ಖ್ಯಾತ ಉದ್ಯಮಿ ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡಿದ್ದೆ – ಪ್ರಿಯಾಂಕಾ ಅಳಿಯನ ವಿವಾದಾತ್ಮಕ ಹೇಳಿಕೆ

Public TV
2 Min Read

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪತಿ ರಾಬರ್ಟ್ ವಾದ್ರಾ ಸೋದರಳಿಯ ತಹಿಸೀನ್ ಪೊನವಾಲಾ ರಿಯಾಲಿಟಿ ಶೋವೊಂದರಲ್ಲಿ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಬಾರಿ ಸುದ್ದಿಯಾಗಿದ್ದಾನೆ. ಈ ಶೋ ನೋಡಿದ ಎಲ್ಲರೂ ತಹಿಸೀನ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಾಣಾವತ್ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಲಾಕ್‍ಆಪ್ ಶೋನಲ್ಲಿ ಪ್ರಿಯಾಂಕ ಗಾಂಧಿ ಅಳಿಯ ಸಹ ಭಾಗವಹಿಸಿದ್ದರು. ಈ ವಾರ ಶೋನಿಂದ ಹೊರನಡೆಯಬೇಕಾದ ವೇಳೆ, ಯಾರಿಗೂ ತಿಳಿಯದ ಸತ್ಯವನ್ನು ಹೇಳಬೇಕು ಎಂದಾಗ, ಖ್ಯಾತ ಉದ್ಯಮಿ ಪತ್ನಿ ಜೊತೆ ಸೆಕ್ಸ್ ಎಂಜಯ್ ಮಾಡಿದ್ದೆ ಎಂಬ ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್ ಸ್ಟೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್ 

ಮಾರ್ಚ್ 12 ರಂದು ಪ್ರಸಾರವಾದ ಎಪಿಸೋಡ್‍ನಲ್ಲಿ ತಹಿಸೀನ್ ‘ಲಾಕ್ ಅಪ್’ ಶೋನಿಂದ ಹೊರಬಿದ್ದಿದ್ದಾರೆ. ಈ ಶೋ ರೂಲ್ಸ್ ಪ್ರಕಾರ ಶೋನಿಂದ ಹೊರಹೋಗುವವರು ತಮ್ಮ ವೈಯಕ್ತಿಕ ರಹಸ್ಯವನ್ನು ಬಹಿರಂಗಪಡಿಸಬೇಕು. ಅದರ ಜೊತೆಗೆ ಸ್ಪರ್ಧಿಯಲ್ಲಿರುವ ಒಬ್ಬರನ್ನು ಎಲಿಮಿನೇಟ್ ಆಗದಂತೆ ರಕ್ಷಿಸ ಬೇಕು. ಆಗ ತಹಸೀನ್ ತನ್ನ ಟ್ರಾನ್ಸ್ ಫ್ರೆಂಡ್ ಸೈಶಾ ಶಿಂಧೆ ಬಚಾವ್ ಮಾಡಲು ನಿರ್ಧರಿಸಿದರು.

ಸತ್ಯ ಬಾಯಿಬಿಟ್ಟ ಅವರು, ಭಾರತದ ಖ್ಯಾತ ಕೈಗಾರಿಕೋದ್ಯಮಿಯೊಬ್ಬರು ಅವರ ಪತ್ನಿಯೊಂದಿಗೆ ಮಲಗಲು ನನ್ನನ್ನು ಕೇಳಿಕೊಂಡಿದ್ದರು. ಅದಕ್ಕಾಗಿ ಅವರು ವೀಕೆಂಟ್ ನಲ್ಲಿ ನೈಟ್ ಕ್ಲಬ್‍ವೊಂದನ್ನು ಫುಲ್ ಬುಕ್ ಮಾಡಿದ್ದರು. ನಾನು ಅವರ ಪತ್ನಿಯೊಂದಿಗೆ ಸೆಕ್ಸ್ ಮಾಡುವುದನ್ನು ನೋಡಬೇಕು ಎಂಬುದೊಂದೆ ಅವರ ಷರತ್ತಾಗಿತ್ತು ಎಂದು ತಿಳಿಸಿದರು.

ಕಂಗನಾ ಸೆಕ್ಸ್ ಬಗ್ಗೆ ಕೇಳಿದಾಗ, ನಾನು ಫುಲ್ ಎಂಜಯ್ ಮಾಡಿದ್ದೆ. ಕೈಗಾರಿಕೋದ್ಯಮಿ ಇದನ್ನು ದೂರದಿಂದ ನೋಡುತ್ತಿದ್ದರು. ಅವರ ಕೆಲಸ ನೋಡುವುದು ಮಾತ್ರವೇ ಆಗಿತ್ತು. ಅಲ್ಲದೇ ನಾನು ಅವರಿಗೆ, ಯಾವುದೇ ಕಾರಣಕ್ಕೂ ನನ್ನನ್ನು ಮುಟ್ಟಬಾರದು, ಸೆಕ್ಸ್ ಮಾಡುವ ವೇಳೆ ಮಧ್ಯಪ್ರವೇಶ ಮಾಡಬಾರದು ಎಂದು ಷರತ್ತು ಹಾಕಿದ್ದೆ. ಹಾಗಾಗಿ ಅವರು ದೂರದಿಂದ ಇದನ್ನು ನೋಡುತ್ತಿದ್ದರು ಎಂಬ ಶಾಕಿಂಗ್ ಹೇಳಿಕೆಯನ್ನು ಕೊಟ್ಟರು.

ಸೆಕ್ಸ್ ಬಗ್ಗೆ ಅವರಿಗೆ ಕೆಲವು ಕಲ್ಪನೆಗಳು ಇದ್ದವು. ನಾನು ಅದನ್ನು ಮಾಡಿದೆ. ಇದರಲ್ಲಿ ನನಗೆ ಯಾವುದೇ ತಪ್ಪು ಇದೆ ಎಂದು ಅನಿಸಿರಲಿಲ್ಲ. ಅಲ್ಲದೇ ಅವರು ತನ್ನ ಪತ್ನಿಯನ್ನು ನನ್ನವಳು ಎಂದು ಭಾವಿಸಿ ಸೆಕ್ಸ್ ಮಾಡಲು ಹೇಳಿದ್ದ. ಅದಕ್ಕೆ ನಾನು ತಲೆಕೆಡಿಸಿಕೊಂಡಿರಲಿಲ್ಲ ಎಂದು ಓಪನ್ ಹೇಳಿಕೆ ಕೊಟ್ಟರು. ಇದನ್ನೂ ಓದಿ: ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ, ನನಗೆ ಯಾವುದೇ ಆಸೆಯಿಲ್ಲ: ಬಿ.ವೈ.ವಿಜಯೇಂದ್ರ

ಈ ಘಟನೆ ನಾನು ಮೋನಿಕಾ ವಡೇರಾ ಅವರನ್ನು ಮದುವೆಯಾಗುವುದಕ್ಕು ಮುನ್ನ ನಡೆದಿತ್ತು. ಮೋನಿಕಾ ಜೊತೆ ಡೇಟಿಂಗ್‍ನಲ್ಲಿದ್ದಾಗ ಈ ವಿಷಯವನ್ನು ನಾನು ತಿಳಿಸಿದ್ದೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *