ನನಗೆ ಲವ್ವರ್ ಬೇಕು, ನಾನು ಬರಲ್ಲ.. ನನ್ನನ್ನು ಬಿಟ್ಬಿಡಿ- ಪ್ರಿಯತಮೆಯ ರಂಪಾಟ!

Public TV
1 Min Read

ಚಿಕ್ಕಬಳ್ಳಾಪುರ: ನನಗೆ ಲವ್ವರ್ ಬೇಕು, ನಾನು ನಿಮ್ಮ ಜೊತೆ ಬರಲ್ಲ, ನನ್ನನ್ನ ಬಿಟ್ಬಿಡಿ ಇಲ್ಲ ಅಂದ್ರೆ ಸಾಯ್ತೀನಿ ಅಂತ ತಂದೆಯ ಜೊತೆ ಯುವತಿ ರಂಪಾಟ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ ನಡೆದಿದೆ.

ಕಲ್ಲೂಡಿ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಾಗೂ ವಿದುರಾಶ್ವತ್ಥ ಗ್ರಾಮದ ಆಟೋ ಚಾಲಕನನ್ನು ಕಳೆದ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಕಳೆದ ನಾಲ್ಕು ದಿನಗಳ ಹಿಂದೆ ಯುವತಿ ಯುವಕನ ಜೊತೆ ಪರಾರಿಯಾಗಿ ಯುವಕನ ಮನೆ ಸೇರಿದ್ದಳು.

ವಿಷಯ ತಿಳಿದು ಮಗಳ ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ಬಂದ ತಂದೆ ಹಾಗೂ ಸಂಬಂಧಿಕರ ಬಳಿ ಯುವತಿ ರಂಪಾಟ ಮಾಡಿದ್ದಾಳೆ. ಯುವತಿಯ ತಂದೆ ಪರಿ ಪರಿಯಾಗಿ ಬೇಡಿಕೊಂಡರೂ ಕರಗದ ಯುವತಿಯ ಮನ ನಾನು ಇಲ್ಲೇ ಇರ್ತೀನಿ. ಲವ್ವರ್ ಜೊತೆ ಬದುಕೋಕೆ ಬಿಡಿ ಇಲ್ಲಂದ್ರೆ ಸಾಯ್ತೀನಿ ಅಂತ ಅವಲತ್ತುಕೊಂಡಿದ್ದಾಳೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಇಬ್ಬರನ್ನ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ. ದ್ವಿತೀಯ ಪಿಯುಸಿ ಮುಗಿಸಿ ಹಾಗೂ ಯುವಕ ಸಹ ಉತ್ತಮ ಸ್ಥಾನಕ್ಕೆ ಬರಲಿ ತದ ನಂತರ ನಾವೇ ಮದುವೆ ಮಾಡಿಕೊಡ್ತೀವಿ ಇಬ್ಬರಿಗೂ ಸಮಾಧಾನಪಡಿಸಿದ ಪೋಷಕರು ಯುವತಿಯನ್ನ ತಂದೆ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಆದ್ರೆ ಮನೆಗೆ ಹೋದ ಯುವತಿ ಮನಸ್ಸನ್ನ ಬದಲಾಯಿಸಬಿಡಹುದು ಅಂತ ಯುವಕ ತನ್ನ ಸ್ನೇಹಿತರ ಮೂಲಕ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ತನ್ನ ಪ್ರೇಮ ಪ್ರಕರಣವನ್ನ ಬಯಲು ಮಾಡಿಸಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *