Women’s World Cup 2025 | ದಾಖಲೆಯ 122 ಕೋಟಿ ಬಹುಮಾನ ಘೋಷಿಸಿದ ಐಸಿಸಿ

Public TV
3 Min Read

– ಸೋತ ತಂಡಕ್ಕೂ ಸಿಗಲಿದೆ ಕೋಟಿ ಕೋಟಿ ಬಹುಮಾನ
– ಜಯ್‌ ಶಾ ಅಧ್ಯಕ್ಷರಾದ ನಂತರ ಮಹತ್ವದ ಬೆಳವಣಿಗೆ

ದುಬೈ: ಇದೇ ಸೆಪ್ಟೆಂಬರ್‌ 30 ರಿಂದ ನವೆಂಬರ್‌ 2ರ ವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ (Womens World Cup 2025) ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ದಾಖಲೆಯ 122.56 ಕೋಟಿ ರೂ. ಮೊತ್ತದ ಬಹುಮಾನ ಘೋಷಿಸಿದೆ. ಇದು ಈವರೆಗಿನ ಬಹುಮಾನಕ್ಕಿಂತ 297% ಹೆಚ್ಚಳವಾದೆ ಎಂದು ಐಸಿಸಿ ಅಧ್ಯಕ್ಷ ಜಯ್‌ ಶಾ (Jay Shah) ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್‌ ಶಾ, ವಿಶ್ವಕಪ್‌ ಬಹುಮಾನದ ಒಟ್ಟು ಮೊತ್ತವನ್ನು 13.88 ಮಿಲಿಯನ್‌ ಅಂದ್ರೆ ಸರಿಸುಮಾರು 122.55 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ಈ ಪೈಕಿ ಪ್ರಶಸ್ತಿ ವಿಜೇಯರಿಗೆ 39.50 ಕೋಟಿ, ರನ್ನರ್‌ ಅಪ್‌ಗೆ 19.75 ಕೋಟಿ ಹಾಗೂ ಸೆಮಿಫೈನಲಿಸ್ಟ್‌ಗೆ 9.89 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಮುಖ್ಯಕೋಚ್‌ ಹುದ್ದೆಗೆ ಗುಡ್‌ಬೈ – ಒಂದೇ ವರ್ಷಕ್ಕೆ RR ಫ್ರಾಂಚೈಸಿಯಿಂದ ಹೊರಬಂದ ರಾಹುಲ್‌ ದ್ರಾವಿಡ್‌

ಜಯ್‌ ಶಾ ಐಸಿಸಿ ಅಧ್ಯಕ್ಷರಾದ ಬಳಿಕ ಕ್ರಿಕೆಟ್‌ ಜಗತ್ತಿನಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ ಗೆದ್ದಿದ್ದ ಭಾರತ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್‌ ಶಾ 125 ಕೋಟಿ ರೂ. ಬಹುಮಾನ ಘೋಷಿಸಿದ್ದರು. ಇದೀಗ ಪುರುಷರ ಕ್ರಿಕೆಟ್‌ನಂತೆ ಮಹಿಳಾ ಕ್ರಿಕೆಟ್‌ ಅನ್ನು ಒಂದು ಆಯಾಮಕ್ಕೆ ಕೊಂಡೊಯ್ಯಲು. ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಗೆದ್ದ ತಂಡಕ್ಕೆ ಮಾತ್ರವಲ್ಲದೇ ಸೋತ ತಂಡಕ್ಕೂ ಪುರುಷರ ಕ್ರಿಕೆಟ್‌ನಂತೆ ಭರ್ಜರಿ ಬಹುಮಾನದ ಮೊತ್ತವನ್ನೇ ಘೋಷಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ – ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ

ಯಾರಿಗೆ ಎಷ್ಟು ಬಹುಮಾನ?
* ವಿಜೇತ ತಂಡಕ್ಕೆ – 39.50 ಕೋಟಿ ರೂ. (4.58 ದಶಲಕ್ಷ ಡಾಲರ್‌)
* ರನ್ನರ್‌ ಅಪ್‌ ತಂಡಕ್ಕೆ 19.75 ಕೋಟಿ ರೂ. (2.24 ದಶಲಕ್ಷ ಡಾಲರ್‌)
* ಸೆಮಿ ಫೈನಲ್‌ ತಲುಪುವ ತಂಡಕ್ಕೆ – 9.89 ಕೋಟಿ ರೂ. (1.12 ದಶಲಕ್ಷ ಡಾಲರ್‌)
* 5 &6ನೇ ಸ್ಥಾನ ಪಡೆದ ತಂಡಕ್ಕೆ – 6.17 ಕೋಟಿ ರೂ. (7,00,000 ಡಾಲರ್‌)
* ಗುಂಪು ಹಂತದಲ್ಲಿ ಗೆದ್ದ ತಂಡಕ್ಕೆ – 30.25 ಲಕ್ಷ ರೂ. (34,314 ಡಾಲರ್‌)
* 7-8ನೇ ಸ್ಥಾನ ಪಡೆದ ತಂಡಕ್ಕೆ – 2.46 ಕೋಟಿ ರೂ. (2,80,000 ಡಾಲರ್‌)
* ಯಾವುದೇ ಪಂದ್ಯ ಗೆದ್ದರೂ, ಗೆಲ್ಲದಿದ್ದರೂ ಪ್ರತಿ ತಂಡಕ್ಕೆ – 2.20 ಕೋಟಿ ರೂ. (2,50,000 ಡಾಲರ್‌)

ಪ್ರಸ್ತುತ ಮಹಿಳಾ ಏಕದಿನ ವಿಶ್ವಕಪ್‌ನ ಆತಿಥ್ಯ ಭಾರತದ್ದೇ ಆಗಿದೆ. ಆದ್ರೆ ಪಾಕ್‌ ಜೊತೆಗಿನ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ಟೂರ್ನಿ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸಿಕ್ಸ್‌ ಮೇಲೆ ಸಿಕ್ಸ್‌, ನೋಟ್‌ಬುಕ್ ಸ್ಟೈಲ್‌ ಸಂಭ್ರಮಾಚರಣೆ – ರಾಥಿಯನ್ನು ಬೆಂಡೆತ್ತಿ ಕಿಚಾಯಿಸಿದ ರಾಣಾ

Share This Article