ಸಲಿಂಗಕಾಮ ಸಿನಿಮಾ ನಿರ್ಮಾಣದ ಕನಸು ಬಿಚ್ಚಿಟ್ಟ ಕರಣ್ ಜೋಹರ್

Public TV
2 Min Read

ಮುಂಬೈ: ಬಾಲಿವುಡ್ ಅಂಗಳದಲ್ಲಿ ರೋಮ್ಯಾಂಟಿಕ್ ಸಿನಿಮಾ ಮೂಲಕವೇ ಖ್ಯಾತಿ ಪಡೆದಿರುವ ನಿರ್ದೇಶಕ ಕರಣ್ ಜೋಹರ್ ಸಲಿಂಗಮಕಾಮ ಪ್ರೀತಿಯ ಸಿನಿಮಾ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಸ್ವಿಸ್‍ನ ದಾವೋಸ್ ನಗರದಲ್ಲಿ ನಡೆದಿದ್ದ ಎಕಾನಮಿಕ್ ಫೋರಮ್‍ನಲ್ಲಿ ತಮ್ಮ ಮುಂದಿನ ನಡೆಯ ಕುರಿತಾಗಿ ಹೇಳಿಕೊಂಡಿದ್ದಾರೆ. ಕರಣ್ ಜೋಹರ್ ಅವರ ವೃತ್ತಿ ಜೀವನವು ಹೆಚ್ಚಾಗಿ ರೋಮ್ಯಾಂಟಿಕ್ ಸಿನಿಮಾಗಳನ್ನು ಒಳಗೊಂಡಿದೆ. ಹೀಗಾಗಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಬಾಲಿವುಡ್‍ನ ದೋಸ್ತಾನಾ ಸಲಿಂಗಕಾಮ ಸಿನಿಮಾವಾಗಿದ್ದರೂ, 2008ರಲ್ಲಿಯೇ ಬಿಡುಗಡೆಯಾಗಿತ್ತು. ಆದರೆ ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ರೋಮ್ಯಾನ್ಸ್ ಸಿನಿಮಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಈ ಸಿನಿಮಾದಲ್ಲಿ ಇಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ನಟರನ್ನೂ ಆಯ್ಕೆ ಮಾಡಿಲ್ಲ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

ಸಲಿಂಗಕಾಮಿ ಪ್ರಣಯ ಮತ್ತು ಪ್ರೀತಿಯನ್ನು ಆಧರಿಸಿದ ಕೆಲವು ಸಿನಿಮಾಗಳು ಭಾರತದಲ್ಲಿ ವಿವಿಧ ರೀತಿಯ ವಿವಾದಗಳಿಗೆ ಕಾರಣವಾಗಿವೆ. ಶಬಾನಾ ಆಜ್ಮಿ ಮತ್ತು ನಂದಿತಾ ದಾಸ್ ನಟನೆಯ, ಇಂಡೋ-ಕೆನಡಿಯನ್ ಫಿಲ್ಮ್ ಮೇಕರ್ ದೀಪಾ ಮೆಹ್ತಾ ನಿರ್ಮಾಣದಲ್ಲಿ 1996ರಲ್ಲಿ ತೆರೆಕಂಡ ಫೈರ್ ಸಿನಿಮಾಗೆ ಶಿವಸೇನಾ ಮತ್ತು ಬಜರಂಗ ದಳ ಚಲನಚಿತ್ರ ಬಿಡುಗಡೆಗೆ ಅಡ್ಡಿ ಪಡಿಸಿದವು ಎಂದರು.

ಸಿನಿಮಾ ನಿರ್ಮಾಪಕರು “ನಾನೊಬ್ಬ ಪ್ರಮುಖ ಸಿನಿಮಾ ನಿರ್ಮಾಪಕನಾಗಿದ್ದು, ಸಲಿಂಗಕಾಮ ಪ್ರೀತಿ ವಿಷಯದ ಸಿನಿಮಾ ಮಾಡಬಹುದು” ಅಂತ ತಿಳಿಸಿದ್ದಾರೆ. ಹೀಗಾಗಿ ಸಲಿಂಗಕಾಮಿ ಪ್ರೇಮ ಕಥೆಯನ್ನು ಮಾಡುವ ಇಚ್ಛೆಯನ್ನು ಹೊಂದಿರುವ ಮತ್ತು ಈ ಚಿತ್ರದಲ್ಲಿ ಇಬ್ಬರು ಪ್ರಮುಖ ನಟರು ಅಭಿನಯಿಸಲಿದ್ದಾರೆ. ಆದರೆ ಇಂತವರೇ ಸಿನಿಮಾದಲ್ಲಿ ಅಭಿನಯಿಸಬೇಕು ಅಂತ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಭಾರತೀಯ ಚಲನಚಿತ್ರ ಭ್ರಾತೃತ್ವವನ್ನು ದಾವೋಸ್ ನಲ್ಲಿ ಪ್ರತಿನಿಧಿಸಲು ನನಗೆ ತುಂಬಾ ಖುಷಿಯಾಗಿದೆ. ನಮ್ಮ ದೇಶದ ಸಾಮಾಜಿಕ ಹಾಗೂ ಸಿನಿಮಾ ಉದ್ಯಮಕ್ಕೆ ಬೇಕಾದ ಅಂಶಗಳ ಕುರಿತಾಗಿ ಇಲ್ಲಿನ ಜನರ ಜೊತೆಗೆ ಚರ್ಚೆ ನಡೆಸುತ್ತಿರುವೆ. ಇದು ನನಗೆ ತುಂಬಾ ಜವಾಬ್ದಾರಿ ತಂದುಕೊಟ್ಟಿದೆ. ಅಷ್ಟೇ ಅಲ್ಲದೆ ನನ್ನ ಸಿನಿಮಾವನ್ನು ದಾವೋಸ್ ನಲ್ಲಿ ಪ್ರತಿನಿಧಿಸಲು ಸಂತೋಷವಾಗಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *