ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

Public TV
2 Min Read

ಧರ್ಮಶಾಲಾ: ಆರಂಭಿಕ ಆಟಗಾರ ಡೇವಿಡ್‌ ಮಲಾನ್‌ (Dawid Malan) ಅವರ ಸ್ಫೋಟಕ ಶತಕದ ಆಟದಿಂದ ಬಾಂಗ್ಲಾದೇಶದ (Bangladesh) ವಿರುದ್ಧ ಇಂಗ್ಲೆಂಡ್‌ (England) 137 ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್‌ ಟೂರ್ನಿಯಲ್ಲಿ (World Cup Cricket) ಶುಭಾರಂಭ ಮಾಡಿದೆ.

ಇಂಗ್ಲೆಂಡ್‌ ನೀಡಿದ 365 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 48.2 ಓವರ್‌ಗಳಲ್ಲಿ 227 ರನ್‌ಗಳಿಗೆ ಸರ್ವಪತನ ಕಂಡಿತು.

ಬಾಂಗ್ಲಾ ಪರವಾಗಿ ಆರಂಭಿಕ ಆಟಗಾರ ಲಿಟ್ಟನ್‌ ದಾಸ್‌ 76 ರನ್‌ (66 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಮುಷ್ಫಿಕರ್‌ ರಹೀಂ 51 ರನ್‌ (64 ಎಸೆತ, 4 ಬೌಂಡರಿ) ತೌಹಿದ್‌ 39 ರನ್‌ (61 ಎಸೆತ, 2 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.  ಇದನ್ನೂ ಓದಿ: ಪಾಕ್‌ ಉಗ್ರರನ್ನ ಹತ್ಯೆಗೈದ ಕಮಾಂಡೋಗಳಿಂದಲೇ ಭಾರತ-ಪಾಕ್ ಪಂದ್ಯಕ್ಕೆ ಭದ್ರತೆ – ಇಲ್ಲಿದೆ ಡಿಟೇಲ್ಸ್‌

ರೀಸ್ ಟೋಪ್ಲಿ 4 ವಿಕೆಟ್‌, ಕ್ರೀಸ್‌ ವೋಕ್ಸ್‌ 2 ವಿಕೆಟ್‌ ಪಡೆದರು. ಸ್ಯಾಮ್‌ ಕರ್ರನ್‌, ಮಾರ್ಕ್‌ ವುಡ್‌, ಅದಿಲ್‌ ರಶೀದ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಪರವಾಗಿ ಜಾನಿ ಬೈರ್‌ಸ್ಟೋವ್‌ ಮತ್ತು ಡೇವಿಡ್‌ ಮಲಾನ್‌ ಮೊದಲ ವಿಕೆಟಿಗೆ 107 ಎಸೆತಗಳಲ್ಲಿ 115 ರನ್‌ ಜೊತೆಯಾಟವಾಡಿದರು. ಜಾನಿ ಬೈರ್‌ಸ್ಟೋವ್‌ 52 ರನ್‌(59 ಎಸೆತ, 8 ಬೌಂಡರಿ ಹೊಡೆದು ಔಟಾದರೆ, ಮಲಾನ್‌ 140 ರನ್‌ (107 ಎಸೆತ, 16 ಬೌಂಡರಿ, 5 ಸಿಕ್ಸರ್‌), ನಾಯಕ ಜೋ ರೂಟ್‌ 82 ರನ್‌ (68 ಎಸೆತ, 8 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು. ಅಂತಿಮವಾಗಿ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 364 ರನ್‌ ಹೊಡೆಯಿತು.

ಮಲಾನ್‌ ದಾಖಲೆ:
ಡೇವಿಡ್‌ ಮಲಾನ್‌ ಕೇವಲ 23 ಇನ್ನಿಂಗ್ಸ್‌ನಲ್ಲಿ 6ನೇ ಶತಕ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆ ಪಾಕಿಸ್ತಾನದ ಇಮಾನ್‌ ಉಲ್‌ ಹಕ್‌ 27 ಇನ್ನಿಂಗ್ಸ್‌, ಶ್ರೀಲಂಕಾದ ಉಪುಲ್‌ ತರಂಗಾ 29 ಇನ್ನಿಂಗ್ಸ್‌ನಲ್ಲಿ 6 ಶತಕ ಹೊಡೆದಿದ್ದರು.

ಶತಕ ಹೊಡೆಯುವ ಜೊತೆ ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ ಗರಿಷ್ಠ ರನ್‌ ಹೊಡೆದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಮಲಾನ್‌ ಪಾತ್ರವಾಗಿದ್ದಾರೆ. ಮೆಹ್ದಿ ಹಸನ್‌ ಓವರ್‌ನಲ್ಲಿ 2 ಸಿಕ್ಸ್‌, 2 ಬೌಂಡರಿ,   ಸಿಂಗಲ್‌ ಸೇರಿ ಒಟ್ಟು 21 ರನ್‌ ಚಚ್ಚುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆ ಶ್ರೀಲಂಕಾ ವಿರುದ್ಧ ಜೋಸ್‌ ಬಟ್ಲರ್‌ ಮತ್ತು ಇಯನ್‌ ಮಾರ್ಗನ್‌ 20 ರನ್‌ ಚಚ್ಚಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್