ಇನ್ಮುಂದೆ ನಾನು ಮೀಡಿಯಾ ಅಡ್ರೆಸ್‌ ಮಾಡಲ್ಲ: ಪರಮೇಶ್ವರ್‌

Public TV
1 Min Read

ಬೆಂಗಳೂರು: ಇನ್ಮುಂದೆ ನಾನು ಮೀಡಿಯಾ (Media) ಅಡ್ರೆಸ್ ಮಾಡಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ಹೇಳಿದ್ದಾರೆ.

ಇಂದು ಬೆಳಗ್ಗೆ ನಿವಾಸದ ಮುಂದೆ ನಿಂತಿದ್ದ ಮಾಧ್ಯಮಗಳ ಕೇಳಿದ ಪ್ರಶ್ನೆಗೆ, ಇನ್ಮುಂದೆ ನಾನು ಮೀಡಿಯಾ ಅಡ್ರೆಸ್ ಮಾಡಲ್ಲ. ನನಗೆ ಇನ್‌ಸ್ಟ್ರಕ್ಷನ್‌ ಬಂದಿದೆ. ಏನಾದರೂ ಇದ್ದರೆ ನಾನೇ ಕರೆದು ಬಂದು ಮಾತನಾಡುತ್ತೇನೆ. ಸುಮ್ನೆ ನೀವು ಇಲ್ಲಿ ಕಾಯೋದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ – ಅಪ್ರಾಪ್ತ ಸೇರಿ ಐವರ ಬಂಧನ

ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ಏ. 3ರಂದು ಮಧ್ಯರಾತ್ರಿ ಯುವತಿಯನ್ನು ಹಿಂಬಾಲಿಸಿ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಪರಮೇಶ್ವರ್‌ ದೊಡ್ಡ ನಗರದಲ್ಲಿ ಅಲ್ಲಿ ಇಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದರು. ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಪತ್ನಿಯ ಜೊತೆಗಿದ್ದ ಪ್ರಿಯಕರನ ಬರ್ಬರ ಹತ್ಯೆ – ಒಂದೇ ಗಂಟೆಯಲ್ಲಿ ಪತ್ತೆ ಹಚ್ಚಿದ ತಾರಾ!

ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಒಂದು ವೇಳೆ ನನ್ನ ಹೇಳಿಕೆ ನಾಡಿನ ತಾಯಂದಿರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು.

ನನ್ನ ಹೇಳಿಕೆಯನ್ನು ಬೇರೆಬೇರೆ ರೂಪಕ್ಕೆ ತೆಗೆದುಕೊಂಡು ಹೋಗಬೇಕಿಲ್ಲ‌. ಬಿಜೆಪಿಯವರು ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

Share This Article