ಬಿಕಾನೇರ್: 62 ವರ್ಷಗಳ ಕಾಲ ಭಾರತೀಯ ವಾಯುಪಡೆಗೆ ಶಕ್ತಿಯಾಗಿ ನಿಂತಿದ್ದ, ಬಳಿಕ ಹಾರುವ ಶವ ಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿದ್ದ ಮಿಗ್-21 ಯುದ್ಧವಿಮಾನವು (MiG-21 Fighter Jet) ಸೋಮವಾರ ರಾಜಸ್ಥಾನದ (Rajastan) ಬಿಕಾನೇರ್‌ನಲ್ಲಿರುವ ನಾಲ್ ವಾಯುನೆಲೆಯಲ್ಲಿ ಕೊನೆಯ ಬಾರಿಗೆ ಹಾರಾಟ ನಡೆಸಿತು.
ರಷ್ಯಾ (Russia) ಮೂಲದ ಈ ಯುದ್ಧವಿಮಾನವು 62 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಸೆ.19 ರಂದು ಚಂಡೀಗಢದಲ್ಲಿ ಈ ಮಿಗ್-21 ಯುದ್ಧವಿಮಾನಕ್ಕೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಸಾಂಕೇತಿಕ ಬೀಳ್ಕೊಡುಗೆಯ ಭಾಗವಾಗಿ ಆ.18 ಮತ್ತು 19ರಂದು ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ (AP Singh) ಅವರು ಮಿಗ್-21 ವಿಮಾನದ ಹಾರಾಟ ನಡೆಸಿದರು. ಇದನ್ನೂ ಓದಿ: ಕಾಲ್ ಸೆಂಟರ್ ಮಾಡಿಕೊಂಡು ಅಮೆರಿಕದ ಪ್ರಜೆಗಳಿಗೆ 350 ಕೋಟಿ ರೂ. ವಂಚನೆ – ಮೂವರನ್ನು ಬಂಧಿಸಿದ ಸಿಬಿಐ
ಬಳಿಕ ಮಾತನಾಡಿದ ಅವರು, ಮಿಗ್-21 ಅನ್ನು 1960ರ ದಶಕದಲ್ಲಿ ಸೇನೆಗೆ ನಿಯೋಜಿಸಲಾಗಿತ್ತು. ಸುಮಾರು 11,000 ಯುದ್ಧವಿಮಾನಗಳು 60ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿವೆ. ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಉತ್ಪಾದನೆಯಾದ ಸೂಪರ್‌ಸಾನಿಕ್ ಯುದ್ಧವಿಮಾನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆ.27ರಿಂದ ಟ್ರಂಪ್ ಸುಂಕ ಜಾರಿ – ಮಂಗಳವಾರ ಮೋದಿ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ಸಾಧ್ಯತೆ
ಮಿಗ್-21 ಯುದ್ಧವಿವಿಮಾನವು ವಾಯುಪಡೆಗೆ ಸಲ್ಲಿಸಿದ ಸೇವೆ ಅಗಾಧ. ಆದರೆ ಈ ಯುದ್ಧವಿಮಾನದ ತಂತ್ರಜ್ಞಾನದ ನಿರ್ವಹಣೆವು ಈಗ ಕಷ್ಟವಾಗಿದೆ. ನೂತನ ತಂತ್ರಜ್ಞಾನ ಒಳಗೊಂಡ ತೇಜಸ್, ರಪೇಲ್‌ಗಳನ್ನು ಅಳವಡಿಸಿಕೊಳ್ಳಲು ಇದು ಸರಿಯಾದ ಸಮಯ ಎಂದರು.
ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಜೈದೀಪ್ ಸಿಂಗ್ ಮಾತನಾಡಿ, ಮಿಗ್-21 ವಿಮಾನವು 1971 ಡಿ.14ರಲ್ಲಿ ಢಾಕಾದ ಗವರ್ನರ್ ನಿವಾಸದ ಮೇಲಿನ ದಾಳಿ ನಡೆದ ಸಂದರ್ಭದಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಯುದ್ಧದ ಮರುದಿನವೇ ಗವರ್ನರ್ ರಾಜೀನಾಮೆ ಸಲ್ಲಿಸಿದರು. ಬಳಿಕ ಪಾಕಿಸ್ತಾನ ಶರಣಾಗತಿಯಾಯಿತು ಎಂದು ಮೆಲುಕು ಹಾಕಿದರು.