ನೆದರ್‌ಲ್ಯಾಂಡ್‌ ವಿರುದ್ಧ 93 ರನ್‌ಗಳ ಭರ್ಜರಿ ಜಯ – ವಿಶ್ವಕಪ್‌ನಲ್ಲಿ ಅಮೆರಿಕಗೆ ಮೊದಲ ಗೆಲುವು

2 Min Read

ಚೆನ್ನೈ: ನೆದರ್‌ಲ್ಯಾಂಡ್‌(Netherlands) ವಿರುದ್ಧ 93 ರನ್‌ಗಳ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಅಮೆರಿಕ (USA) ಟಿ20 ವಿಶ್ವಕಪ್‌ನಲ್ಲಿ(ICC Men’s T20 World Cup) ಮೊದಲ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಅಮೆರಿಕ 6 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು. ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ನೆದರ್‌ಲ್ಯಾಂಡ್‌ 15.5 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್‌ ಆಯ್ತು.

ನೆದರ್‌ಲ್ಯಾಂಡ್‌ ಪರ ಬಾಸ್ ಡಿ ಲೀಡೆ 23 ರನ್‌, ನಾಯಕ ಸ್ಕಾಟ್ ಎಡ್ವರ್ಡ್ಸ್ 20 ರನ್‌ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಅಮೆರಿಕ ಪರವಾಗಿ ಹರ್ಮಿತ್‌ ಸಿಂಗ್‌ 4 ವಿಕೆಟ್‌ ಕಿತ್ತರೆ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ 3 ವಿಕೆಟ್‌, ಮೊಹಮ್ಮದ್‌ ಮೊಹ್ಸಿನ್‌ 2 ವಿಕೆಟ್‌ ಪಡೆದರು.

ಮೊದಲ ಬ್ಯಾಟ್‌ ಬೀಸಿದ ಅಮೆರಿಕ ಪರವಾಗಿ ಸಾಯಿತೇಜ ಮುಕ್ಕಮಲ್ಲ 79 ರನ್‌(51 ಎಸೆತ, 5 ಬೌಂಡರಿ, 4 ಸಿಕ್ಸ್‌), ಶುಭಂ ರಂಜನೆ 48 ರನ್‌(24 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದು ತಂಡದ ಮೊತ್ತವನ್ನು 190 ರನ್‌ಗಳ ಗಡಿಯನ್ನು ದಾಟಿಸಿದರು.  ಇದನ್ನೂ ಓದಿ: T20 World Cup | ಆರ್‌ಸಿಬಿ ವೇಗಿಯ ಬೆಂಕಿ ಬೌಲಿಂಗ್‌ ದಾಳಿಗೆ ಆಸ್ಟ್ರೇಲಿಯಾ ಛಿದ್ರ

ತಲಾ ಒಂದೊಂದು ಗೆಲುವಿನೊಂದಿಗೆ ಎ ಗುಂಪಿನಲ್ಲಿ ಅಮೆರಿಕ 3 ಮತ್ತು ನೆದರ್‌ಲ್ಯಾಂಡ್‌ 4ನೇ ಸ್ಥಾನ ಪಡೆದಿದೆ. ಭಾರತ ಮತ್ತು ಪಾಕಿಸ್ತಾನ ತಲಾ 4 ಅಂಕ ಪಡೆದರೂ ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಟೀ ಇಂಡಿಯಾ ಮೊದಲ ಸ್ಥಾನ ಪಡೆದಿದೆ.
Share This Article