ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

Public TV
1 Min Read

ಮಂಡ್ಯ: ಈ ಬಾರಿ ಲೋಕಸಭೆಗೆ (Lok Sabha Election) ನನ್ನ ಸ್ಪರ್ಧೆ ಖಚಿತ ಎಂದು ಹಾಲಿ ಮಂಡ್ಯ (Mandya) ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರ ಅಭ್ಯರ್ಥಿಯ ಬಗ್ಗೆ ಅಂತೆ ಕಂತೆ ಮೊದಲಿನಿಂದಲೂ ಇದೆ. ಅಧಿಕೃತ ನಿರ್ಧಾರ ಬರೋವರೆಗೂ ಕಾಯೋಣ. ಮಂಡ್ಯ ಬಿಜೆಪಿಗೆ (BJP) ಸಿಗಲಿದೆ ಎಂಬ ವಿಶ್ವಾಸ ನನಗಿದೆ. ನಾನು ನನ್ನ ಟಿಕೆಟ್‌ಗಾಗಿ ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ಮಂಡ್ಯಕ್ಕೋಸ್ಕರ, ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ ಇದೆ ಎಂದರು. ಇದನ್ನೂ ಓದಿ: ರಾಜಮೌಳಿ ಸಿನಿಮಾಗಾಗಿ ಮಹೇಶ್ ಬಾಬು ಸಿಕ್ಸ್ ಪ್ಯಾಕ್ ತಯಾರಿ

 

 ಈ ವೇಳೆ ಮಂಡ್ಯದಿಂದ ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಕ್ಕು ಉತ್ತರ ನೀಡದೇ ಸುಮಲತಾ ಹೊರಟರು. ಈ ಮೂಲಕ ಇನ್ನಷ್ಟು ಕುತೂಹಲವನ್ನು ಸುಮಲತಾ ಮೂಡಿಸಿದ್ದಾರೆ.

ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗುತ್ತಿತ್ತು. ಜೆಡಿಎಸ್‌ (JDS) ನಾಯಕರು ಏನಾದರೂ ಹೇಳಬಹುದು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತವಲ್ಲ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದರು.

 

Share This Article