ಶುಭಮನ್ ಆಟವನ್ನು ಹಾಡಿ ಹೊಗಳಿದ ಕೊಹ್ಲಿ!

Public TV
1 Min Read

ಮೌಂಟ್ ಮೌಂಗಾನೆ: ಟೀಂ ಇಂಡಿಯಾದ ಯುವ ಆಟಗಾರ, ಬಲಗೈ ಬ್ಯಾಟ್ಸ್ ಮನ್ 19 ವರ್ಷದ ಶುಭಮನ್ ಗಿಲ್ ಅವರನ್ನು ವಿರಾಟ್ ಕೊಹ್ಲಿ ಹಾಡಿ ಹೊಗಳಿದ್ದಾರೆ.

ನೆಟ್ ಪ್ರಾಕ್ಟೀಸ್ ವೇಳೆ ನಾನು ಶುಭಮನ್ ಅವರ ಬ್ಯಾಟಿಂಗ್ ಶೈಲಿ ನೋಡಿದ್ದೇನೆ. 19ರ ಹರೆಯದಲ್ಲಿ ಶುಭಮನ್ ಅವರ ಶೇ.10ರಷ್ಟು ಪ್ರತಿಭೆಯನ್ನು ನಾನು ಹೊಂದಿರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಈಗ ಅತ್ಯುತ್ತಮ ಪ್ರತಿಭೆಗಳು ತಂಡಕ್ಕೆ ಬರುತ್ತಿದ್ದಾರೆ. ಈಗಾಗಲೇ ಪೃಥ್ವಿ ಶಾ ಈಗಾಗಲೇ ತಮ್ಮ ಅವಕಾಶವನ್ನು ಬಾಚಿಕೊಂಡಿದ್ದಾರೆ. ಶುಭಮನ್ ಗಿಲ್ ಸಹ ಅತ್ಯಂತ ಪ್ರತಿಭಾವಂತ ಆಟಗಾರ ಎಂದು ಪ್ರಶಂಸಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲು ನಮಗೆ ಸಂತಸವಾಗುತ್ತದೆ. ಭಾರತದ ಕ್ರಿಕೆಟ್ ಪಾಲಿಗೆ ಇದು ಉತ್ತಮವಾದ ಬೆಳವಣಿಗೆ ಎಂದು ಕೊಹ್ಲಿ ಹೇಳಿದರು. ಇದನ್ನೂ ಓದಿ: ಕೆಕೆಆರ್ ತಂಡದ ಶುಭಮನ್ ಮೇಲೆ ಸುಹಾನಾಗೆ ಪ್ಯಾರ್!

ವಿರಾಟ್ ಕೊಹ್ಲಿಗೆ ಕಿವೀಸ್ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಎರಡು ಪಂದ್ಯಗಳು ಇರುವಂತೆಯೇ ಭಾರತ 3-0 ಅಂತರದಿಂದ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶುಭಮನ್ ಗಿಲ್ 16 ಇನ್ನಿಂಗ್ಸ್ ಗಳಿಂದ ಒಟ್ಟು 1089 ರನ್ ಗಳಿಸಿದ್ದಾರೆ. ವೈಯಕ್ತಿಕ ಗರಿಷ್ಟ 268 ರನ್ ಹೊಡೆದಿದ್ದು, 77.78 ಸರಾಸರಿಯಲ್ಲಿ 3 ಶತಕ, 7 ಅರ್ಧಶತಕ ಹೊಡೆದಿದ್ದಾರೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *