ಅಲ್ಲಿ ನಾನು ಬೆತ್ತಲೆಯಾಗಿ ಕಾಣಿಸಿಕೊಂಡಿಲ್ಲ: ನಟಿ ಸಂಜನಾ ಗಲ್ರಾನಿ

Public TV
3 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವ್ರ ದಂಡುಪಾಳ್ಯ-2 ಚಿತ್ರದ ಕೆಲವು ದೃಶ್ಯಗಳು ಲೀಕ್ ಆಗಿದ್ದ ಹಿನ್ನೆಲೆಯಲ್ಲಿ ಇಂದು ನಟಿ ಸಂಜನಾ ಸುದ್ದಿಗೋಷ್ಠಿ ಆಯೋಜಿಸಿ ಈ ವಿವಾದಕ್ಕೆ ಸಂಬಂಧಪಟ್ಟಂತೆ ಹುಟ್ಟಿಕೊಂಡಿರುವ ಅನುಮಾನಗಳಿಗೆ ಉತ್ತರಿಸಿದರು.

ಶೂಟಿಂಗ್ ಯಾರು ನೋಡಿಲ್ಲ. ಶೂಟಿಂಗ್ ಬಗ್ಗೆ ಯಾರಿಗೂ ಗೊತ್ತಿಲ್ಲ. ಶೂಟಿಂಗ್‍ನಲ್ಲಿರೋದು ನಾನೇ ಆದ್ರೂ ಅಲ್ಲಿ ನಾನು ಬೆತ್ತಲಾಗಿಲ್ಲ. ನಾನು ಶಾಟ್ ಸ್ಕರ್ಟ್ ಮತ್ತು ಸ್ಲೀವ್‍ಲೆಸ್ ಟಾಪ್ ಇರೋ ತರಹದ ಬ್ಯಾಕ್ ಲೆಸ್ ಟಾಪ್ ಧರಿಸಿದ್ರಿಂದ ಬ್ಯಾಕ್ ಎಲ್ಲರಿಗೂ ಕಾಣುತ್ತದೆ ಎಂದು ಶೂಟಿಂಗ್ ಮೇಕಿಂಗ್ ಫೋಟೋ ತೋರಿಸಿದ್ರು. ವಿಡಿಯೋ ಲೀಕ್ ಆದಾಗಲೇ ಸುದ್ದಿಗೋಷ್ಠಿ ಕರೆಯಲು ಸಿನಿಮಾ ನಿರ್ದೇಶಕರಿಗಾಗಿ ಕಾಯುತ್ತಿದ್ದೆ. ಇವತ್ತು ತಿರುಪತಿಯಲ್ಲಿ ಸಿನಿಮಾ ಪ್ರಮೋಶನ್‍ನಲ್ಲಿ ಬ್ಯೂಸಿಯಾಗಿದ್ರಿಂದ ಅವರಿಗೆ ಬರೋದಕ್ಕೆ ಆಗಿಲ್ಲ. ಹಾಗಾಗಿ ನಾನೇ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದು ಸಂಜನಾ ತಿಳಿಸಿದ್ರು.

ನಾನು ಕಿರಿಕ್ ಹುಡುಗಿ ಇಲ್ಲ: ಗ್ರಾಫಿಕ್ಸ್ ಮಾಡೋದ್ರಲ್ಲೇ ಇದು ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆಯೇ ಹೊರತು ಯಾರು ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ. ಸಿನಿಮಾಗೆ ಸಹಿ ಮಾಡುವಾಗ ಅದರಲ್ಲಿ ದೃಶ್ಯ ಬ್ಲರ್ ಆಗುತ್ತದೆ ಎನ್ನುವುದು ಗೊತ್ತಿತ್ತು. ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ನಾವು ಫಿಲ್ಮ್ ಮಾಡ್ತೀವಿ. ಸೈನ್ ಮಾಡೋ ಮುಂಚೆಯೇ ನಾವು ತುಂಬ ಪ್ರಶ್ನೆ ಮಾಡಿದ್ರೆ ನಮ್ಮನ್ನ ಕಿರಿಕ್ ನಟಿ ಅಂತಾರೆ ನಾನು ಕಿರಿಕ್ ಹುಡುಗಿ ಅಲ್ಲ.

ದೂರು ದಾಖಲಿಸಲ್ಲ: ಇದೂವರೆಗೂ ನಾನು ಪೊಲೀಸ್ ಠಾಣೆಗೆ ಹೋಗಿಲ್ಲ. ಈ ವಿಷಯಕ್ಕಾಗಿ ಪೊಲೀಸ್ ಠಾಣೆ ಅಲೆದಾಡುವುದು ಇಷ್ಟವಿಲ್ಲ. ಈ ವಿಷಯದ ಕುರಿತಾಗಿ ಫಿಲ್ಮ್ ಚೇಂಬರ್‍ನಲ್ಲಿ ಮಾತ್ರ ದೂರು ದಾಖಲಿಸುತ್ತೇನೆ. ಸಿನಿಮಾದಲ್ಲಿ ಏನಾದ್ರೂ ಬಾಡಿ ಕಂಡ್ರೆ ಬ್ಲರ್ ಮಾಡ್ತಾರೆ ಅಂತಾ ಗೊತ್ತಿತ್ತು. ಆದರೆ ಇಷ್ಟು ಕೆಟ್ಟದಾಗಿ ಬ್ಲರ್ ಮಾಡ್ತಾರೆ ಅಂತಾ ಗೊತ್ತಿರಲಿಲ್ಲ. ಲೀಕ್ ಆಗಿರೋ ದೃಶ್ಯಗಳು ತೆರೆಯ ಮೇಲೆ ಬಂದಿಲ್ಲ. ಹಾಗಾಗಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಉದ್ದೇಶ ಪೂರ್ವಕವಾಗಿಯೇ ವಿಡಿಯೋವನ್ನು ಹೊರ ತಂದಿದ್ದಾರೆ. ಇದು ನನಗೆ ತುಂಬಾ ದುಃಖ ತರಿಸಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಯಾವುದೇ ಸ್ಟೆಪ್ ತೆಗೆದುಕೊಳ್ಳುವುದಿಲ್ಲ ಎಂದರು.

ಕಣ್ಣೀರು ಹಾಕಿದ ಸಂಜನಾ ತಾಯಿ: ಮಗಳು ಈ ರೀತಿಯ ದೃಶ್ಯಗಳು ಮಾಡಿಲ್ಲ. ಜನ ನಮ್ಮನ್ನು ದೋಷಿ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ನಾನು ಸಹ ಅಲ್ಲೆ ಇದ್ದೆ. ಈಗ ತೋರಿಸುತ್ತಿರುವ ಫೋಟೋ ಇದು ಅವಳ ಸೋದರಿಗೆ ಕಳುಹಿಸಿದ್ದು. ನಾನು ನನ್ನ ಮಗಳು ಈ ರೀತಿಯ ದೃಶ್ಯಗಳನ್ನು ಮಾಡೋದನ್ನ ನೋಡಕ್ಕೆ ಆಗುತ್ತಾ ಎಂದು ಸಂಜನಾರ ತಾಯಿ ಕಣ್ಣೀರು ಹಾಕಿದ್ರು.

ಈ ಬಗ್ಗೆ ನಿರ್ದೇಶಕ ಬಂದಮೇಲೆ ಚೇಂಬರ್ ನಲ್ಲಿ ದೂರು ದಾಖಲಿಸ್ತಿನಿ ಅಂತಾ ಹೇಳಿದ್ದಾರೆ. ಈವಾಗ ನಾನು ಯಾರಿಗೆ ಏನು ಹೇಳಲಿ. ಇವಾಗ ಯಾರ ಮೇಲೆ ದೋಷ ಮಾಡುವ ಸ್ಥಾನದಲ್ಲಿ ನಾನಿಲ್ಲ. ನೀವು ನೋಡಿರವ ದೃಶ್ಯಗಳು ಯಾವುದು ಹಿರಿತೆರೆ ಮೇಲೆ ಬಂದಿಲ್ಲ. ಸಿನಿಮಾದ ಡಬ್ಬಿಂಗ್ ಸಹ ನಾನು ಮಾಡಿಲ್ಲ. ಹಾಗಾಗಿ ನಾನು ಈ ಶಾಟ್ ನೋಡೇ ಇಲ್ಲ ಎಂದು ಸಂಜನಾ ಸ್ಪಷ್ಟ ಪಡಿಸಿದ್ರು.

ಇನ್ನ್ಮುಂದೆ ಡಬಲ್ ಕೇರ್ ಆಗ್ತೀನಿ: ಸಿನಿಮಾದ ವಿಡಿಯೋಗಳನ್ನು ಬಳಸಿಕೊಂಡು ಇಷ್ಟು ಕೆಟ್ಟದಾಗಿ ಮಾಡ್ತಾರೆ ಅಂತಾ ಗೊತ್ತಿರಲಿಲ್ಲ. ಹೀಗಾಗಿ ಇನ್ನ್ಮುಂದೆ ನಾನು ಡಬಲ್ ಕೇರ್ ಆಗಿರ್ತೀನಿ. ಇನ್ನೂ ಚಿತ್ರೀಕರಣ ವೇಳೆ ಯಾರು ಇರಲಿಲ್ಲ. ಅಲ್ಲಿ ಕೇವಲ ನಟ ರವಿಶಂಕರ್ ಮತ್ತು ಕ್ಯಾಮೆರಾಮನ್ ನಿರ್ದೇಶಕರು ಅಷ್ಟೇ ಇದ್ರು ಹಾಗಾಗಿ ಇದು ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಎರಡು ದಿನ ಮಾತನಾಡಿ ಬಿಡ್ತಾರೆ. ಕಿರಿಕ್ ಮಾಡೋ ವ್ಯಕ್ತಿತ್ವ ನನ್ನದಲ್ಲ. ಮಾನನಷ್ಟ ಕೇಸ್ ಹಾಕಲು  ನನಗೆ ಇಷ್ಟವಿಲ್ಲ ಎಂದು ಸಂಜನಾ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು.

https://www.youtube.com/watch?v=c5FRWJ0yhTI

https://www.youtube.com/watch?v=B6t4rC7Si0Y

https://www.youtube.com/watch?v=65jqMqngd2g

Share This Article
Leave a Comment

Leave a Reply

Your email address will not be published. Required fields are marked *