ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ: ಬಿಎಸ್‍ವೈ

By
1 Min Read

– ಸಿಇಸಿ ಸಭೆ ಮುಂದೂಡಿಕೆ

ಶಿವಮೊಗ್ಗ: ಲೋಕಸಭ ಚುನಾವಣೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನ ಪಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎ ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈಶ್ವರಪ್ಪ ಪುತ್ರ ಕಾಂತೇಶ್‍ಗೆ (Kantesh) ಬಿಜೆಪಿ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಲೂ ಕಾಲ ಮಿಂಚಿಲ್ಲ, ಅವರು ನನ್ನ ಜೊತೆ ಬಂದ್ರೆ ದೆಹಲಿಗೆ ಕರೆದುಕೊಂಡು ಹೋಗ್ತೇನೆ. ಅಮಿತ್ ಶಾ ಜೊತೆ ಮಾತಾನಾಡಿಸುತ್ತೇನೆ. ಸೀಟ್ ಕೊಡಿಸಲು ನನ್ನಿಂದ ಆಗುವ ಎಲ್ಲಾ ಪ್ರಯತ್ನ ಮಾಡ್ತೇನೆ. ಎಲ್ಲಾ ರೀತಿಯ ಪ್ರಯತ್ನ ಮಾಡಲು ನಾನು ಸಿದ್ಧನಿದ್ದೇನೆ ಎಂದರು.

ಈಶ್ವರಪ್ಪ ಬಂದ್ರೆ ಜೊತೆಗೆ ಕರೆದುಕೊಂಡು ಮಾತನಾಡಬಹುದು. ನಿಮ್ಮ ಮೂಲಕ ಅವರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಬನ್ನಿ ಈಶ್ವರಪ್ಪನವರೇ ದೆಹಲಿಗೆ ಹೋಗೋಣ, ಅಮಿತ್ ಶಾ (AmitShah) ಮೀಟ್ ಮಾಡಿಸುತ್ತೇನೆ. ನಾನು ನಿಮ್ಮ ಜೊತೆ ಇದ್ದು ಅಮಿತ್ ಶಾ ಹತ್ತಿರ ಮಾತಾನಾಡಿಸುತ್ತೇನೆ ಎಂದು ಬಿಎಸ್‍ವೈ ಹೇಳಿದ್ದಾರೆ.

ಸಿಇಸಿ ಸಭೆ: ಇಂದು ನಡೆಯಬೇಕಿದ್ದ ಚುನಾವಣೆ ಸಮಿತಿ (ಸಿಇಸಿ) ಸಭೆ ಮುಂದೂಡಲಾಗಿದೆ. ಹೀಗಾಗಿ ನಾಳೆ ಮತ್ತೆ ಕರೆಯಬಹುದು. ಈ ಸಭೆಯಲ್ಲಿ ಪ್ರಧಾನಿ ಭಾಗಿಯಾಗಬಹುದು. ಹಾಗಾಗಿ ಒಂದು ದಿನ ಮುಂದೂಡಿದ್ದಾರೆ. ನಾನು ಈಗ ಬೆಂಗಳೂರಿಗೆ ಹೋಗ್ತಾ ಇದ್ದೀನಿ ಎಂದು ಬಿಎಸ್‍ವೈ ತಿಳಿಸಿದರು.

Share This Article