ಉಳಿದ ಇಡ್ಲಿಗಳಿಂದ ಮಾಡಿ ಇಡ್ಲಿ ಮಂಚೂರಿಯನ್

Public TV
2 Min Read

ಅದೆಷ್ಟೋ ಮನೆಗಳಲ್ಲಿ ಉಳಿದ ತಿಂಡಿಗಳನ್ನು ಬಿಸಾಡಿ ಮರುದಿನ ಮತ್ತೆ ಹೊಸ ತಿಂಡಿಯನ್ನು ಮಾಡುತ್ತಾರೆ. ಉಳಿದ ತಿಂಡಿಗಳಿಂದ ಏನಾದರು ಹೊಸ ತಿಂಡಿ ಮಾಡಬಹುದಾ ಎಂಬ ಯೋಚನೆ ಸಾಮಾನ್ಯ ಗೃಹಿಣಿಯರಿಗೆ ಬಂದೇ ಬರುತ್ತದೆ. ಇಂದು ಅದೇ ರೀತಿಯಾದ ಹೊಸ ರೆಸಿಪಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಅದೇನೆಂದರೆ ಉಳಿದ ಇಡ್ಲಿಗಳಿಂದ ಮಾಡಬಹುದಾದ ಇಡ್ಲಿ ಮಂಚೂರಿಯನ್ ರೆಸಿಪಿ. ಹಾಗಿದ್ದರೆ ಈ ರೆಸಿಪಿಯನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಕೆಲವೇ ಪದಾರ್ಥ ಸಾಕು – ಸಿಹಿ ಸಿಹಿ ಬಾಳೆಹಣ್ಣು, ಬಿಸ್ಕಿಟ್ ಹಲ್ವಾ ಮಾಡಿ

ಬೇಕಾಗುವ ಸಾಮಗ್ರಿಗಳು:
ಇಡ್ಲಿ- 5
ಹೆಚ್ಚಿದ ಟೊಮೆಟೊ- 4 ಚಮಚ
ಹುಣಸೇ ಹಣ್ಣಿನ ಪೇಸ್ಟ್- ಅರ್ಧ ಚಮಚ
ಗರಂ ಮಸಾಲ ಪೌಡರ್- 1 ಚಮಚ
ಉಪ್ಪು- 1 ಚಮಚ
ಹೆಚ್ಚಿದ ಈರುಳ್ಳಿ- ಒಂದು ಹಿಡಿ
ಹೆಚ್ಚಿದ ಹಸಿಮೆಣಸು- 2
ಅರಶಿಣ ಪೌಡರ್- 1 ಚಮಚ
ಎಣ್ಣೆ- 2 ಚಮಚ
ಜೀರಿಗೆ- ಅರ್ಧ ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ:

  • ಮೊದಲಿಗೆ ಇಡ್ಲಿಗಳನ್ನು ಚೌಕಾಕಾರದಲ್ಲಿ ತುಂಡು ಮಾಡಿಕೊಳ್ಳಿ.
  • ಬಳಿಕ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಗ್ಯಾಸ್‌ನಲ್ಲಿ ಇಡಿ. ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಅರ್ಧ ಚಮಚ ಜೀರಿಗೆಯನ್ನು ಹಾಕಿ. ಜೀರಿಗೆ ಕೆಂಪು ಬಣ್ಣಕ್ಕೆ ಬಂದ ಮೇಲೆ ಅದಕ್ಕೆ ಹೆಚ್ಚಿದ ಟೊಮೆಟೊ, ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿಯನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಹುರಿದುಕೊಳ್ಳಿ. ಬಳಿಕ ಅದಕ್ಕೆ ಹುಣಸೆಹಣ್ಣಿನ ಪೇಸ್ಟ್ ಅನ್ನು ಸೇರಿಸಿಕೊಂಡು ಚನ್ನಾಗಿ ತಿರುವಿಕೊಳ್ಳಿ.
  • ಬಳಿಕ ಅದಕ್ಕೆ ಒಂದು ಚಮಚ ಉಪ್ಪು, ಗರಂ ಮಸಾಲ ಮತ್ತು ಅರಶಿಣ ಪೌಡರ್ ಅನ್ನು ಹಾಕಿಕೊಳ್ಳಿ. ಖಾರ ಜಾಸ್ತಿ ಬೇಕಾದವರು ಸ್ವಲ್ಪ ಅಚ್ಚಖಾರದ ಪೌಡರ್ ಸೇರಿಸಿಕೊಳ್ಳಬಹುದು. ಟೊಮೆಟೋ ಮೃದುವಾಗಲು ಪ್ರಾರಂಭವಾದ ಮೇಲೆ ಅದಕ್ಕೆ ತುಂಡು ಮಾಡಿದ್ದ ಇಡ್ಲಿಗಳನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದನ್ನು ಐದು ನಿಮಿಷಗಳ ಕಾಲ ಆರಲು ಬಿಡಿ.
  • ಇದನ್ನು ಒಂದು ಪ್ಲೇಟ್‌ಗೆ ಹಾಕಿ ಅದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಈಗ ಇಡ್ಲಿ ಮಂಚೂರಿಯನ್ ತಿನ್ನಲು ರೆಡಿ. ಇದನ್ನೂ ಓದಿ: ಟ್ರೈ ಮಾಡಿ ಮುಂಬೈ ಮಸಾಲ ಸ್ಯಾಂಡ್‌ವಿಚ್….
Share This Article