6 ಸಿಕ್ಸ್‌, 4 ಬೌಂಡರಿ, 2 ವಿಕೆಟ್‌ – ದುಬೆ ಸ್ಫೋಟಕ ಆಟ, ಭಾರತಕ್ಕೆ 17 ರನ್‌ಗಳ ಜಯ

2 Min Read

ಅಹಮದಾಬಾದ್‌: ಶಿವಂ ದುಬೆ (Shivam Dube) ಅವರ ಆಲ್‌ರೌಂಡರ್‌ ಆಟ, ವರುಣ್‌ ಚಕ್ರವರ್ತಿ(Varun Chakravarthy) ಅವರ ಮ್ಯಾಜಿಕ್‌ ಬೌಲಿಂಗ್‌ ನೆರವಿನಿಂದ ಭಾರತ 17 ರನ್‌ಗಳಿಂದ ನೆದರ್‌ಲ್ಯಾಂಡ್ಸ್‌ ವಿರುದ್ಧ ಜಯಗಳಿಸಿ ಅಜೇಯವಾಗಿ ಸೂಪರ್‌-8 ಹಂತ ಪ್ರವೇಶಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಭಾರತ (Team India) 6 ವಿಕೆಟ್‌ ನಷ್ಟಕ್ಕೆ 193 ರನ್‌ಗಳಿಸಿತು. 194 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ನೆದರ್‌ಲ್ಯಾಂಡ್ಸ್‌(Netherlands) 6 ವಿಕೆಟ್‌ ನಷ್ಟಕ್ಕೆ 176 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಹಾಗೆ ನೋಡಿದರೆ ನೆದರ್‌ಲ್ಯಾಂಡ್ಸ್‌ 12 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 94 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಯಾವಾಗ ಆರ್ಯನ್‌ ದತ್‌ ಔಟ್‌ ಆದರೋ ಅಲ್ಲಿಂದ ಪತನ ಶುರುವಾಯ್ತು. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸೊನ್ನೆ – 7 ಇನ್ನಿಂಗ್ಸ್‌ ಪೈಕಿ 5 ರಲ್ಲಿ ಶೂನ್ಯಕ್ಕೆ ಅಭಿಷೇಕ್‌ ಔಟ್‌

ವರುಣ್‌ ಚಕ್ರವರ್ತಿ 3 ವಿಕೆಟ್‌ ಪಡೆದರೆ ಶಿವಂ ದುಬೆ 2 ವಿಕೆಟ್‌ ಪಡೆದರು. ಬುಮ್ರಾ ಮತ್ತು ಪಾಂಡ್ಯ ತಲಾ ಒಂದೊಂದುವ ವಿಕೆಟ್‌ ಗಳಿಸಿದರು.

ಭಾರತ 76 ಎಸೆತಗಳಲ್ಲಿ 100 ರನ್‌ ಗಳಿಸಿತ್ತು. ನಂತರದ 44 ಎಸೆತಗಳಲ್ಲಿ 93 ರನ್‌ ಹೊಡೆದ ಪರಿಣಾಮ ಭಾರತ 190 ರನ್‌ಗಳ ಗಡಿಯನ್ನು ದಾಟಿತ್ತು. ಅದರಲ್ಲೂ ದುಬೆ ಮತ್ತು ಪಾಂಡ್ಯ 5ನೇ ವಿಕೆಟಿಗೆ 35 ಎಸೆತಗಳಲ್ಲಿ 76 ರನ್‌ ಜೊತೆಯಾಟವಾಡಿದ್ದರು.

ಶಿವಂ ದುಬೆ 66 ರನ್‌(31 ಎಸೆತ, 4 ಬೌಂಡರಿ, 6 ಸಿಕ್ಸ್‌) ಹಾರ್ದಿಕ್‌ ಪಾಂಡ್ಯ 30 ರನ್‌ (21 ಎಸೆತ, 3 ಸಿಕ್ಸ್‌) ಸೂರ್ಯಕುಮಾರ್‌ ಯಾದವ್‌ 34 ರನ್‌(28 ಎಸೆತ, 2 ಬೌಂಡರಿ, 1 ಸಿಕ್ಸ್‌), ತಿಲಕ್‌ ವರ್ಮಾ 31 ರನ್‌(27 ಎಸೆತ, 3 ಬೌಂಡರಿ, 1 ಸಿಕ್ಸ್‌) ಇಶನ್‌ ಕಿಶನ್‌ 18 ರನ್(7‌ ಎಸೆತ, 2 ಬೌಂಡರಿ, 1 ಸಿಕ್ಸ್‌) ಹೊಡೆದು ಔಟಾದರು.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಶಿವಂ ದುಬೆ ಅವರಿಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವ ಒಲಿಯಿತು.

Share This Article