ಸುಧಾಕರ್ ಮತ್ತೆ ಕಾಂಗ್ರೆಸ್‌ಗೆ ಬರಲು ನಾನು ಬಿಡಲ್ಲ: ಶಿವಶಂಕರ ರೆಡ್ಡಿ

Public TV
1 Min Read

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ (K.Sudhakar) ಮರಳಿ ಕಾಂಗ್ರೆಸ್ (Congress) ಪಕ್ಷ ಸೇರುವ ವದಂತಿ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಮಾಜಿ ಸಚಿವ ಎನ್ ಹೆಚ್ ಶಿವಕಶಂಕರ ರೆಡ್ಡಿ (NH Shivashankar Reddy) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪಕ್ಷವನ್ನು ಹಾಳು ಮಾಡಿರುವ ಸುಧಾಕರ್‌ನನ್ನು ಸೇರಿಸಿಕೊಳ್ಳುವ ಅಗತ್ಯ ಇಲ್ಲ. ಆತ ಪಕ್ಷದ್ರೋಹ ಕೆಲಸ ಮಾಡಿದ್ದಾನೆ. ಪಕ್ಷವನ್ನು ಒಡೆದು ಕೆಲವರ ಜೊತೆ ಬಿಜೆಪಿಗೆ (BJP) ಹೋದರು. ಬಿಜೆಪಿಗೆ ಸೇರಿ ಅಲ್ಲಿ ಸಹ ಬ್ಲಾಕ್‌ಮೇಲ್ ಮಾಡಿ ಏನೆಲ್ಲಾ ಪದವಿಗಳನ್ನು ಪಡೆದರು. ಆತ ರಾಜಕಾರಣದಲ್ಲಿ ಮಾಡಬಾರದ್ದನ್ನು ಮಾಡಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಬಿಜೆಪಿಯ ಯಾವ ಶಾಸಕರೂ ಹೋಗಲ್ಲ: ಆರಗ ಜ್ಞಾನೇಂದ್ರ

ಅವರ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣಗಳು ಆಗಿವೆ. ಇದರ ಬಗ್ಗೆ ಸರ್ಕಾರ ವಿಚಾರಣೆ ಮಾಡಲು ಕ್ರಮ ವಹಿಸಿದೆ. ಹೀಗಾಗಿ ಆತ ಕಾಂಗ್ರೆಸ್ ಸೇರ್ಪಡೆಗೆ ನಾವು ವಿರೋಧ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಇಂತಹ ಅವಕಾಶವಾದಿಗಳನ್ನು ಸೇರಿಸಿಕೊಳ್ಳುವುದಕ್ಕೆ ನಾನು ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲಿದ್ದೇನೆ: ಎಸ್‍ಟಿ ಸೋಮಶೇಖರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್