ಥರ್ಡ್ ಅಂಪೈರ್ ತೀರ್ಪು ನೋಡಿ ‘ಹಣೆ ಚಚ್ಚಿಕೊಂಡ’ ಹಿಟ್ ಮ್ಯಾನ್

Public TV
2 Min Read

ಬೆಂಗಳೂರು: ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿದ ತೀರ್ಪನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಕುಟುಕಿದ್ದಾರೆ.

ಟ್ವೀಟ್ ಮಾಡಿ ಐಸಿಸಿ ಕಾಲೆಳೆದಿರುವ ರೋಹಿತ್ ಶರ್ಮಾ ಅವರು, ಚೆಂಡು ಹಾಗೂ ಬ್ಯಾಟ್ ಮಧ್ಯೆ ಇರುವ ಅಂತರನ್ನು ಫೋಟೋ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಹಣೆ ಬಡೆದುಕೊಳ್ಳುತ್ತಿರುವ ಹಾಗೂ ಕಣ್ಣುಗಳ ಇಮೋಜಿಯನ್ನು ಹಾಕಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಚಿನ್, ಲಾರಾ ಹಿಂದಿಕ್ಕಿ ಕೊಹ್ಲಿ ವಿಶ್ವದಾಖಲೆ

ವೆಸ್ಟ್ ವಿಂಡೀಸ್ ಬೌಲರ್ ಕೆಮರ್ ರೂಚ್ ಎಸೆದ ಟೀಂ ಇಂಡಿಯಾ ಇನ್ನಿಂಗ್ಸ್ ನ ಆರನೇ ಓವರ್ ನ ಅಂತಿಮ ಎಸೆತವನ್ನು ರೋಹಿತ್ ಶರ್ಮಾ ಎದುರಿಸಿದರು. ಈ ವೇಳೆ ಚಂಡು ಬ್ಯಾಟ್ ಹಾಗೂ ಪ್ಯಾಡ್ ಮಧ್ಯೆ ಸಾಗಿ ವಿಕೆಟ್ ಕೀಪರ್ ಶಾಯ್ ಹೋಪ್ ಕೈಸೇರಿತ್ತು. ಇದನ್ನೂ ಓದಿ: ವಿಶ್ವಕಪ್‍ನಲ್ಲಿ ಪಾಕಿಗೆ ಭಾರತ ಸಹಾಯ ಮಾಡಲಿ – ಅಕ್ತರ್ ಮನವಿ

ಅಂಪೈರ್ ಔಟ್ ನೀಡದ ಹಿನ್ನೆಲೆಯಲ್ಲಿ ವಿಂಡೀಸ್ ಡಿಆರ್‍ಎಸ್ ಮೊರೆ ಹೋಗಿತ್ತು. ಡಿಆರ್‍ಎಸ್ ರಿವ್ಯೂ ಪರೀಶೀಲನೆ ವೇಳೆ ಬ್ಯಾಟ್ ಚೆಂಡು ತಾಗಿರಲಿಲ್ಲ. ಅಲ್ಟ್ರಾ ಎಡ್ಜ್ ನಲ್ಲಿ ಚೆಂಡ್ ಪ್ಯಾಡ್‍ಗೆ ತಗಲಿದ್ದನ್ನು ಗಮನಿಸಿದ ಮೂರನೇ ಅಂಪೈರ್ ಔಟ್ ತೀರ್ಪು ನೀಡುವಂತೆ ಸೂಚನೆ ನೀಡಿದ್ದರು.

https://twitter.com/IamRs45Fc/status/1144189062284103680

ಔಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ರೋಹಿತ್ ಶರ್ಮಾ ನಕ್ಕು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಆದರೆ ಥರ್ಡ್ ಅಂಪೈರ್ ಮೈಕಲ್ ಗೌಫ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಥರ್ಡ್ ಅಂಪೈರ್ ಗೆ ಕಣ್ಣು ಕಾಣಿಸುವುದಿಲ್ಲ. ಅವರು ಕುರುಡರಾಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ವಿಶ್ವಕಪ್‍ನಲ್ಲಿ ಮಿಂಚುತ್ತಿರುವ ಶಮಿಗೆ `ಲಫಂಗ’ ಎಂದ ಪತ್ನಿ ಹಸೀನ್

ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದಾಗ ಪತ್ನಿ ರಿತಿಕಾ ಸಿಂಗ್ ವಾಟ್ ಎಂದು ಹೇಳಿ ಅಸಮಾಧಾನ ಹೊರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆಟಗಾರರು ಶಿಸ್ತು ಉಲ್ಲಂಘಿಸಿದರೆ ಅವರ ವಿರುದ್ಧ ದಂಡ ಹಾಕಲಾಗುತ್ತದೆ. ಮೈದಾನದಲ್ಲಿ ಅಂಪೈರ್ ಗಳು ತಪ್ಪು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳಬಹುದು. ಥರ್ಡ್ ಅಂಪೈರ್ ತಪ್ಪು ತೀರ್ಪನ್ನು ಹೇಗೆ ಒಪ್ಪಿಕೊಳ್ಳುವುದು. ತಪ್ಪು ತೀರ್ಪು ನೀಡುವ ಅಂಪೈರ್ ಗಳಿಗೆ ಐಸಿಸಿ ಯಾಕೆ ದಂಡ ವಿಧಿಸುವುದಿಲ್ಲ ಎಂದು ಸರ್ ಜಡೇಜಾ ಫ್ಯಾನ್ ಅಸಮಾಧಾನ ಹೊರಹಾಕಿದ್ದಾರೆ.

ಥರ್ಡ್ ಅಂಪೈರ್ ಮೈಕಲ್ ಗೋ ಇಂಗ್ಲೆಂಡ್ ಮೂಲದವರು. ಇದೊಂದು ಅತ್ಯಂತ ತಪ್ಪು ತೀರ್ಪು, ಥರ್ಡ್ ಅಂಪೈರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *