ವರ್ಗಾವಣೆಯಾದ್ರೂ ವಸತಿ ಗೃಹ ಖಾಲಿ ಮಾಡ್ತಿಲ್ಲ ಐಎಎಸ್ ಅಧಿಕಾರಿ ಕಠಾರಿಯಾ

Public TV
1 Min Read

– 5 ಬಾರಿ ನೊಟೀಸ್ ಕೊಟ್ರೂ ಡೋಂಟ್‍ಕೇರ್

ಬೆಂಗಳೂರು: ಐಎಎಸ್ ಅಧಿಕಾರಿಯೊಬ್ಬರು ಬೇರೆ ಇಲಾಖೆಗೆ ವರ್ಗಾವಣೆ ಆದ್ರು. ಇಲಾಖೆ ನೀಡಿದ್ದ ಪದಾಂಕಿತ ವಸತಿ ಗೃಹವನ್ನು ಖಾಲಿ ಮಾಡಿಲ್ಲ. ವಸತಿ ಗೃಹವನ್ನು ಖಾಲಿ ಮಾಡುವಂತೆ ಇಲಾಖೆಯಿಂದ ಐದು ಬಾರಿ ನೋಟಿಸ್ ನೀಡಿದ್ರೂ ಅಧಿಕಾರಿ ಕೇರ್ ಮಾಡ್ತಿಲ್ಲ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಂದ್ರಕುಮಾರ್ ಕಠಾರಿಯಾ ಅವರಿಗೆ ಸಾರಿಗೆ ಇಲಾಖೆ ಜಯನಗರದ ಎರಡನೇ ಬ್ಲಾಕ್ ನಲ್ಲಿ ಪದಾಂಕಿತ ವಸತಿ ಗೃಹವನ್ನು ನೀಡಿತ್ತು. ಈ ವಸತಿ ಗೃಹ ಕರ್ನಾಟಕ ರಾಜ್ಯ ರಸ್ತೆ ನಿಗಮ ಎಂಡಿ ಗೆ ಮಾತ್ರ ನೀಡ್ತಾರೆ. ವ್ಯವಸ್ಥಾಪಕ ನಿರ್ದೇಶಕರು ಅವಧಿ ಮುಗಿದ ನಂತರ ವಸತಿ ಗೃಹವನ್ನು ತೆರವುಗೊಳಿಸಬೇಕು.

ರಾಜೇಂದ್ರ ಕುಮಾರ್ ಕಠಾರಿಯ ಫೆಬ್ರವರಿಯಲ್ಲಿ ಬೇರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ಆದರೆ ಸಾರಿಗೆ ಇಲಾಖೆ ನೀಡಿರುವ ವಸತಿ ಗೃಹವನ್ನು ಮಾತ್ರ ತೆರವು ಮಾಡಿಲ್ಲ. ಫೆಬ್ರವರಿಯಲ್ಲಿ ವರ್ಗಾವಣೆಯಾದ ಕಠಾರಿಯಾ ಐದು ತಿಂಗಳಾದ್ರು ವಸತಿ ಗೃಹವನ್ನು ತೆರವು ಮಾಡಿಲ್ಲ. ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ತೆರವು ಮಾಡುವಂತೆ ಐದು ತಿಂಗಳಲ್ಲಿ ಐದು ಬಾರಿ ನೋಟಿಸ್ ನೀಡಿದೆ.

ಈ ಪರಿಣಾಮ ಪ್ರಸಕ್ತ ಸಾಲಿನ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ವಸತಿ ಇಲ್ಲ. ದಿನನಿತ್ಯ ಕಚೇರಿಗೆ 20 ಕಿ.ಮೀ ದೂರದಿಂದ ಬರ್ತಾರೆ. ಆದ್ರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಚೇರಿ ಕೆಲಸಗಳಿಗೆ ಭಾಗಿಯಾಗಲು ಸಾಧ್ಯವಾಗ್ತಿಲ್ಲ ಎಂದು ಹೇಳಲಾಗುತ್ತಿದೆ. ಇದೇ ರಾಜೇಂದ್ರಕುಮಾರ್ ಕಠಾರಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದಾಗ ಈ ಹಿಂದೆ ಎಂಡಿ ಆಗಿದ್ದ ಮಂಜುನಾಥ್ ಪ್ರಸಾದ್, ಅರುಣ್ ಚಕ್ರವರ್ತಿ, ಅರುಣ್ ಗುಪ್ತರಿಗೆ ಖಡಕ್ ಅಗಿ ನೋಟೀಸ್ ನೀಡಿ ವಸತಿ ಗೃಹದಿಂದ ತೆರವು ಮಾಡಿಸಿದ್ರು. ಆದರೆ ಈಗ ಇಲಾಖೆಯಿಂದ ಐದು ಬಾರಿ ನೋಟಿಸ್ ಹೋದರು ಅವರೇ ವಸತಿ ಗೃಹ ಖಾಲಿ ಮಾಡಿಲ್ಲ. ಮನೆ ಮುಂದೆ ರಾಜೇಂದ್ರ ಕುಮಾರ್ ಕಠಾರಿಯಾ ಎಂಬ ಬೋರ್ಡ್ ಇದೆ.

 

 

Share This Article
Leave a Comment

Leave a Reply

Your email address will not be published. Required fields are marked *