ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ಆ ಕೊಠಡಿಗೆ ಹೋಗಲ್ಲ: ಎಸ್‌ಆರ್ ವಿಶ್ವನಾಥ್ ಮುನಿಸು

Public TV
1 Min Read

ಬೆಂಗಳೂರು: ಪ್ರತಿಪಕ್ಷ ನಾಯಕ್ ಆರ್ ಅಶೋಕ್ (R Ashok) ಮತ್ತು ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ಮಧ್ಯೆ ಅಸಮಾಧಾನ ಮುಂದುವರೆದಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಗೆ ಹೋಗಲು ವಿಶ್ವನಾಥ್ ಮತ್ತೆ ನಿರಾಕರಿಸಿದ್ದಾರೆ.

ಸದನದಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಆರ್ ಅಶೋಕ್ ಕಚೇರಿಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ ವಿಶ್ವನಾಥ್ ಅವರನ್ನು ಅಶೋಕ್ ಕೊಠಡಿಗೆ ಕರೆದೊಯ್ಯಲು ಕೈ ಹಿಡಿದುಕೊಂಡರು. ಈ ವೇಳೆ ವಿಶ್ವನಾಥ್ ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ನಾನು ಆ ಕೊಠಡಿಗೆ ಬರೋದಿಲ್ಲ. ಬೇಕಾದರೆ ನಾಮಫಲಕ ತೆಗೆಯಲಿ ಆಗ ಹೋಗುತ್ತೇನೆ ಎಂದು ಕಡ್ಡಿಮುರಿದಂತೆ ಹೇಳಿ ಕೊಠಡಿ ಮುಂಭಾಗದ ಮೊಗಸಾಲೆಯಲ್ಲಿ ಕುಳಿತಿದ್ದಾರೆ. ಇದನ್ನೂ ಓದಿ: ಹೊಸ ಟ್ರಕ್‌ಗಳಲ್ಲಿ ಚಾಲಕರಿಗೆ ಎಸಿ ಕ್ಯಾಬಿನ್‌ ಕಡ್ಡಾಯ – ಅಧಿಸೂಚನೆ ಪ್ರಕಟ

ಈ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಶ್ವನಾಥ್ ಜೊತೆ ಮಾತುಕತೆ ನಡೆಸಿದ್ದಾರೆ. ವಿಜಯೇಂದ್ರ ಜೊತೆಗಿನ ಮಾತುಕತೆ ವೇಳೆ ವಿಶ್ವನಾಥ್ ಅಶೋಕ್ ಮೇಲಿನ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ವಿಜಯೇಂದ್ರ ಅವರು ವಿಶ್ವನಾಥ್ ಅವರಿಗೆ ಅದನ್ನೆಲ್ಲಾ ಮಾತನಾಡೋದು ಬಿಡಿ ಒಗ್ಗಟ್ಟಾಗಿ ಹೋಗೋಣ ಎಂದು ಮನವೊಲಿಸಿ ಸಂಧಾನ ಮಾಡಿದ್ದಾರೆ. ಇದನ್ನೂ ಓದಿ: ಶಿವರಾಜ್‌ಸಿಂಗ್‌ ರಾಜ್ಯ ರಾಜಕೀಯ ಅಂತ್ಯ – ಲೋಕಸಭೆಗೆ ಸ್ಪರ್ಧೆ?

Share This Article