ಜೀವನದ ಪ್ರತಿ ಹಂತದಲ್ಲೂ ಸಂಗಾತಿ ಜೊತೆಯಾಗಿರಬೇಕು: ಲೈಫ್ ಪಾರ್ಟ್ನರ್ ಬಗ್ಗೆ ರಶ್ಮಿಕಾ ಮಾತು

Public TV
1 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಚಿತ್ರದ ಸಕ್ಸಸ್ ಖುಷಿಯ ನಡುವೆ ತಮ್ಮ ಲೈಫ್ ಪಾರ್ಟ್ನರ್ ಹೇಗಿರಬೇಕು? ಎಂದು ನಟಿ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ. ನನ್ನ ಸಂಗಾತಿ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿರಬೇಕು ಎಂದು ಸಂಗಾತಿ ಬಗ್ಗೆ ಬಣ್ಣಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಿಂದ ಹೊಸಕೆರೆಹಳ್ಳಿ ಫ್ಲ್ಯಾಟ್‌ಗೆ ಆಗಮಿಸಿದ ದರ್ಶನ್

ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನ್ನ ಸಂಗಾತಿ ನನ್ನನ್ನು ಬೆಂಬಲಿಸಬೇಕು. ಯಾವಾಗಲೂ ನನ್ನನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಕಷ್ಟದ ಸಮಯದಲ್ಲಿ ನನ್ನನ್ನು ಬೆಂಬಲಿಸಬೇಕು. ಪರಸ್ಪರ ಗೌರವಿಸಬೇಕು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಹೊಂದಿಲ್ಲದಿದ್ದರೆ, ನಾವು ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲ ಎಂದು ಮಾತನಾಡಿದ್ದಾರೆ.

ಪ್ರೀತಿ ಎಂದರೆ ಸಂಗಾತಿಯೊಂದಿಗಿನ ಗಟ್ಟಿಯಾದ ಬಾಂಧವ್ಯ. ಜೀವನದ ವಿವಿಧ ಹಂತಗಳಲ್ಲಿ ಯಾರಾದರೂ ನಮ್ಮೊಂದಿಗೆ ಇರೋದೇ ಪ್ರೀತಿ. ಬಂಡೆಯಂತೆ ನಮ್ಮೊಂದಿಗೆ ನಿಲ್ಲಬೇಕು ಮತ್ತು ಜೀವನದ ಎಲ್ಲಾ ಸಂದರ್ಭಗಳನ್ನು ಜೊತೆಯಾಗಿ ಎದುರಿಸಬೇಕು ಎಂದು ಬಾಳ ಸಂಗಾತಿ ಹೇಗಿರಬೇಕು ಎಂದು ಮಾತನಾಡಿದ್ದಾರೆ. ಇನ್ನೂ ಸಾಕಷ್ಟು ವರ್ಷಗಳಿಂದ ರಶ್ಮಿಕಾ ಹೆಸರು ವಿಜಯ್‌ ದೇವರಕೊಂಡ ಜೊತೆ ತಳುಕು ಹಾಕಿಕೊಂಡಿದೆ. ಆದರೆ ಇದುವರೆಗೂ ಇಬ್ಬರೂ ರಿಲೇಷನ್‌ಶಿಪ್‌ ಇದ್ದಾರಾ? ಇಲ್ವಾ? ಎಂಬುದರ ಬಗ್ಗೆ ಕ್ಲ್ಯಾರಿಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಗುಡ್‌ ನ್ಯೂಸ್‌ ಸಿಗುತ್ತಾ? ಎಂದು ಕಾದುನೋಡಬೇಕಿದೆ.

ಇನ್ನೂ ಡಿ.5ರಂದು ರಿಲೀಸ್ ಆಗಿದ್ದ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಫಹಾದ್ ಫಾಸಿಲ್, ತಾರಕ್ ಪೊನ್ನಪ್ಪ, ಜಗಪತಿ ಬಾಬು ನಟಿಸಿದರು. ಈ ಚಿತ್ರ ಇದೀಗ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.

Share This Article