *