ನಾನೊಬ್ಬ ವಿಫಲ ನಾಯಕ – ಕಿಂಗ್ ಕೊಹ್ಲಿ ಭಾವುಕ

Public TV
1 Min Read

ಮುಂಬೈ: ನನ್ನನ್ನು ವಿಫಲ ನಾಯಕನೆಂದು ಪರಿಗಣಿಸಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾವುಕರಾಗಿದ್ದಾರೆ.

ಆರ್‌ಸಿಬಿ (RCB) ಪಾಡ್‌ಕಾಸ್ಟ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ನಾಯಕತ್ವದಲ್ಲಿ ಕಂಡ ವಿರೋಚಿತ ಸೋಲುಗಳನ್ನ ರಿವೀಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾ (Team India) ನಾಯಕರಾಗಿದ್ದಾಗ ಐಸಿಸಿ ಪಂದ್ಯಗಳಲ್ಲಿ ಕಂಡ ಸೋಲುಗಳಿಂದ ತಜ್ಞರು, ಅಭಿಮಾನಿಗಳಿಂದ `ವಿಫಲ ನಾಯಕ’ ಎಂಬ ಟೀಕೆಗೆ ಗುರಿಯಾಗಿದ್ದರು ಎಂಬುದನ್ನ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಷಾರಾಮಿ ವಿಲ್ಲಾ ಖರೀದಿಸಿದ ಕೊಹ್ಲಿ, ಅನುಷ್ಕಾ – ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ನಾನು ನಾಯಕನಾಗಿದ್ದಾಗ ಉನ್ನತ ಸ್ಪರ್ಧೆಗಳಲ್ಲಿ ತಂಡವನ್ನ ನಾಕೌಟ್ ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರೂ, ಟ್ರೋಫಿಗಳ ಕೊರತೆಯೇ ಚರ್ಚೆಯ ವಿಷಯವಾಗಿತ್ತು. ನಾನು ಯಾವಾಗಲೂ ಪಂದ್ಯವನ್ನು ಗೆಲ್ಲಬೇಕೆಂದು ಆಡುತ್ತಿದೆ. ಆದರೂ 2017ರ ಚಾಂಪಿಯನ್ಸ್ ಟ್ರೋಫಿ, 2019ರ ವಿಶ್ವಕಪ್ (ICC WorldCup) ಹಾಗೂ 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ನಾಯಕನಾಗಿದ್ದೆ. ಆದ್ರೆ ಈ ಮೂರು ಐಸಿಸಿ ಪಂದ್ಯಗಳ ನಂತರ ನನ್ನನ್ನ ವಿಫಲ ನಾಯಕ ಎಂದು ಪರಿಗಣಿಸಲಾಗಿದೆ. ಹಾಗಾಗಿ ನನ್ನನ್ನ ನಾನು ಎಂದಿಗೂ ಜಡ್ಜ್ ಮಾಡೋದಿಲ್ಲ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್

ಟೀಂ ಇಂಡಿಯಾ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತು. ಆದರೆ ಆ ಎರಡೂ ಪಂದ್ಯಗಳಲ್ಲಿ ಎಂ.ಎಸ್ ಧೋನಿ (MS Dhoni) ನಾಯಕನಾಗಿದ್ದರು. ನಾನು ತಂಡದಲ್ಲಿ ಆಟಗಾರನಾಗಿ ವಿಶ್ವಕಪ್ ಗೆದ್ದಿದ್ದೇನೆ. ಆಟಗಾರನಾಗಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇನೆ. 5 ಟೆಸ್ಟ್ ಪಂದ್ಯಗಳನ್ನ ಗೆಲ್ಲಲು ತಂಡದ ಭಾಗವಾಗಿದ್ದೇನೆ. ಆ ದೃಷ್ಟಿಕೋನದಿಂದ ನೋಡುವುದಾದ್ರೆ ವಿಶ್ವಕಪ್ ಗೆಲ್ಲದವರೂ ಇದ್ದಾರೆ ಎಂದು ಹೇಳಿದ್ದಾರೆ.

Share This Article
2 Comments

Leave a Reply

Your email address will not be published. Required fields are marked *