ಜೆಡಿಎಸ್ ಮೈತ್ರಿಯನ್ನು ನಾನು ಸ್ವಾಗತ ಮಾಡ್ತೀನಿ: ಮುನಿರತ್ನ

Public TV
1 Min Read

ಬೆಂಗಳೂರು: ಜೆಡಿಎಸ್ (JDS) ಮೈತ್ರಿಯನ್ನು (Alliance) ನಾನು ಸ್ವಾಗತ ಮಾಡುತ್ತೇನೆ. ಕುಮಾರಸ್ವಾಮಿಯವರೊಂದಿಗೆ (HD Kumaraswamy) ನಮಗೆ ವಿಶ್ವಾಸವಿದೆ ಎಂದು ಶಾಸಕ ಮುನಿರತ್ನ (Munirathna) ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾವು ಕಾಂಗ್ರೆಸ್ (Congress) ಬಿಡಲು ಕುಮಾರಸ್ವಾಮಿ ಕಾರಣರಲ್ಲ. ಸಿದ್ದರಾಮಯ್ಯ, ಡಿಕೆಶಿಯಿಂದ ನಾವು ಹೊರಬಂದಿದ್ದು. ಕೇಂದ್ರದ ನಾಯಕರು ಮೈತ್ರಿ ಮೂಲಕ ಒಳ್ಳೆಯ ನಿರ್ಧಾರ ಮಾಡಿದ್ದಾರೆ. ಬಿಜೆಪಿ (BJP) ಜೊತೆಗೆ ನಾವು ನೆಮ್ಮದಿಯಾಗಿದ್ದೇವೆ ಎಂದರು. ಇದನ್ನೂ ಓದಿ: ಜಿ20 ಸಭೆಯಲ್ಲಿ ಮತ್ತೆ ‘ಭಾರತ್’ ನಾಮಸ್ಮರಣೆ – ಪ್ರಧಾನಿ ಆಸನದ ಮುಂದೆ ಭಾರತ್ ಪದ ಬಳಕೆ

ಜೆಡಿಎಸ್ ಮೈತ್ರಿಯಿಂದ ನಮಗೆ ಒಳ್ಳೆಯದೇ ಆಗುತ್ತದೆ. ಬೆಂಗಳೂರು ಗ್ರಾಮಾಂತರವನ್ನು (Bengaluru Rural) ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಗೆ ಬಿಟ್ಟುಕೊಟ್ಟರೆ ಯಾರೇ ಆದರೂ ಸಪೋರ್ಟ್ ಮಾಡುತ್ತೇನೆ. ಹೆಚ್‍ಡಿಕೆ, ಅನಿತಾ ಕುಮಾರಸ್ವಾಮಿ, ನಿಖಿಲ್ ಯಾರಾದರೂ ನಿಲ್ಲಲಿ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು: ಮೋದಿ

ಈ ಹಿಂದೆ ನಾವು ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡು ಪಕ್ಷ ತೊರೆದಿದ್ದೆವು. ಕಾಂಗ್ರೆಸ್ ನಾಯಕರು 80 ಜನ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕಿತ್ತು. ಕುಮಾರಸ್ವಾಮಿ ವಿರುದ್ಧ ನಾವು ಅಸಮಾಧಾನಗೊಂಡಿಲ್ಲ. ಬೆಂಗಳೂರು ಗ್ರಾಮಾಂತರದಿಂದ ಕುಮಾರಸ್ವಾಮಿ ಕುಟುಂಬದವರಾಗಲಿ, ಯೋಗೇಶ್ವರ್ ಆಗಲಿ ಯಾರೇ ನಿಂತರೂ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಭಾರತ, ಅಮೆರಿಕದ ನಡುವೆ ದ್ವಿಪಕ್ಷೀಯ ಮಾತುಕತೆ – ಮೋದಿ, ಬೈಡೆನ್ ಮಧ್ಯೆ ಏನು ಚರ್ಚೆ ನಡೆದಿದೆ?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್