ಬೆಂಗಳೂರು: ರಾಜ್ಯದಲ್ಲಿ ಯೂರಿಯಾ ಕೊರತೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಬಿಜೆಪಿಯವರು ರಾಜಕೀಯ ಮಾಡೋದು ಬಿಟ್ಟು ಧೈರ್ಯವಿದ್ದರೆ ಕೇಂದ್ರ ಸರ್ಕಾರದಿಂದ (Central Govt) ಯೂರಿಯಾ ಕೊಡಿಸಲಿ ಎಂದು ಬಿಜೆಪಿ (BJP) ನಾಯಕರ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಯೂರಿಯಾ ಕೊರತೆ ಅಂತ ಬಿಜೆಪಿ ಪ್ರತಿಭಟನೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಬಹಳ ಸ್ಪಷ್ಟವಾಗಿ ಎಲ್ಲೆಲ್ಲಿ ಯೂರಿಯಾ ಸರಬರಾಜು ಆಗಿದೆ ಎಂದು ಹೇಳಿದ್ದೇನೆ. ಡಿಸಿ, ಸೆಕ್ರೆಟರಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬಿಜೆಪಿಯವರಿಗೆ ಮಾತಡೋಕೆ ಬೇರೆ ವಿಷಯ ಇಲ್ಲ ಅದಕ್ಕೆ ಪ್ರತಿಭಟನೆ ಅಂತಿದ್ದಾರೆ. ಇವರಿಗೆ ಕೇಂದ್ರಕ್ಕೆ ಹೋಗಿ ಹೇಳೋ ಧಮ್ ಇಲ್ಲ. ನಾನು ಎಲ್ಲ ಎಂಪಿಗಳಿಗೆ ಹಾಗೂ ಕೇಂದ್ರ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಸಿಎಂ ಅವರು ಕೂಡ ಪತ್ರ ಬರೆದಿದ್ದಾರೆ. ಇನ್ನೂ ಏನು ಮಾಡಬೇಕಂತೆ ವಿಜಯೇಂದ್ರ, ಅಶೋಕ್‌ಗೆ ತಿರುಗೇಟು ನೀಡಿದರು.ಇದನ್ನೂ ಓದಿ:ಚೆಸ್ ವಿಶ್ವಕಪ್ | ಅನುಭವಿ ಕೊನೆರು ಹಂಪಿಗೆ ಸೋಲು, 19ರ ದಿವ್ಯಾ ದೇಶಮುಖ್ ಚಾಂಪಿಯನ್
ಕೇಂದ್ರವೇ ನಮಗೆ ಯೂರಿಯಾ ಒದಗಿಸುತ್ತದೆ. ಹೀಗಾಗಿ ನಾವು ಇದರಲ್ಲಿ ರಾಜಕೀಯ ಮಾಡಲು ಹೋಗಿರಲಿಲ್ಲ. ಇವರು ರಾಜಕೀಯವಾಗಿ ಮಾತಾಡಿದ್ರೆ ನಾವೇನು ಮಾಡೋಕೆ ಆಗಲ್ಲ. ರಾಜ್ಯದ ಒಬ್ಬ ಮಂತ್ರಿಗಾದರೂ ಕೇಂದ್ರಕ್ಕೆ ಪತ್ರ ಬರೆಯುವ ಧಮ್ ಇದ್ಯಾ? ರಾಜ್ಯದ ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ. ಕೊಪ್ಪಳದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡ್ತಿದ್ದಾರೆ. ಇದಕ್ಕೆ ಏನೂ ಮಾಡಲು ಆಗಲ್ಲ. ರೈತರ ಪರ ನಾವಿದ್ದೇವೆ. ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾ ಬರಲು ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ. ಬಿಜೆಪಿಯವರಿಗೆ ಧಮ್ಮು, ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಅಂತ ಕಿಡಿಕಾರಿದರು.
ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಆಗ್ತಿದೆ ಎಂಬ ಬಿಜೆಪಿ ಅರೋಪಕ್ಕೆ ತಿರುಗೇಟು ಕೊಟ್ಟ ಅವರು, ಇಲ್ಲದೆ ಇರೋದನ್ನ ಹೇಳಿದ್ರೆ ನಾವು ಏನು ಮಾಡೋಕೆ ಆಗಲ್ಲ. ವಿಜಿಲೆನ್ಸ್ ಇದೆ, ಸಾವಿರಾರು ರೀಟೈಲ್ ಸೆಂಟರ್ ಇವೆ. ಇಂತಹದ್ದು ಕಂಡು ಬಂದ್ರೆ ಬ್ಲಾಕ್ ಲಿಸ್ಟ್ಗೆ ಸೇರಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಎಂಟು ಮೆಟ್ರಿಕ್ ಟನ್ ಯೂರಿಯಾ ಕೊಟ್ಟಿದೆ. ಆರು ಮೆಟ್ರಿಕ್ ಟನ್ ಎಲ್ಲಿ ಹೋಯ್ತು ಎಂಬ ವಿಜಯೇಂದ್ರ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ವಿಜಯೇಂದ್ರಗೆ ಬುದ್ಧಿ ಇದ್ಯಾ? ಹಳೆಯ ಬ್ಯಾಲೆನ್ಸ್ ಯಾವುದು ಇದೆ ಅಂತ ವಿಜಯೇಂದ್ರಗೆ ಗೊತ್ತಿಲ್ಲ. ಪಾಪ ಅವರಿಗೆ ಅನುಭವದ ಕೊರತೆ ಇದೆ. ನಮ್ಮ ಅಶೋಕಣ್ಣನಿಗೆ ಎಲ್ಲಾ ಗೊತ್ತಿದೆ. ಅಧಿಕಾರ ಮಾಡಿದ ಅನುಭವ ಇದೆ. ಪಾಪ ಅವರಿಗೆ ಮಾತಾಡೋಕೆ ಬರಲ್ಲ. ಎಂಟೂವರೇ ಲಕ್ಷದಲ್ಲಿ ಆರು ಲಕ್ಷ ಯೂರಿಯಾ ಬಂದಿದೆ. ಇನ್ನೂ ಒಂದೂವರೇ ಲಕ್ಷ ಯೂರಿಯಾ ಬರಬೇಕಿದೆ. ನಾನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಜೊತೆ ಮಾತಾಡಿದ್ದೇನೆ. ಇಲ್ಲಿ ಇರೋರಿಗೆ ಅದರ ಬಗ್ಗೆ ಗೊತ್ತಿಲ್ಲ. ಕೇಂದ್ರದ ಜೊತೆ ಮಾತನಾಡಿ ಬಾಕಿ ಇರುವ ಯೂರಿಯಾವನ್ನ ಕೊಡಿಸಲಿ ಎಂದು ವಿಜಯೇಂದ್ರಗೆ ಸವಾಲ್ ಹಾಕಿದರು.ಇದನ್ನೂ ಓದಿ: ಮಜಾವಾದಿ ಸಿದ್ದರಾಮಯ್ಯ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು – ಜೆಡಿಎಸ್