ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ನಾನು ಎಲ್ಲಿಯೂ ಕೂಡ ಹೇಳಿಲ್ಲ – ಮಹದೇವಪ್ಪ ಯೂಟರ್ನ್

Public TV
1 Min Read

ಬೆಂಗಳೂರು: ಕನ್ನಂಬಾಡಿ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ (Tippu Sultan) ಎಂದಿದ್ದ ಸಚಿವ ಮಹದೇವಪ್ಪ (HC Mahadevappa) ವ್ಯಾಪಕ ಟೀಕೆ ಬಳಿಕ ಯೂಟರ್ನ್ ಹೊಡೆದಿದ್ದಾರೆ. ಕೆಆರ್‌ಎಸ್ ಡ್ಯಾಂ (KRS Dam) ಕಟ್ಟಿದ್ದು ಟಿಪ್ಪು ಅಂತ ನಾನು ಹೇಳಿಲ್ಲ, ಹೇಳೋದಕ್ಕೂ ಬರೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

1911ರಲ್ಲಿ ಕೆಆರ್‌ಎಸ್ ಕಟ್ಟೋದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲು ಹಾಕಿದರು. ಅವರು ಡ್ಯಾಂ ಕಟ್ಟಲು ಪ್ರಾರಂಭಿಸಿದಾಗ ಅಲ್ಲೊಂದು ಶಿಲಾ ಶಾಸನ ಸಿಕ್ಕಿದೆ. 1794ರಲ್ಲಿ ಟಿಪ್ಪು ಕಾಲದಲ್ಲಿ ಬರೆದ ಪರ್ಷಿಯನ್ ಭಾಷೆಯ ಶಿಲಾ ಶಾಸನ. ಅದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪ ಇದೆ. ಅದನ್ನೂ ಕೂಡ ಕೆಆರ್‌ಎಸ್‌ನಲ್ಲಿಯೇ ಇಡಲಾಗಿದೆ. ನಾನು ಎಲ್ಲಿಯೂ ಕೂಡ ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ಹೇಳಿಯೇ ಇಲ್ಲ ಎಂದರು. ಇದನ್ನೂ ಓದಿ: ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ

ಟಿಪ್ಪು ಕಟ್ಟಿದ್ದು ಅಲ್ಲವೇ ಅಲ್ಲ, ಆದರೆ ಟಿಪ್ಪುಗೂ ಕೂಡ ಅದೇ ಥರದ ಕನಸು ಇತ್ತು ಎಂಬುದಷ್ಟೇ ಹೇಳಿದ್ದು. ಇದರ ನೈಜತೆಯ ಬಗ್ಗೆ ಇತಿಹಾಸಕಾರರು ಹೇಳಬೇಕು. ಕೆಆರ್‌ಎಸ್ ಡ್ಯಾಂ ಕಟ್ಟಿದ್ದು ನಮ್ಮ ಇಂಜಿನಿಯರ್‌ಗಳು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಡ್ಯಾಂನ ಎಸ್ಟಿಮೇಟ್ ಹಾಕಿ ಎಷ್ಟು ಜಮೀನು ಬೇಕು ಎಂದು ತೀರ್ಮಾನಿಸಿ ಕಟ್ಟಿದ್ದು. ಆದರೆ ನಾನು ಅಲ್ಲಿ ಇಟ್ಟಿರುವ ಶಿಲಾ ಶಾಸನದ ಬಗ್ಗೆ ಮಾತ್ರ ಹೇಳಿದ್ದೇನೆ. ಬಿಜೆಪಿಯವರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ. ನಾನು ಅನಗತ್ಯ ಗೊಂದಲ ಇರಬಾರದು ಎಂದು ಮಾತ್ರ ಹೇಳಿದ್ದೇನೆ. ಯಾರನ್ನೋ ಓಲೈಸಲು ಸಮಾಧಾನಪಡಿಸಲು ಹೇಳಿಲ್ಲ ಎಂದು ಬಿಜೆಪಿಗರು, ರಾಜವಂಶಸ್ಥ ಯದುವೀರ್‌ಗೆ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ

Share This Article