ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ: ನಿಖಿಲ್‌ ಕುಮಾರಸ್ವಾಮಿ

Public TV
1 Min Read

ರಾಮನಗರ: ತಾಯಿ ಇದ್ದಕ್ಕಿದ್ದಂತೆ ಘೋಷಣೆ ಮಾಡಿದ್ದಾರೆ. ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ(Nikhil Kumaraswamy) ಹೇಳಿದ್ದಾರೆ.

ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ಪಂಚರತ್ನ ಯಾತ್ರೆ‌ಯನ್ನು ಉದ್ದೇಶಿಸಿ ಮಾತನಾಡಿದ್ದ ಅನಿತಾ ಕುಮಾರಸ್ವಾಮಿ(Anitha Kumaraswamy) ರಾಮನಗರ(Ramangara) ಕ್ಷೇತ್ರದಿಂದ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾನೆ ಎಂದು ಘೋಷಣೆ ಮಾಡಿದ್ದರು.

ತನ್ನ ಹೆಸರನ್ನು ಘೋಷಣೆ ಮಾಡಿದ ಬಳಿಕ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ತಾಯಿ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇವತ್ತಿಗೂ ನನ್ನ ಅಭಿಪ್ರಾಯದಲ್ಲಿ ರಾಮನಗರಕ್ಕೆ ಸೂಕ್ತ ಅಭ್ಯರ್ಥಿ ಅಂದ್ರೆ ಅದು ಕುಮಾರಣ್ಣ. ನಮ್ಮ ತಂದೆ ಜನತೆ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡಿದ್ದಾರೆ ಎಂದು ಹೇಳಿ ಅವರು ಗದ್ಗದಿತರಾದರು. ಇದನ್ನೂ ಓದಿ: ಪುತ್ರನಿಗಾಗಿ ಅನಿತಾ ಕುಮಾರಸ್ವಾಮಿ ತ್ಯಾಗ – ರಾಮನಗರದಿಂದ ನಿಖಿಲ್‌ ಸ್ಪರ್ಧೆ

ನನ್ನ ಸ್ಪರ್ಧೆ ಪಕ್ಷಕ್ಕೆ ಬಿಟ್ಟ ತೀರ್ಮಾನ. ನನಗೆ ಪಕ್ಷದ ಸಂಘಟನೆ ಜವಾಬ್ದಾರಿ ನೀಡಲಾಗಿದೆ. ಯುವಘಟಕದ ರಾಜ್ಯಾಧ್ಯಕ್ಷನ್ನಾಗಿ ಮಾಡಿದ್ದಾರೆ. ನಾನೂ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಮಾಡುತ್ತಿದ್ದೇನೆ. ಕುಮಾರಣ್ಣ ಪಂಚರತ್ನ ರಥಯಾತ್ರೆ ಮಾಡುತ್ತಿದ್ದಾರೆ. ಹಾಗಾಗಿ ರಾಮನಗರ ಜಿಲ್ಲೆಯಾದ್ಯಂತ ಹೆಚ್ಚು ಸಂಚಾರ ಮಾಡ್ತಿದ್ದೇನೆ. ಎರಡೂ ರಾಷ್ಟ್ರೀಯ ಪಕ್ಷಗಳ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂದರು.

ಹಿಂದೆ ದೇವೇಗೌಡರ ಪರವಾಗಿ ನಿಂತಿದ್ದೀರಿ. ನಂತರ ಎರಡು ಬಾರಿ ಕುಮಾರಸ್ವಾಮಿ(HD Kumaraswamy) ಪರ ನಿಂತಿದ್ದೀರಿ. ಕುಮಾರಣ್ಣನನ್ನು ರಾಜಕೀಯವಾಗಿ ಬೆಳೆಸಿದ್ದೀರಿ. ಈಗ ತಾಯಿ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನನಗೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದು ಬೇಡಿಕೊಂಡರು.

ನನಗೆ ಮಂಡ್ಯ ಜಿಲ್ಲೆಗೆ ಅನ್ಯಾಯ ಮಾಡಿಲ್ಲ. ನನ್ನ ಕೊನೆ ಉಸಿರು ಇರುವವರೆಗೂ ನಾನು ಮಂಡ್ಯದ(Mandya) ಋಣ ತೀರಿಸಲು ಆಗುವುದಿಲ್ಲ. ರೈತರಿಗೆ ಯುವಕರಿಗೆ ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಕೆಲಸ ಆಗಬೇಕು. ಅದಕ್ಕಾಗಿ ಕುಮಾರಣ್ಣ ನೇತೃತ್ವದಲ್ಲಿ ಸ್ವತಂತ್ರ ಸರ್ಕಾರ ರಚನೆಯಾಗಬೇಕು. ಸರ್ವ ಜನಾಂಗದ ಶಾಂತಿಯ ತೋಟದಂತೆ ನಾವು ಆಡಳಿತ ನೀಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಭರವಸೆ ನೀಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *