ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್

Public TV
1 Min Read

ತಿರುವನಂತಪುರ: ಇ-ಕಾಮರ್ಸ್ ವೆಬ್ ಸೈಟ್‍ನಲ್ಲಿ ಆರ್ಡರ್ ಮಾಡಿದಾಗ ನಿಮಗೆ ತಪ್ಪಾದ ಪ್ರಾಡೆಕ್ಟ್ ಬರುವುದು ಹೊಸ ವಿಚಾರವೇನಲ್ಲ. ಸದ್ಯ ಕೇರಳದ ವ್ಯಕ್ತಿಯೋರ್ವ ಐಷಾರಾಮಿ ಐಫೋನ್ ಆರ್ಡರ್ ಮಾಡಿದ್ದು, ಅವರಿಗೆ ಐಫೋನ್ ಅಲ್ಲಿ ಪಾತ್ರೆ ತೊಳೆಯುವ ಸೋಪು ಮತ್ತು 5 ರೂ. ನಾಣ್ಯ ಸಿಕ್ಕಿದೆ.

ಹೌದು ಅಲುವಾ ನಿವಾಸಿಯಾದ ನೂರುಲ್ ಅಮೀನ್, ಆರ್ಡರ್ ಮಾಡಿದ್ದ ಆಪಲ್ ಸ್ಮಾರ್ಟ್ ಫೋನ್‍ಗಾಗಿ ಕಾಯುತ್ತಿದ್ದರು. ಆದರೆ ಐಫೋನ್ ಬಾಕ್ಸ್‌ನಲ್ಲಿ ಸೋಪನ್ನು ಸ್ವೀಕರಿಸುತ್ತಾರೆ ಎಂಬುವುದನ್ನು ಎಂದೂ ಊಹಿಸಿರಲಿಲ್ಲ. ಇದನ್ನೂ ಓದಿ:  ಬೆಂಗಳೂರಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧ: ಜಗದೀಶ್

5 rs coin

ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ, ಹಸಿರು ಬಣ್ಣದ ವಿಮ್ ಡಿಶ್ ವಾಶ್ ಸೋಪ್ ಮತ್ತು 5 ರೂ. ನಾಣ್ಯ ಇರುವುದನ್ನು ಕಾಣಬಹುದಾಗಿದೆ. ನುರುಲ್ 70,900 ರೂ ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಸ್ಮಾರ್ಟ್ ಫೋನ್ ಬದಲಾಗಿ ಪಾತ್ರೆ ತೊಳೆಯುವ ಸಾಬೂನನ್ನು ಪಡೆದಿದ್ದರು. ಹೀಗಾಗಿ ಎನ್‍ಆರ್‍ಐನಲ್ಲಿ ದೂರು ದಾಖಲಿಸಿ ನಂತರ ಅದೃಷ್ಟವಶಾತ್ ಪಾವತಿಸಿದ ಹಣ ಹಿಂಪಡೆದರು.

ಅಮೀನ್ ಅವರು ಅಕ್ಟೋಬರ್ 12ರಂದು ಐಫೋನ್ ಬುಕ್ ಮಾಡಿದ್ದರು. ಅಕ್ಟೋಬರ್ 15ರಂದು ಆರ್ಡರ್ ಅನ್ನು ಸ್ವೀಕರಿಸಿದ್ದರು.ಇತ್ತೀಚೆಗೆ ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನೂ ಓದಿ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳ ಹೊರಟರೆ ಸಮಯ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ

ಇದೀಗ ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಅಲ್ಲದೇ ನೂರುಲ್ ಸ್ವೀಕರಿಸಬೇಕಿದ್ದ ಫೋನ್ ಅನ್ನು ಜಾರ್ಖಂಡ್ ನಲ್ಲಿ ಸೆಪ್ಟೆಂಬರ್‌ನಿಂದ ಯಾರೋ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊಬೈಲ್ ನ ಐಎಂಇಐ ಸಂಖ್ಯೆಯಿಂದಾಗಿ ಇದೆಲ್ಲವನ್ನು ಕಂಡುಹಿಡಿಯಲು ಸಾಧ್ಯವಾಯಿತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *