ಅಪಾಚಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ – ಪೈಲಟ್‌ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

Public TV
1 Min Read

ಭೋಪಾಲ್‌: ಭಾರತೀಯ ವಾಯುಪಡೆಯ ಅಪಾಚಿ ಹೆಲಿಕಾಪ್ಟರ್‌ (Apache Helicopter) ಸೋಮವಾರ ಮಧ್ಯಪ್ರದೇಶದ (Madhya Pradesh) ಭಿಂಡ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮುನ್ನೆಚ್ಚರಿಕೆಯಾಗಿ ಪೈಲಟ್‌ ಲ್ಯಾಂಡಿಂಗ್‌ ಮಾಡಿದ್ದಾರೆ. ಪೈಲಟ್‌ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ ಎಂದು ತಿಳಿಸಿರುವ ಅಧಿಕಾರಿಗಳು ಶೀಘ್ರದಲ್ಲೇ ಹೆಲಿಕಾಪ್ಟರ್‌ ಹಾರಾಟಕ್ಕೆ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ

IAFನ ಅಪಾಚಿ AH-64 ಹೆಲಿಕಾಪ್ಟರ್‌ ಎಂದಿನಂತೆ ಕಾರ್ಯಾಚರಣೆ ತರಬೇತಿ ಸಮಯದಲ್ಲಿ ಭಿಂಡ್‌ ಬಳಿ ತುರ್ತು ಭೂಸ್ಪರ್ಶ ಮಾಡಿತು. ಹೆಲಿಕಾಪ್ಟರ್‌ ಹಾಗೂ ಅದರಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದು, ತಾಂತ್ರಿಕ ತಂಡ ಸ್ಥಳಕ್ಕೆ ತಲುಪಿದೆ ವಾಯುಪಡೆ ಟ್ವೀಟ್‌ ಮೂಲಕ ತಿಳಿಸಿದೆ. ಇದನ್ನೂ ಓದಿ: Gangwar: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಬಲಿ

AH-64 ಅಪಾಚಿ ವಿಶ್ವದ ಅತ್ಯಂತ ಸುಧಾರಿತ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ಭಾರತೀಯ ವಾಯುಪಡೆಯು 22 AH-64E ಅಪಾಚಿ ಹೆಲಿಕಾಪ್ಟರ್‌ಗಳನ್ನ ಹೊಂದಿದೆ. 2022ರಲ್ಲಿ ಬೋಯಿಂಗ್‌ ಭಾರತೀಯ ಸೇನೆಗೆ ಇನ್ನೂ 6 ಹೆಲಿಕಾಪ್ಟರ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

Share This Article