ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸುತ್ತೇನೆ – ಕಾವೇರಿ ಸಮಸ್ಯೆ ಪರಿಹಾರಕ್ಕೆ ಸಂಕಷ್ಟ ಸೂತ್ರ ರಚನೆಯಾಗಬೇಕು: SM ಕೃಷ್ಣ

By
2 Min Read

ಬೆಂಗಳೂರು: ಕಾವೇರಿ ವಿವಾದ (Cauvery Dispute) ಇತ್ಯರ್ಥ ಆಗಬೇಕಾದ್ರೆ ಸಂಕಷ್ಟ ಸೂತ್ರ ರಚನೆ ಮಾಡೋದು ಅವಶ್ಯಕವಾಗಿದೆ ಅಂತ ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಸಲಹೆ ನೀಡಿದ್ದಾರೆ.

ಕಾವೇರಿ ವಿವಾದ ವಿಚಾರದಲ್ಲಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಮಳೆ ಕೊರತೆಯಾದಾಗ ಕಾವೇರಿ ಸದ್ದು ಮಾಡುತ್ತದೆ. ಮಳೆಗಾಲ ಕ್ಷೀಣಿಸಿದಾಗ ನೀರಿಗೆ ಒತ್ತಡ ಬರುತ್ತದೆ. ತಮಿಳುನಾಡಿನವರ ಹೇಳಿಕೆಗಳು ಬಹಳಷ್ಟು ವಸ್ತುಸ್ಥಿತಿಗೆ ನಾಚಿಸುವಂತೆ ಇವೆ. ಕರ್ನಾಟಕ ಸರ್ಕಾರ (Government of Karnataka) ಈ ವಿಚಾರದಲ್ಲಿ ತೆಗೆದುಕೊಂಡಿರೋ ನಿಲುವನ್ನು ನಾನು ಸಮರ್ಥನೆ ಮಾಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

ನಾನು ಸಿಎಂ ಇದ್ದ ಕಾಲದಲ್ಲಿ ಇಂತಹ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆಗ ಅಂದಿನ ಪ್ರಧಾನಿ ವಾಜಪೇಯಿ ಅವರು ಉಭಯ ರಾಜ್ಯಗಳ ಸಿಎಂಗಳನ್ನ ಕರೆದು ಅನೇಕ ಸಭೆಗಳನ್ನ ಮಾಡಿದ್ರು. ಆದರೆ ಸಂಧಾನ ಸಭೆಗಳು ವಿಫಲವಾದವು. ಅಂತಿಮವಾಗಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಹತ್ತಬೇಕಾಯ್ತು. ರಾಜ್ಯ ಸರ್ಕಾರ ಹಿಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ, ನ್ಯಾ. ರವೀಂದ್ರ ಅವರ ಸಲಹೆಗಳನ್ನ ತೆಗೆದುಕೊಂಡು ತಮ್ಮ ಮುಂದಿನ ನಡೆ ಇಡುತ್ತಿದೆ. ಸರ್ಕಾರ ಅದೇ ರೀತಿ ಮುಂದುವರೆಯಬೇಕು ಅಂತ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

ಸಂಕಷ್ಟ ಸೂತ್ರ ರಚಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿವಾದಕ್ಕೆ ಅಂತಿಮವಾದ ತೆರೆ ಎಳೆಯಬೇಕಾದ್ರೆ ಈ ಸಂಕಷ್ಟ ಸೂತ್ರ ಬರಬೇಕು. 4 ರಾಜ್ಯಗಳ ಸಿಎಂ ಜೊತೆ ಮಾತಾಡಿ ಸಂಕಷ್ಟ ಸೂತ್ರ ರಚನೆ ಮಾಡಬೇಕು. ಸಂಕಷ್ಟ ಸೂತ್ರದ ಚೌಕಟ್ಟಿನಲ್ಲಿ ನದಿ ನೀರು ಹಂಚಿಕೆಯಲ್ಲಿ ಯೋಗ್ಯ ತೀರ್ಮಾನ ಮಾಡಬೇಕು ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ವೈಯಕ್ತಿಕ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ: ಪ್ರಿಯಾಂಕ್ ಖರ್ಗೆ ಟೀಕೆ

ಇದೇ ವೇಳೆ ಕಾವೇರಿಗಾಗಿ ಬಂದ್, ಹೋರಾಟ ನಡೆಯುತ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಭಾವಿಕವಾಗಿ ಪ್ರತಿಭಟನೆ, ಬಂದ್ ನಡೆಯುತ್ತದೆ. ಸ್ವಯಂ ಪ್ರೇರಿತವಾಗಿ ಜನರು ಬಂದ್ ಮಾಡ್ತಿದ್ದಾರೆ. ಬಂದ್, ಪ್ರತಿಭಟನೆ ಮೂಲಕ ತಮ್ಮ ನಿಲುವನ್ನು ಜನ ಹೇಳ್ತಿದ್ದಾರೆ. ಅವರಿಗೆ ಶುಭವಾಗಲಿ ಅಂತ ಹಾರೈಸುತ್ತೇನೆ‌ ಎಂದು ಹೇಳಿದರು. ಇದನ್ನೂ ಓದಿ: ನೀರು ಹರಿಸಲು ಸಾಧ್ಯವಿಲ್ಲ; CWMA, ಸುಪ್ರೀಂಗೆ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಸಲ್ಲಿಕೆ

ಇನ್ನೂ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಮಾತನಾಡಿ, ನಾನು ರಾಜಕೀಯದಲ್ಲಿ ಇಲ್ಲ. ಹೀಗಾಗಿ ನನ್ನ ನಿಲುವು ಅಪ್ರಸ್ತುತ ಎಂದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್