ಐಸ್‌ಕ್ರೀಂ ಪ್ರಿಯರೇ ಎಚ್ಚರ – ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ

Public TV
2 Min Read

– ಕೆಮಿಕಲ್‌ಯುಕ್ತ ಕೇಕ್ ತಿಂದ್ರೂ ಬರುತ್ತಂತೆ ಕ್ಯಾನ್ಸರ್

ಬೆಂಗಳೂರು: ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಎಂದು ಐಸ್‌ಕ್ರೀಂ (Icecream) ತಿನ್ನುವವರಿಗೆ ಇದು ಶಾಕಿಂಗ್ ಸುದ್ದಿ. ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಐಸ್‌ಕ್ರೀಂಗಳನ್ನ ಲ್ಯಾಬ್‌ಗೆ ರವಾನೆ ಮಾಡಿದ್ದಾರೆ.

ಪ್ಲಾಸ್ಟಿಕ್ ಇಡ್ಲಿ ಆಯ್ತು, ಕಲ್ಲಂಗಡಿ ಆಯ್ತು, ಕಲರ್ ಕಲರ್ ಕಬಾಬ್ ಆಯ್ತು, ಗೋಬಿ ಮಂಚೂರಿ ಆಯ್ತು, ಪನ್ನೀರ್ ಆಯ್ತು. ಈಗ ಬಿಸಿಲ ಬೇಗೆಯಲ್ಲಿ ದೇಹ ತಣ್ಣಗಾಗಿಸುವ ಕೂಲ್ ಕೂಲ್ ಐಸ್‌ಕ್ರೀಂನ ಸರದಿಯಾಗಿದೆ. ಇದನ್ನೂ ಓದಿ: ಯುಗಾದಿಯಂದೇ ರೌಡಿಶೀಟರ್ ಬರ್ಬರ ಹತ್ಯೆ – ರೌಡಿಸಂ ಬಿಟ್ಟು ಊರು ಸೇರಿದ್ದ ನೇಪಾಳಿ ಮಂಜ!

ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕೂಡ ಆಹಾರ ಪದಾರ್ಥಗಳನ್ನ ತಪಾಸಣೆ ಮಾಡುತ್ತಾರೆ. ಈಗ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಐಸ್‌ಕ್ರೀಂ ಅನ್ನು ಜನರು ಜಾಸ್ತಿ ಸೇವನೆ ಮಾಡುತ್ತಾರೆ. ಐಸ್‌ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಅಥಣಿಯಲ್ಲಿ (Athani) ಅನಧಿಕೃತ ಫ್ಯಾಕ್ಟರಿಯಲ್ಲಿ ಕಲರ್ ಕಲರ್ ಐಸ್‌ಕ್ಯಾಂಡಿ ಮಾಡುವುದನ್ನು ಪಬ್ಲಿಕ್ ಟಿವಿ ಬಯಲಿಗೆಳೆದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಐಸ್‌ಕ್ರೀಂ ಟೆಸ್ಟಿಂಗ್‌ಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಆಸ್ತಿ ತೆರಿಗೆ ಪಾವತಿಗೆ ಇಂದೇ ಕೊನೇ ದಿನ – ತಪ್ಪಿದ್ರೆ 100% ದಂಡ ಫಿಕ್ಸ್

ಇನ್ನೂ ಐಸ್‌ಕ್ರೀಂ ಆದ್ಮೇಲೆ ಕೇಕ್‌ನ (Cake) ಸರದಿ. ಕೇಕ್‌ಗೆ ಬಣ್ಣ ಬರಲು ಕೆಮಿಕಲ್ ಬಳಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಕಲರ್ ಬಳಕೆ, ಕೆಮಿಕಲ್ ಬಳಕೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.

ಕೇಕ್‌ಗೆ ಕಲರ್ ಕೆಮಿಕಲ್, ಏನೆಲ್ಲ ಪ್ರಾಬ್ಲಂ?
ಸನ್‌ಸೆಟ್ ಯೆಲ್ಲೋ, ಸನ್ ಸೆಟ್ ಗ್ರೀನ್ ಕಲರ್ ಬಳಕೆ ಮಾಡುವುದರಿಂದ ಕಾರ್ಸ್ಮೋಜೆನಿಕ್‌ ಕ್ಯಾನ್ಸರ್‌ಕಾರಕ ಉತ್ಪತ್ತಿಯಾಗುತ್ತದೆ. ಕ್ಯಾನ್ಸರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

ಕೇಕ್ ಉತ್ಪತ್ತಿಯಲ್ಲೂ ಕಲಬೆರಕೆ, ಕಲರ್ ಬೆರಕೆ ಮತ್ತು ಕೆಮಿಕಲ್ ಬಳಕೆ ಮಾಡುವುದರಿಂದ ಜನರು ತೀರಾ ಸಮಸ್ಯೆಗೆ ತುತ್ತಾಗಿ ಎಫ್‌ಎಸ್‌ಎಸ್‌ಐನಿಂದ ಪ್ರಮಾಣಿಕರಿಸಿದ್ದನ್ನ ತಿನ್ನಬೇಕಾಗುತ್ತದೆ. ಅಲ್ಲದೇ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ.

Share This Article