– ಮಿನಿಮಮ್ ಬ್ಯಾಲೆನ್ಸ್ 10,000 ರೂ. ನಿಂದ 50,000 ರೂ.ಗೆ ಏರಿಕೆ
ನವದೆಹಲಿ: ಆಗಸ್ಟ್ 1ರಿಂದ ಉಳಿತಾಯ ಖಾತೆಗಳನ್ನು ತೆರೆಯುವ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್ (ICICI Bank) ಶಾಕ್ ಕೊಟ್ಟಿದೆ. ಉಳಿತಾಯ ಖಾತೆಗಳ (Savings Account) ಮಾಸಿಕ ಕನಿಷ್ಠ ಬ್ಯಾಲೆನ್ಸ್ (Monthly Minimum Balance) ಮೊತ್ತವನ್ನು 10,000 ರೂ.ನಿಂದ 50,000 ರೂ.ಗೆ ಏರಿಕೆ ಮಾಡಿದೆ.
ಈ ನಿಯಮ ಆಗಸ್ಟ್ 1ರ ನಂತರ ತೆರೆಯಲಾದ ಹೊಸ ಉಳಿತಾಯ ಬ್ಯಾಂಕ್ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆ.1ರ ಬಳಿಕ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಉಳಿತಾಯ ಖಾತೆ ಓಪನ್ ಮಾಡಿದ ಗ್ರಾಹಕರು ದಂಡವನ್ನು ತಪ್ಪಿಸಲು ಕನಿಷ್ಠ ಸರಾಸರಿ ಮಾಸಿಕ ಬ್ಯಾಲೆನ್ಸ್ ಅನ್ನು 50,000 ರೂ. ಕಾಯ್ದುಕೊಳ್ಳಬೇಕು. ಇದಕ್ಕೂ ಮುನ್ನ ಕನಿಷ್ಠ ಬ್ಯಾಲೆನ್ಸ್ 10,000 ರೂ. ಇತ್ತು. ಆದರೆ ಈಗ ಈ ಮೊತ್ತವನ್ನು 50,000 ರೂ.ಗೆ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಬಾಗಲಕೋಟೆ | ಸಹಪಾಠಿಗಳಿಂದ ರ‍್ಯಾಗಿಂಗ್ – ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ಅರೆನಗರ ಪ್ರದೇಶಗಳಲ್ಲಿ ಹೊಸ ಗ್ರಾಹಕರು ಮಾಸಿಕ ಕನಿಷ್ಠ ಸರಾಸರಿ 25,000 ರೂ. ಮತ್ತು ಗ್ರಾಮೀಣ ಗ್ರಾಹಕರು 10,000 ರೂ. ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ. ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಹಳೆಯ ಗ್ರಾಹಕರಿಗೆ ತಿಂಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ 5,000 ರೂ. ಆಗಿರುತ್ತದೆ. ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ಕೊರತೆಯ 6%ನಷ್ಟು ಅಥವಾ 500 ರೂ. ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದ್ರೆ ಉನ್ನತ ಶಿಕ್ಷಣ ವ್ಯವಸ್ಥೆ ಅಪ್‌ಗ್ರೇಡ್ ಆಗ್ಬೇಕು: ಹೆಚ್‌ಆರ್ ರಂಗನಾಥ್
ಬ್ಯಾಂಕ್ ನಗದು ವಹಿವಾಟುಗಳಿಗೆ ತನ್ನ ಸೇವಾ ಶುಲ್ಕಗಳನ್ನು ಸಹ ಪರಿಷ್ಕರಿಸಿದೆ. ಶಾಖೆಗಳಲ್ಲಿ ಮತ್ತು ನಗದು ಮರುಬಳಕೆ ಯಂತ್ರಗಳಲ್ಲಿ ನಗದು ಠೇವಣಿಗಳಿಗಾಗಿ, ಗ್ರಾಹಕರಿಗೆ ತಿಂಗಳಿಗೆ ಮೂರು ಉಚಿತ ವಹಿವಾಟುಗಳನ್ನು ಅನುಮತಿಸಲಾಗುತ್ತದೆ. ಅದರ ನಂತರ, ಪ್ರತಿ ವಹಿವಾಟಿಗೆ 150 ರೂ. ಶುಲ್ಕ ವಿಧಿಸಲಾಗುವುದು. ಅಲ್ಲದೇ 1 ಲಕ್ಷ ಉಚಿತ ಸಂಚಿತ ಮಾಸಿಕ ಮಿತಿ ಹೇರಲಾಗಿದೆ. ಈ ಮಿತಿಯನ್ನು ಮೀರಿದಲ್ಲಿ ಪ್ರತಿ 1,000 ರೂ.ಗೆ 3.5 ರೂ. ಅಥವಾ 150, ಯಾವುದು ಹೆಚ್ಚೋ ಅದು ಆಗಿರುತ್ತದೆ. ಮೂರನೇ ವ್ಯಕ್ತಿಯ ಹಿಂಪಡೆಯುವಿಕೆಗಳನ್ನು ಪ್ರತಿ ವಹಿವಾಟಿಗೆ 25,000 ರೂ.ಗೆ ಮಿತಿಗೊಳಿಸಲಾಗಿದೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧೃವ ಸರ್ಜಾ ವಿರುದ್ಧ ಎಫ್‌ಐಆರ್