ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಂರ್ದಶನವೊಂದರಲ್ಲಿ ಅಲ್ಲು ಅರ್ಜುನ್ ಬಗ್ಗೆ ನಟಿ ಹಾಡಿ ಹೊಗಳಿ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ಅವರಲ್ಲಿರುವ ಈ ಗುಣವನ್ನು ಕದಿಯುತ್ತೇನೆ ಎಂದು ‘ಪುಷ್ಪ’ (Pushpa) ನಟಿ ಮಾತನಾಡಿದ್ದಾರೆ.
ಇತ್ತೀಚೆಗೆ ರಶ್ಮಿಕಾ (Rashmika Mandanna) ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಆಗ ಯಾರಿಂದ ಏನು ಕದಿಯಲು ಇಷ್ಟಪಡುತ್ತೀರಿ ಎಂದು ಕೇಳಲಾಯಿತು. ಆಗ ಅಲ್ಲು ಅರ್ಜುನ್ (Allu Arjun) ಹೆಸರು ಬಂದಾಗ, ಅವರು ಡ್ಯಾನ್ಸ್ ಮಾಡುವ ರೀತಿ ಇಷ್ಟ. ಅವರಿಂದ ಡ್ಯಾನ್ಸಿಂಗ್ ಸ್ಕಿಲ್ ಕದಿಯಲು ಇಷ್ಟಪಡುತ್ತೇನೆ ಎಂದಿದ್ದಾರೆ.

‘ಪುಷ್ಪ’ ಸಿನಿಮಾದ ಬಳಿಕ ಪುಷ್ಪ 2ನಲ್ಲಿಯೂ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶ್ರೀವಲ್ಲಿ ಪಾತ್ರ ಜನಪ್ರಿಯತೆ ಕೊಟ್ಟಿದೆ. ಮೊದಲ ಭಾಗಕ್ಕಿಂತ 2ನೇ ಭಾಗದಲ್ಲಿ ರಶ್ಮಿಕಾ ಪಾತ್ರ ಮತ್ತಷ್ಟು ಇಂಪಾಕ್ಟ್ ಮಾಡಲಿದೆ. ಪುಷ್ಪ 2 ಬಹುಭಾಷೆಗಳಲ್ಲಿ ಆ.15ರಂದು ರಿಲೀಸ್ ಆಗಲಿದೆ.

