ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿ: ಶಿವಣ್ಣ

Public TV
2 Min Read

ಬೆಂಗಳೂರು: ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದು ಹ್ಯಾಟ್ರಿಕ್  ಹೀರೋ ಶಿವರಾಜ್‌ಕುಮಾರ್ (Shiva Rajkumar) ಹೇಳಿದರು.

ಅಮೆರಿಕದಲ್ಲಿ (America) ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿ ಬೆಂಗಳೂರಿಗೆ (Bengaluru) ಆಗಮಿಸಿದ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದರು. ಇದನ್ನೂ ಓದಿ: ಶಿವಣ್ಣ ನಮ್ಮ ರಾಜ್ಯದ ಆಸ್ತಿ: ಕೃಷ್ಣ ಬೈರೇಗೌಡ

ಫ್ಲೈಟ್‌ನಲ್ಲಿ 20 ಗಂಟೆಯಾಯಿತು. ಆರು ಗಂಟೆ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿ ಅವರು ಧೈರ್ಯ ತುಂಬಿದರು. ಗೀತನ ಬಗ್ಗೆ ಮಾತಾಡಲ್ಲ. ಗೀತಾ ಹೆಂಡತಿನೂ ಹೌದು, ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಅನು ಒಂದು ತಿಂಗಳು ನಮ್ಮ ಜೊತೆ ಇದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಪಿವೋಟ್ ಚಿತ್ರದ ಸ್ನೀಕ್ ಪೀಕ್

ಇಂಡಸ್ಟ್ರಿ ಆರೈಕೆ, ಜನರ ಆರೈಕೆ, ಮಾಧ್ಯಮ ಆರೈಕೆ ಇವತ್ತು ಒಳ್ಳೆಯದಾಗಿದೆ. ಗಂಡಸರಿಗೆ ತಾಯಂದಿರು ತುಂಬಾ ಇರುತ್ತಾರೆ.ಅಮ್ಮ, ಹೆಂಡತಿ ಮಗಳು ಹೀಗೆ. ಈ ಬಾರಿ ನಿವೇದಿತಾ ಕೂಡ ನಮ್ಮ ಜೊತೆ ಇದ್ದಳು. ವಿಶ್ರಾಂತಿ ಹೇಳಿದ್ದಾರೆ. ನಾರ್ಮಲ್ ಕೆಲಸ ಮಾಡುತ್ತೇನೆ. ಮಾರ್ಚ್ ಬಳಿಕ ಆಕ್ಷನ್ ವರ್ಕ್ ಶುರು ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಿಜವಾದ ಸ್ವಾತಂತ್ರ‍್ಯ ಹೋರಾಟಗಾರರನ್ನು ಮೂಲೆಗೆ ತಳ್ಳಿದ್ದು ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

ಎರಡು ಮೂರು ದಿನ ಲಿಕ್ವಿಡ್ ಫುಡ್‌ನಲ್ಲೇ ಇದ್ದೆ. ಎರಡು ದಿನ, ಮೂರು ದಿನದ ಬಳಿಕ ನಿಧಾನವಾಗಿ ನಡೆಯಲು ಶುರು ಮಾಡಿದೆ. ಜೀವನವೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ. 131 ಸಿನಿಮಾ ಬಗ್ಗೆ ಪ್ಲ್ಯಾನ್ ಇದೆ. ರಾಮ್ ಚರಣ್ ಅವರ ಸಿನಿಮಾ ಮಾಡುತ್ತೇನೆ ಎಂದರು. ಇದನ್ನೂ ಓದಿ: ಆಸ್ಪತ್ರೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಡಿಸ್ಚಾರ್ಜ್‌ – ಸಚಿವೆ ಭಾವುಕ

Share This Article