ಬೆಂಗಳೂರು: ಮೈಸೂರಿನಲ್ಲಿ ಜ.25 ಕ್ಕೆ ಅಹಿಂದ ಸಮಾವೇಶ ನಡೆಸುವ ವಿಚಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ತಿರುಗೇಟು ನೀಡಿದ್ದಾರೆ.
ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು (Siddaramaiah) ಗುರುತಿಸಿದ್ದು ನಾನು ಅಂತ ಹೇಳಲ್ಲ. ಅವರೇ ಹೇಳಲಿ. ನನ್ನ ಬಗ್ಗೆ ಕಠಿಣವಾಗಿ ಏನು ಬೇಕಾದರೂ ಅವರು ಮಾತಾಡಲಿ. ಅವರ ಮಗ ಸಾವನ್ನಪ್ಪಿದಾಗ ಅವರ ಮನೆಗೆ ಹೋಗಿದ್ದೆ. ಎರಡನೇ ಮಗನ ರಾಜಕೀಯಕ್ಕೆ ತನ್ನಿ ಅಂತ ಹೇಳಿದ್ದೆ. ಅವರು ಬಾದಾಮಿಯಲ್ಲಿ ನಿಂತ್ರು. ಕೋಲಾರ, ಮೈಸೂರು, ಬಾದಾಮಿ ಅಂತ ಚರ್ಚೆ ಆಯ್ತು. ನೀವು ಅಹಿಂದ ನಾಯಕರು. ಆದರೂ ಒಂದು ಕ್ಷೇತ್ರಕ್ಕೆ ಹುಡುಕಾಟ ಮಾಡಿದ್ರಿ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಿಲ್ಲ: ಹೆಚ್‌ಡಿಡಿ
ಎಷ್ಟು ಚರ್ಚೆ ಆಯ್ತು. ನೀವು ಅಹಿಂದ ಲೀಡರ್ ಆಗಿದ್ದರೆ ಎಲ್ಲಿ ಬೇಕಾದರೂ ನಿಲ್ಲಬಹುದಿತ್ತು. ನಿಮ್ಮ ಮಗ ಬಿಟ್ಟ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರಿ. ಇದು ಅಹಿಂದಾ ಎಂದು ಹೆಚ್‌ಡಿಡಿ ವ್ಯಂಗ್ಯವಾಡಿದ್ರು. ನೀವು ಅಹಿಂದ ಲೀಡರ್ ಅಗಿದ್ರೆ ಎಲ್ಲಿ ಬೇಕಾದ್ರೂ ನಿಲ್ಲಬಹುದಿತ್ತು. ಯಾಕೆ ನೀವು ನಿಮ್ಮ ಮಗನನ್ನ ಖಾಲಿ ಮಾಡಿಸಿದ್ರಿ? ದೇವೇಗೌಡ್ರು ಮೂಲೆ ಕೂತ ಅಂತ ಲೆಕ್ಕಾ ಹಾಕಿದ್ರಿ. ಗಟ್ಟಿ ಮನಸ್ಸು ಮಾಡಿದ್ದೇನೆ ಎಂದು ಹಳೆಯದನ್ನ ಕೆದಕಿ ಸಿದ್ದರಾಮಯ್ಯಗೆ ಟಕ್ಕರ್ ಕೊಟ್ಟರು.

