ಮೈಸೂರು: ನನಗೆ ಬಹಳ ವರ್ಷ ಬದುಕುವ ಆಸೆ. ಜನ ಸೇವೆಗಾಗಿ ನಾನು ಹೆಚ್ಚು ವರ್ಷ ಬದುಕಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಡಾ. ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Speciality Hospital) ಉದ್ಘಾಟಿಸಿ ಮಾತನಾಡುತ್ತಾ, ನನಗೆ ಈಗ 75 ಆಯ್ತು. ಡಯಾಬಿಟಿಕ್ ನಿಂದ 10 ವರ್ಷ ಆಯುಸ್ಸು ಕಡಮೆ ಆಯ್ತು. ಎಷ್ಟು ವರ್ಷ ಬದುಕುತ್ತೇನೋ ಗೊತ್ತಿಲ್ಲ. ಆದರೆ ಜಾಸ್ತಿ ವರ್ಷ ಬದುಕುವ ಆಸೆ ಇದೆ. ಎಲ್ಲರೂ ಆರೋಗ್ಯ ಚೆನ್ನಾಗಿ ಇಟ್ಟು ಕೊಳ್ಳಬೇಕು. ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನಿಡಿದರು.
ಭಾಷಣದಲ್ಲಿ ಆಹ್ವಾನಿಸುವ ಸಂದರ್ಭದಲ್ಲಿ ಜಿ.ಟಿ ದೇವೇಗೌಡ (G.T Devegowda) ರನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು. ಜಿ.ಟಿ ದೇವೇಗೌಡರ ಹೆಸರು ನೋಡಿ ಓ… ಜಿ.ಟಿ ದೇವೇಗೌಡ ಬಂದಿಲ್ವಾ ಎಂದು ನಕ್ಕು ಸುಮ್ಮನಾದರು. ಕರುಣಾಕರ ಅಂಥಾ ಹೆಸರು ಇಟ್ಟರೆ ಸಾಲದು ಕರುಣೆ ಸಹ ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಎಲ್ಲಿ ಆತಂಕಗಳು ಹೆಚ್ಚಾಗುತ್ತೋ ಆಗ ಕ್ಷೇತ್ರ ಪರ್ಯಟನೆ ನಡೆಯುತ್ತೆ: ಸಿದ್ದು ಬಗ್ಗೆ ಬಿ.ವೈ.ರಾಘವೇಂದ್ರ ವ್ಯಂಗ್ಯ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜನಸ್ನೇಹಿ ಆಗಬೇಕು. ಆಸ್ಪತ್ರೆ ನಡೆಸುವವರಿಗೆ ಕೊರೊನಾ ಬಂದ ಮೇಲೆ ಅನುಕೂಲವಾಯ್ತು. ಕೆಲವರು ಆಸ್ಪತ್ರೆ ಮಾಡಲು ಹೊರಟಿದ್ದರು. ಆದರೆ ಕೋವಿಡ್ ಬಂದ ಮೇಲೆ ಆಸ್ಪತ್ರೆಗಳಿಗೆ ಹೆಚ್ಚು ಲಾಭವಾಗಿದೆ. ಕೋವಿಡ್ ನಿಂದ ಜನರಿಗೆ ತೊಂದರೆ ಆಯ್ತು. ಖಾಸಗಿ ಆಸ್ಪತ್ರೆ ಅವರಿಗೆ ಅನುಕೂಲವಾಯ್ತು ಎಂದರು.